Dance : ಕಟ್ಟಿಹಾಕಿದಾಗಲೇ ಅಲ್ಲವೆ ಕುಣಿಯಬೇಕು ಎನ್ನಿಸುವುದು? ಕೊರೊನಾ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅದೆಷ್ಟೋ ಪ್ರತಿಭೆಗಳು ಬೆಳಕಿಗೆ ಬಂದವು ಮತ್ತು ಬರುತ್ತಲೇ ಇವೆ. ಇದೀಗ ಇಲ್ಲಿ ಮಿಂಚಿನಂತೆ ಸಂಚಲನ ಹೊಮ್ಮಿಸಿದ ಅಜ್ಜಿಯೊಬ್ಬರನ್ನು ನೋಡಿ. ಪಾರ್ಟಿಯೊಂದರಲ್ಲಿ ಇವರು ಆಶಾ ಭೋಸ್ಲೆ ಹಾಡಿರುವ ‘ಪಿಯಾ ತೂ ಅಬ್ ತೋ ಆಜಾ’ಗೆ ಮೈಮರೆತು ನರ್ತಿಸಿದ್ದಾರೆ.
ನೆಟ್ಟಿಗರು ಇವರ ಶಕ್ತಿಗೆ, ಚೈತನ್ಯಕ್ಕೆ ಕಣ್ಣು ಬಾಯಿ ಬಿಟ್ಟು ನೋಡುತ್ತ ಕುಳಿತಿದ್ದಾರೆ. ಈ ವಯಸ್ಸಿನಲ್ಲಿಯೂ ನಿಮ್ಮ ಉತ್ಸಾಹವನ್ನು ಹೇಗೆ ಕಾಪಾಡಿಕೊಂಡಿದ್ದೀರಿ ಎಂದು ಕೇಳುತ್ತಿದ್ದಾರೆ. ಈ ವಿಡಿಯೋ ಅನ್ನು ಮನೀಷಾ ಖಾರ್ಸಿಂಟಿವ್ ಎನ್ನುವವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ತಾಯಂದಿರ ದಿನದ ಶುಭಾಶಯಗಳು ಅಮ್ಮಾ. ಮಮ್ಮಿ ರಾಕ್ ಮೀ ಶಾಕ್ ಎಂಬ ಒಕ್ಕಣೆ ಇದಕ್ಕಿದೆ.
ಇದನ್ನೂ ಓದಿ : Viral Video: ಚೈನೀಸ್ ಖಾದ್ಯದಲ್ಲಿ ಜೀವಂತ ಕಪ್ಪೆಮರಿ; ಗ್ರಾಹಕರ ಕ್ಷಮೆ ಕೇಳಿದ ರೆಸ್ಟೋರೆಂಟ್
ನಾನಂತೂ ಮೂಕವಿಸ್ಮಿತನಾಗಿದ್ದೇನೆ. ಈ ಅಜ್ಜಿ ಯಾರೇ ಇರಲಿ ಇಷ್ಟೊಂದು ಅದ್ಭುತವಾಗಿ ನರ್ತಿಸುತ್ತಾರಲ್ಲ ಅವರ ಕೌಶಲಕ್ಕೆ ಅಭಿನಂದನೆ. ಈಕೆ ಬಹುಶಃ ನೃತ್ಯಗಾತಿಯೇ ಆಗಿದ್ದಾರೆ. ಚಿಕ್ಕಂದಿನಿಂದಲೂ ಪ್ರದರ್ಶನ ನೀಡಿದ ಅನುಭವವಿದೆ. ಬಹುಶಃ ಈಕೆ ಈ ಸಮಯಕ್ಕಾಗಿ ಅದೆಷ್ಟು ದಿನಗಳಿಂದ ಕಾಯುತ್ತಿದ್ದೇರೇನೋ. ಮನಸ್ಸನ್ನು ಈ ವಿಡಿಯೋ ಅರಳಿಸಿದೆ ಅಂತೆಲ್ಲ ನೆಟ್ಟಿಗರು ಮನದುಂಬಿ ಪ್ರತಿಕ್ರಿಯಿಸಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:48 pm, Wed, 31 May 23