Viral News: 61 ವರ್ಷದ ವೃದ್ದೆಯನ್ನು ಮದುವೆಯಾದ 24 ವರ್ಷದ ಯುವಕ; ವಿವಾಹದ ಸಂಭ್ರಮ ಟಿಕ್​ ಟಾಕ್​ನಲ್ಲಿ ಲೈವ್​

TV9 Digital Desk

| Edited By: shruti hegde

Updated on:Sep 22, 2021 | 8:01 AM

ನಾವು ನಮ್ಮ ಮದುವೆಯ ಸಂಭ್ರಮವನ್ನು ಟಿಕ್ ಟಾಕ್​ನಲ್ಲಿ ಲೈವ್ ಬಿಟ್ಟಿದ್ದೆವು. ನಮ್ಮ ಸ್ನೇಹಿತರು ವಿವಾಹಕ್ಕೆ ಆಗಮಿಸಿದ್ದರು. ಮದುವೆಯ ಊಟವನ್ನು ಸಂತೋಷದಿಂದ ಸವಿದೆವು ಎಂದು 24 ವರ್ಷದ ಕುರಾನ್ ಹೇಳಿದ್ದಾರೆ.

Viral News: 61 ವರ್ಷದ ವೃದ್ದೆಯನ್ನು ಮದುವೆಯಾದ 24 ವರ್ಷದ ಯುವಕ; ವಿವಾಹದ ಸಂಭ್ರಮ ಟಿಕ್​ ಟಾಕ್​ನಲ್ಲಿ ಲೈವ್​

61 ವರ್ಷದ ವೃದ್ಧೆ 24 ವರ್ಷದ ತನ್ನ ಬಾಯ್ ಫ್ರೆಂಡ್ ಜತೆಗೆ ಮದುವೆಯಾಗಿದ್ದಾಳೆ. ಇವರ ವಯಸ್ಸಿನ ಅಂತರಕ್ಕೆ ನೆಗೆಟಿವ್ ಕಾಮೆಂಟ್ಸ್​ಗಳು ವ್ಯಕ್ತವಾಗುತ್ತಿವೆ. ಕುರಾನ್ ಮಚೀನ್ (24) ಹಾಗೂ ಚೆರಿಲ್ (61) ವಿವಾಹವಾಗಿದ್ದಾರೆ. ಲವ್ ಮ್ಯಾರೇಜ್ ಆದ ಇವರು ತಮ್ಮ ವಿವಾಹದ ಸಂಭ್ರಮವನ್ನು ಟಿಕ್ ಟಾಕ್​ನಲ್ಲಿ ಲೈವ್ ಬಿಟ್ಟಿದ್ದಾರೆ. ಸೆಪ್ಟೆಂಬರ್ 3ರಂದು ಅಮೆರಿಕಾದಲ್ಲಿ ಇವರು ಮದುವೆಯಾಗಿರುವ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.

ಇಬ್ಬರು ಪರಸ್ಪರ ಇಷ್ಟಪಟ್ಟು ಮದುವೆಯಾಗಿರುವುದಾಗಿ ಹೇಳಿದ್ದಾರೆ. ವರ ಕುರಾನ್ ತಲೆ ಕೂದಲು ಮತ್ತು ಗಡ್ಡಕ್ಕೆ ಬಣ್ಣ ಹಚ್ಚಿ ವಿವಾಹಕ್ಕೆ ಸಿದ್ಧರಾಗಿದ್ದರು. ವಧು 61 ವರ್ಷದ ಚೆರಿಲ್ ಬಿಳಿ ಬಣ್ಣದ ಡ್ರೆಸ್ ತೊಟ್ಟು, ಕರ್ಲಿ ಹೇರ್ ಸ್ಟೈಲ್​ನೊಂದಿಗೆ ರೆಡಿಯಾಗಿದ್ದರು.

ನಾವು ನಮ್ಮ ಮದುವೆಯ ಸಂಭ್ರಮವನ್ನು ಟಿಕ್ ಟಾಕ್​ನಲ್ಲಿ ಲೈವ್ ಬಿಟ್ಟಿದ್ದೆವು. ನಮ್ಮ ಸ್ನೇಹಿತರು ವಿವಾಹಕ್ಕೆ ಆಗಮಿಸಿದ್ದರು. ಮದುವೆಯ ಊಟವನ್ನು ಸಂತೋಷದಿಂದ ಸವಿದೆವು ಎಂದು 24 ವರ್ಷದ ಕುರಾನ್ ಹೇಳಿದ್ದಾರೆ.

