Viral: ಅಪ್ಪ ನನಗೆ ಅಮೆಜಾನ್‌ನಲ್ಲಿ ಕೆಲಸ ಸಿಕ್ತು; ಈ ಸಿಹಿ ಸುದ್ದಿ ಕೇಳಿ ತಂದೆ ಕೊಟ್ಟ ರಿಪ್ಲೈ ಹೇಗಿತ್ತು ನೋಡಿ

ಪ್ರತಿಯೊಬ್ಬ ತಮ್ಮ ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಜಾಬ್ ಗಿಟ್ಟಿಸಿಕೊಳ್ಳಲಿ ಎಂದು ಬಯಸುತ್ತಾರೆ. ತಮ್ಮ ಕನಸಿನಂತೆ ಮಕ್ಕಳು ಲೈಫ್ ನಲ್ಲಿ ಸೆಟ್ಲ್ ಆದರೆ ಹೆತ್ತವರು ಖುಷಿ ಪಡುತ್ತಾರೆ. ಆದರೆ ಐಐಟಿಯಲ್ಲಿ ಪದವಿ ಪಡೆದಿರುವ ಯುವಕ ಅಮೆಜಾನ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ. ಆದರೆ ಈ ಖುಷಿಯ ವಿಚಾರ ತಂದೆಗೆ ಹೇಳುತ್ತಿದ್ದಂತೆ ಅಪ್ಪ ಕೊಟ್ಟ ರಿಯಾಕ್ಷನ್ ನೋಡಿದ್ರೆ ನೀವು ಶಾಕ್ ಆಗ್ತೀರಾ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಅಪ್ಪ ನನಗೆ ಅಮೆಜಾನ್‌ನಲ್ಲಿ ಕೆಲಸ ಸಿಕ್ತು; ಈ ಸಿಹಿ ಸುದ್ದಿ ಕೇಳಿ ತಂದೆ ಕೊಟ್ಟ ರಿಪ್ಲೈ ಹೇಗಿತ್ತು ನೋಡಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Oct 27, 2025 | 3:23 PM

ಪ್ರತಿಯೊಬ್ಬ ತಂದೆ ತಾಯಂದಿರು ಮಕ್ಕಳ ಸಣ್ಣ ಪುಟ್ಟ ಗೆಲುವನ್ನು ಸಂಭ್ರಮಿಸುತ್ತಾರೆ. ಆದರೆ ಕೆಲವರು ತಮ್ಮ ಖುಷಿಯನ್ನು ತೋರ್ಪಡಿಸಿಕೊಳ್ಳುತ್ತಾರೆ, ಇನ್ನು ಕೆಲವರು ಮನಸ್ಸಿನಲ್ಲಿ ತಮ್ಮ ಮಕ್ಕಳ ಬಗ್ಗೆ ಹೆಮ್ಮೆ ಪಟ್ಟು ಕೊಳ್ತಾರೆ. ಇಲ್ಲೊಬ್ಬ ತಂದೆಯೂ ಮಗನಿಗೆ ಕೆಲಸ (job) ಸಿಗುತ್ತಿದ್ದಂತೆ ನೀಡಿದ ರಿಯಾಕ್ಷನ್ ನೋಡಿದ್ರೆ, ಇದೇನಪ್ಪಾ ಹೀಗೆ ಎಂದು ನಿಮಗೆ ಅನಿಸದೇ ಇರದು. ಶಿವಾಂಶು ರಂಜನ್ (Shivanshu Ranjan) ಎಂಬ ಯುವಕನು ಓದು ಪೂರ್ಣಗೊಳಿಸಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ. ಅಮೆಜಾನ್‌ನಲ್ಲಿ ಕೆಲಸ ಸಿಗುತ್ತಿದ್ದಂತೆ ಈ ಖುಷಿಯ ವಿಚಾರವನ್ನು ತಂದೆಯೊಂದಿಗೆ ಹಂಚಿಕೊಂಡಿದ್ದಾನೆ. ಆದರೆ ಈ ಯುವಕನ ತಂದೆ ಮಾತ್ರ ನೀಡಿದ ರಿಯಾಕ್ಷನ್ ಭಾರತೀಯ ಪೋಷಕರ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ಸಿಹಿ ಸುದ್ದಿ ಹೇಳಿದ ಮಗನಿಗೆ ತಂದೆ ಕೊಟ್ಟ ರಿಪ್ಲೈ ನೋಡಿ

ಐಐಟಿ ಕೆಮಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಶಿವಾಂಶು ರಂಜನ್, ಇತ್ತೀಚೆಗೆ SDE-1 ಹುದ್ದೆಗೆ ಪ್ರೀ ಪ್ಲೇಸ್‌ಮೆಂಟ್‌ ಆಫರ್  ಪಡೆದಿದ್ದಾನೆ. ಈ ಖುಷಿಯ ವಿಚಾರವನ್ನು ತಂದೆಗೆ ಹೇಳಿದ್ದಾನೆ. ತಂದೆಯೊಂದಿಗಿನ ವಾಟ್ಸಾಪ್ ಸಂಭಾಷಣೆಯ ಸ್ಕ್ರೀನ್‌ಶಾಟ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಂಜನ್ ತನ್ನ ತಂದೆಗೆ ನನಗೆ ಅಮೆಜಾನ್‌ನಲ್ಲಿ ಕೆಲಸ ಸಿಕ್ಕಿದೆ ಎಂದು ಸಂದೇಶ ಕಳುಹಿಸಿದ್ದಾನೆ. ಆದರೆ ಹೆಚ್ಚು ಉತ್ಸಾಹಭರಿತ ಪ್ರತಿಕ್ರಿಯೆಯನ್ನು ನಿರೀಕ್ಷಿಸಿದ್ದು, ಆತನ ತಂದೆ ಸರಿ ಅನ್ನೋ ಉತ್ತರ ಮಾತ್ರ ನೀಡಿದ್ದಾರೆ.

ಇದನ್ನೂ ಓದಿ
ಅಭ್ಯರ್ಥಿ ಆಯ್ಕೆಯ ಕಠಿಣ ಸಂದರ್ಭ ವಿವರಿಸಿದ ಸಂದರ್ಶಕಿ
ಪರ್ಮಿಷನ್ ಕೇಳದೇ ವರ್ಕ್ ಫ್ರಮ್ ಹೋಮ್ ಮಾಡಿದ ಉದ್ಯೋಗಿ; ಗರಂ ಆದ ಸಿಇಒ
ಉದ್ಯೋಗ ಸ್ಥಳದಲ್ಲಿ ತನ್ನನ್ನು ನಡೆಸಿಕೊಳ್ಳುವ ರೀತಿ ಇದು ಎಂದ ವ್ಯಕ್ತಿ
ಹೊಸ ಉದ್ಯೋಗಿಯ ವರ್ತನೆಗೆ ಮ್ಯಾನೇಜರ್ ಶಾಕ್!

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇದನ್ನೂ ಓದಿ:ಒಳ್ಳೆಯವರಂತೆ ಕಂಡರೂ ಸಂದರ್ಶನದಲ್ಲಿ ಅಭ್ಯರ್ಥಿಯನ್ನು ರಿಜೆಕ್ಟ್ ಮಾಡಿದ ಹಿಂದಿನ ಕಾರಣ ವಿವರಿಸಿದ ಮಹಿಳೆ

ಅಕ್ಟೋಬರ್ 24 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಇದುವರೆಗೆ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಹೊಟ್ಟೆ ಕಿಚ್ಚು ಪಡುವ ಸ್ನೇಹಿತನಿಂದ ಈ ರೀತಿಯ ಪ್ರತಿಕ್ರಿಯೆಗಳು ಬರುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಬಹುತೇಕ ಭಾರತೀಯ ಪೋಷಕರು ಹೀಗೆಯೇ ಎಂದು ಕಾಮೆಂಟ್ ಮಾಡಿದ್ದಾರೆ. ನಿಮ್ಮ ತಂದೆಯೂ ಅವರ ಜೀವನದಲ್ಲೂ ಇದನ್ನೆಲ್ಲಾ ನೋಡಿದ್ದಾರೆ. ಹೀಗಾಗಿಯೇ ಅವರನ್ನು ಈ ವಿಚಾರ ರೋಮಾಂಚನಗೊಳಿಸುವುದಿಲ್ಲ. ಕೆಲವು ವರ್ಷಗಳ ನಂತರ ನಿಮ್ಮ ಪ್ರತಿಕ್ರಿಯೆಯೂ ಅದೇ ಆಗಿರುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