Viral Video: ವಧು ವರರನ್ನು ಒಟ್ಟಿಗೆ ಮೇಲಕ್ಕೆತ್ತಿ ಕೆಳಗೆ ಬೀಳಿಸಿದ ಸ್ನೇಹಿತ; ವಿಡಿಯೋ ಇದೀಗ ಫುಲ್ ವೈರಲ್

ವಧು ವರರನ್ನು ಒಟ್ಟಿಗೆ ಮೇಲಕ್ಕೆತ್ತಿದ ಸ್ನೇಹಿತ ಇಬ್ಬರನ್ನೂ ಕೆಳಗೆ ಬೀಳಿಸಿದ್ದಾನೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ. ವಿಡಿಯೋ ಇದೆ ನೀವೂ ನೋಡಿ.

Viral Video: ವಧು ವರರನ್ನು ಒಟ್ಟಿಗೆ ಮೇಲಕ್ಕೆತ್ತಿ ಕೆಳಗೆ ಬೀಳಿಸಿದ ಸ್ನೇಹಿತ; ವಿಡಿಯೋ ಇದೀಗ ಫುಲ್ ವೈರಲ್
ವಧು ವರರನ್ನು ಮೇಲಕ್ಕೆತ್ತಿ ಕೆಳಗೆ ಬೀಳಿಸಿದ ಸ್ನೇಹಿತ!
Edited By:

Updated on: Oct 10, 2021 | 11:13 AM

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಅದರಲ್ಲಿಯೂ ಮದುವೆ ಸಮಾರಂಭದಲ್ಲಿ ನಡೆಯುವ ಅದೆಷ್ಟೋ ತಮಾಷೆಯ ವಿಡಿಯೋಗಳು ಹೆಚ್ಚು ಮನ ಗೆಲ್ಲುತ್ತವೆ. ಇದೀಗ ವೈರಲ್ ಆದ ವಿಡಿಯೋ ಕೂಡಾ ಮದುವೆ ಮನೆಯಲ್ಲಿ ನಡೆದ ಒಂದು ತಮಾಷೆಯ ದೃಶ್ಯ. ಇದನ್ನು ನೋಡಿದ ನೆಟ್ಟಿಗರು ತಮಾಷೆ ಮಾಡಿ ನಗುತ್ತಿದ್ದಾರೆ.

ಮದುವೆ ಆದ ಬಳಿಕ ಸ್ನೇಹಿತ ವರ ಮತ್ತು ವಧುವನ್ನು ಒಟ್ಟಿಗೆ ಎತ್ತಿಕೊಂಡು ಕೆಳಗೆ ಬೀಳಿಸಿದ್ದಾನೆ. ಇಬ್ಬರೂ ಸಹ ನೆಲಕ್ಕೆ ಬಿದ್ದಿದ್ದಾರೆ. ಬದಿಯಲ್ಲಿ ನಿಂತ ಅಥಿತಿಗಳು ದೃಶ್ಯ ನೋಡಿ ನಗುತ್ತಿರುವುದನ್ನು ನೋಡಬಹುದು. ಇದನ್ನು ನೋಡಿದ ನೆಟ್ಟಿಗರು, ಇದು ಅವರ ಆಚರಣೆಗಳಲ್ಲಿ ಒಂದಾಗಿರಬೇಕು ಎಂದು ಹೇಳಿದ್ದಾರೆ. ಇನ್ನು ಕೆಲವರು ವಿಡಿಯೋ ಮಜವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಿನಲ್ಲಿ ದೃಶ್ಯ ಇದೀಗ ಫುಲ್​ ವೈರಲ್​ ಆಗಿದೆ.

ನೆಲಕ್ಕೆ ಬಿದ್ದ ವಧು ವರರು ನಗುತ್ತಾ ಮೇಲೆದ್ದುಕೊಂಡಿದ್ದಾರೆ. ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, 51,000 ಕ್ಕೂ ಹೆಚ್ಚಿನ ಲೈಕ್ಸ್​ಗಳನ್ನು ಗಳಿಸಿಕೊಂಡಿದೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ನವರಾತ್ರಿ ಪ್ರಯಕ್ತ ಶಂಕರ್ ಮಹದೇವನ್ ಹಾಡಿಗೆ ಡ್ಯಾನ್ಸ್​ ಮಾಡಿದ ಸಿಎಂ ಭೂಪೇಶ್ ಬಘೇಲ್; ವಿಡಿಯೋ ಇಲ್ಲಿದೆ

Viral Video: ಚಿನ್ನದ ಅಂಗಡಿಯಲ್ಲಿ ಸರ ಕದ್ದು ಪರಾರಿಯಾಗಲು ಸಿದ್ಧರಾಗಿದ್ದ ದಂಪತಿ; ಅಟ್ಟಾಡಿಸಿಕೊಂಡು ಹೋದ ಶ್ವಾನದ ವಿಡಿಯೋ ವೈರಲ್