2012ರಲ್ಲಿ ಇವರಿಬ್ಬರು ಮೊದಲಿಗೆ ಭೇಟಿಯಾಗಿದ್ದರು. ಆಗ ಕುರಾನ್ ಅವರಿಗೆ ಕೇವಲ 15 ವರ್ಷವಾಗಿತ್ತು. ಅವರು ಫಾಸ್ಟ್ ಫುಡ್ ರೆಸ್ಟೋರೆಂಟ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಚೆರಿಲ್ ಮಗ ಕ್ರಿಸ್ ಆ ರೆಸ್ಟೋರೆಂಟ್ಅನ್ನು ನೋಡಿಕೊಳ್ಳುತ್ತಿದ್ದರು. ಆ ನಂತರ ಅವರು ಎಂದಿಗೂ ಭೇಟಿ ಆಗಿರಲಿಲ್ಲ. ಬಳಿಕ 2020 ನವೆಂಬರ್ 4ರಂದು ಅವರು ಅಂಗಡಿಯೊಂದರಲ್ಲಿ ಪುನಃ ಭೇಟಿಯಾಗಿದ್ದಾರೆ. ಈ ವರ್ಷದ ಏಪ್ರಿಲ್​ನಲ್ಲಿ ಇಬ್ಬರು ಪರಸ್ಪರ ತಮ್ಮ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.

ನಾನು ಆಕೆಯನ್ನು ಒಪ್ಪಿಕೊಳ್ಳಲು ಹಲವಾರು ಕಾರಣಗಳಿವೆ. ಅವಳು ಸುಂದರವಾಗಿದ್ದಾಳೆ, ಬಲವಾಗಿದ್ದಾಳೆ, ಪ್ರಾಮಾಣಿಕಳು, ಕರುಣಾಮಯಿ ಕೂಡಾ ಹೌದು. ನನಗೆ ಇದು ಮೊದಲನೇಯ ಮದುವೆ. ಅವಳು ಈ ಹಿಂದೆ ಮದುವೆ ಆಗಿದ್ದಳು ಎಂದು ಕುರಾನ್ ಹೇಳಿದ್ದಾರೆ.

61 ವರ್ಷದ ಚೆರಿಲ್ ಅವರ ಏಳು ಮಕ್ಕಳಲ್ಲಿ ಮೂವರು ದಂಪತಿಗಳು ಇವರ ಮದುವೆಯನ್ನು ಒಪ್ಪಿಕೊಂಡಿದ್ದಾರೆ. ಕೆಲವರು ನಮ್ಮ ವಿವಾಹಕ್ಕೆ ಪ್ರೋತ್ಸಾಹಿಸಿದರೆ ಇನ್ನು ಕೆಲವರು ಒಪ್ಪಿಕೊಂಡಿಲ್ಲ. ನಾವು ಎಂದಿಗೂ ಖುಷಿಯಿಂದ ಜೀವನ ನಡೆಸುತ್ತೇವೆ ಎಂದು ಕುರಾನ್ ಹೇಳಿದ್ದಾರೆ. ಈ ಕುರಿತಂತೆ ವರದಿಗಳಿಂದ ಮಾಹಿತಿ ತಿಳಿದು ಬಂದಿದೆ.

ಇದನ್ನೂ ಓದಿ:

Viral News: ‘ಉಡುಗೊರೆ ಮೌಲ್ಯಕ್ಕೆ ತಕ್ಕಂತೆ ಮದುವೆ ಊಟ’ ಮೆನು ಕಾರ್ಡ್​ ಫೋಟೋ ವೈರಲ್

Viral News: ಮೂರು ದಿನಗಳಿಂದ ಕಾಣೆಯಾಗಿದ್ದ ಮೂರು ವರ್ಷದ ಬಾಲಕ ಪತ್ತೆಯಾಗಿದ್ದು ಕಾಡಿನಲ್ಲಿ! ರೋಚಕ ಕಥೆ ಓದಿ

(Viral story 61 years old woman marries 24 years man)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada