ವಯಸ್ಸು ಕೇವಲ ಸಂಖ್ಯೆಯಷ್ಟೇ! ಆರೋಗ್ಯ ಮತ್ತು ಮನಸ್ಸಿದ್ದರೆ ಯಾವ ವಯಸ್ಸಿನಲ್ಲಿಯೂ ಸಹ ನೃತ್ಯ ಮಾಡುತ್ತಾ ಖುಷಿಯಾಗಿರಬಹುದು ಎಂಬುದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ಇದೀಗ ವೈರಲ್ ಆದ ವಿಡಿಯೋ ಕೂಡಾ ಅಂಥದ್ದೇ. 70 ವರ್ಷದ ವೃದ್ಧೆ ತನ್ನ ಮೊಮ್ಮಗನೊಂದಿಗೆ ನೃತ್ಯ ಮಾಡುತ್ತಿದ್ದಾಳೆ. ಹೃದಯಸ್ಪರ್ಶಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಬಾಲಿವುಡ್ ಹಾಡಿಗೆ ಅಜ್ಜಿ ಮತ್ತು ಮೊಮ್ಮಗ ನೃತ್ಯ ಮಾಡಿದ್ದಾರೆ. ಅಜ್ಜಿಯ ಅಭಿನಯ ನೋಡಿದ ನೆಟ್ಟಿಗರು ಹಾಡಿ ಹೊಗಳಿದ್ದಾರೆ. ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು ನೆಟ್ಟಿಗರು ಇಷ್ಟಪಟ್ಟು ವಿಡಿಯೋ ನೋಡಿದ್ದಾರೆ. ಜತೆಗೆ ಕಾಮೆಂಟ್ಸ್ ವಿಭಾಗದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಅಜ್ಜಿ ಮೊಮ್ಮಗನ ಜೋಡಿ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ. ಇನ್ಸ್ಟಾಗ್ರಾಂ, ಫೇಸ್ಬುಕ್, ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ. ಅಜ್ಜಿ ಮೊಮ್ಮಗನ ಈ ಬಾಂಧ್ಯವ ಯಾವಾಗಲೂ ಹೀಗೆ ಇರಲಿ ಎಂದು ಕೆಲವರು ಹೇಳಿದ್ದಾರೆ. ತುಂಬಾ ಸುಂದರವಾಗಿದೆ ಎಂದು ಇನ್ನೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅಜ್ಜಿ ಮೊಮ್ಮಗನ ನೃತ್ಯ ಅದ್ಭುತವಾಗಿದೆ. ಹೃದಯ ಕದ್ದಿದೆ ಎಂದು ಓರ್ವರು ಹೇಳಿದ್ದಾರೆ. ವಿಡಿಯೋವಿಗೆ ನಾನಾ ರೀತಿಯ ಕಾಮೆಟ್ಸ್ಗಳು ಬಂದಿದ್ದು ನೆಟ್ಟಿಗರು ಹೆಚ್ಚು ಇಷ್ಟಪಟ್ಟು ವಿಡಿಯೋ ನೋಡಿದ್ದಾರೆ. ಕೆಲವು ದೃಶ್ಯಗಳು ಹಾಗೆಯೇ ಮನಗೆಲ್ಲುತ್ತದೆ. ಜತೆಗೆ ಸದಾ ಕಾಲ ನೆನಪಿನಲ್ಲಿರುತ್ತದೆ. ಅಂಥಹುದೇ ವಿಡಿಯೋ ಇದಾಗಿದೆ.
ಇದನ್ನೂ ಓದಿ:
Viral News: 61 ವರ್ಷದ ವೃದ್ದೆಯನ್ನು ಮದುವೆಯಾದ 24 ವರ್ಷದ ಯುವಕ; ವಿವಾಹದ ಸಂಭ್ರಮ ಟಿಕ್ ಟಾಕ್ನಲ್ಲಿ ಲೈವ್
Viral Video: ಸಲೂನ್ಗೆ ಬಂದು ಕಿಮ್ ಜಾಂಗ್ ಉನ್ ಹೆಸರು ಹೇಳಿದ ಯುವಕ; ಬಳಿಕ ನಡೆದಿದ್ದು ಅದ್ಭುತ !
(Grandmother and son dance video goes viral in social media)