AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮೊಮ್ಮಗಳ ಮಾರ್ಗದರ್ಶನದಲ್ಲಿ ಯೂಟ್ಯೂಬ್ ಆಪರೇಟ್ ಮಾಡುವುದನ್ನು ಕಲಿತ ಅಜ್ಜಿ

ಕಲಿಕೆಗೆ ವಯಸ್ಸಿನ ಮಿತಿಯಿಲ್ಲ, ಮನಸ್ಸಿದ್ದರೆ ಎಲ್ಲವೂ ಸಾಧ್ಯ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಅಜ್ಜಿಯೊಬ್ಬರು ಮೊಮ್ಮಗಳ ಮಾರ್ಗದರ್ಶನದಲ್ಲಿ ಯೂಟ್ಯೂಬ್ ಬಳಸುವುದು ಹೇಗೆಂದು ಕಲಿತಿರುವ ವಿಡಿಯೋ ಇದಾಗಿದೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ಅಜ್ಜಿಯ ಆಸಕ್ತಿಯೂ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮೊಮ್ಮಗಳ ಮಾರ್ಗದರ್ಶನದಲ್ಲಿ ಯೂಟ್ಯೂಬ್ ಆಪರೇಟ್ ಮಾಡುವುದನ್ನು ಕಲಿತ ಅಜ್ಜಿ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Sep 10, 2026 | 4:47 PM

Share

ಅಜ್ಜ ಅಜ್ಜಿಯಂದಿರಿಗೆ (grandparents) ಸ್ಮಾರ್ಟ್ ಫೋನ್ ಬಳಕೆ ತಿಳಿದಿಲ್ಲ. ಆದರೆ ಕೆಲವರು ಈ ಸ್ಮಾರ್ಟ್ ಫೋನ್ ಬಳಸುವುದು ಹೇಗೆಂದು ಕಲಿಯಲು ಮನಸ್ಸು ಮಾಡುತ್ತಾರೆ. ಇದೀಗ ಇಂತಹದ್ದೇ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ವೃದ್ಧ ಮಹಿಳೆಯೊಬ್ಬರು ಮೊಮ್ಮಗಳ ಮಾರ್ಗದರ್ಶನದಲ್ಲಿ ಯೂಟ್ಯೂಬ್ ಆಪರೇಟ್ ಮಾಡುವುದನ್ನು ಕಲಿತಿದ್ದಾರೆ. ಈ ದೃಶ್ಯ ನೋಡಿದ ನೆಟ್ಟಿಗರು ಅಜ್ಜಿಯ ಆಸಕ್ತಿಯನ್ನು ಮೆಚ್ಚಿಕೊಂಡಿದ್ದಾರೆ.

ಯೂಟ್ಯೂಬ್ ಆಪರೇಟ್ ಮಾಡುವುದನ್ನು ಕಲಿತ ಅಜ್ಜಿ

ಶ್ರೇಯಾ ಹೆಗ್ಡೆ (Shreya hegde) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಅಜ್ಜಿಯೊಬ್ಬರು ಮೊಮ್ಮಗಳ ಮಾರ್ಗದರ್ಶನದಲ್ಲಿ ಯೂಟ್ಯೂಬ್ ಆಪರೇಟ್ ಮಾಡುವುದು ಹೇಗೆಂದು ಕಲಿಯುತ್ತಿರುವುದನ್ನು ಕಾಣಬಹುದು. ಸ್ಮಾರ್ಟ್ ಫೋನ್ ಬಳಕೆಯಲ್ಲಿ ವೃದ್ಧ ಮಹಿಳೆಗಿರುವ ಆಸಕ್ತಿ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by Shreya Hegde (@mochi_shreya)

ಇದನ್ನೂ ಓದಿ: ಯುವಕರು ನಾಚುವಂತೆ ಯೋಗ ಮಾಡಿದ 100 ರ ಹರೆಯದ ಅಜ್ಜಿ

ಈ ವಿಡಿಯೋ ಇದುವರೆಗೆ ನಲ್ವತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿವೆ. ಒಬ್ಬ ಬಳಕೆದಾರ, ಮುದ್ದಾಗಿದೆ ಎಂದಿದ್ದಾರೆ. ಮತ್ತೊಬ್ಬರು, ಅಜ್ಜಿಯ ಆಸಕ್ತಿಗೆ ಮೆಚ್ಚಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us