ಮದುಮಗ ತನ್ನ ಪ್ರೀತಿಯ ನಾಯಿಯೊಂದಿಗೆ ಮದುವೆ ಮಂಟಪಕ್ಕೆ ಬಂದಾಗ

DogLover : ಹಲವರು ನಾಯಿಗಳ ಹುಟ್ಟುಹಬ್ಬ ಮಾಡುತ್ತಾರೆ. ಕೆಲವರು ನಾಯಿಗಳ ಮದುವೆ ಮಾಡುತ್ತಾರೆ. ಅಪರೂಪದವರು ತಮ್ಮ ಮದುವೆಗೆ ಪ್ರೀತಿಯ ನಾಯಿಯೊಂದಿಗೆ ಬೈಕ್​ ಏರಿ ಕಲ್ಯಾಣಮಂಟಪಕ್ಕೆ ಬರುತ್ತಾರೆ. ನೋಡಿ ವಿಡಿಯೋ.

ಮದುಮಗ ತನ್ನ ಪ್ರೀತಿಯ ನಾಯಿಯೊಂದಿಗೆ ಮದುವೆ ಮಂಟಪಕ್ಕೆ ಬಂದಾಗ
ಮದುಮಗ ತನ್ನ ನಾಯಿಯೊಂದಿಗೆ ಮದುವೆಮಂಟಪಕ್ಕೆ ಬಂದಾಗ
Updated By: ಶ್ರೀದೇವಿ ಕಳಸದ

Updated on: Dec 05, 2022 | 3:46 PM

Viral Video : ಕುದುರೆಯ ಮೇಲೆ ಏರಿಯೋ, ಕಾರಿನಲ್ಲಿ ಕುಳಿತೋ ಮದುವೆಯ ಮಂಟಪಕ್ಕೆ ಮದುಮಕ್ಕಳು ಬರುವುದು ಗೊತ್ತು. ಆದರೆ ಬೈಕ್​ ಏರಿ ತನ್ನ ನಾಯಿಯೊಂದಿಗೆ ಮದುವೆಯ ಮಂಟಪಕ್ಕೆ ಬಂದ ಸುದ್ದಿ ಕೇಳಿದ್ದೀರಾ ಅಥವಾ ನೋಡಿದ್ದೀರಾ? ಈಗ ನೋಡಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ವರನೊಬ್ಬ ತನ್ನ ಪ್ರೀತಿಯ ನಾಯಿಯೊಂದಿಗೆ ಮಂಟಪಕ್ಕೆ ಬಂದಿದ್ದಾನೆ. ಈ ವಿಡಿಯೋ ಅನ್ನು ಈಗಾಗಲೇ 1 ಮಿಲಿಯನ್ ಜನ ನೋಡಿದ್ದಾರೆ. 2,60,000 ಜನ ಇಷ್ಟಪಟ್ಟಿದ್ದಾರೆ.

ನೆಟ್ಟಿಗರಂತೂ ಅಚ್ಚರಿ ಮತ್ತು ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. ಎಲ್ಲ ನಾಯಿಗಳಿಗೂ ಇಂಥ ಕುಟುಂಬ ಸಿಗಲಿ ಎಂದು ಹೇಳಿದ್ದಾರೆ ಒಬ್ಬರು. ಇಂದು ನೋಡಿದ ಅತ್ಯಂತ ಆಪ್ತವಾದ ವಿಡಿಯೋ ಇದಾಗಿದೆ ಎಂದಿದ್ದಾರೆ ಇನ್ನೊಬ್ಬರು. ವಧುವನ್ನೂ ಕೂರಿಸಿಕೊಂಡು ಬರಬೇಕಿತ್ತು ಎಂದಿದ್ದಾರೆ ಹಲವರು. ಎಲ್ಲಾ ರೀಲಿಗಾಗಿ ಮಾಡುತ್ತಾರೆ ಜನ ಪಾಪ ಪ್ರಾಣಿಗಳಿಗೆ ಇದೆಲ್ಲ ಏನು ಅರ್ಥವಾಗುತ್ತದೆ ಎಂದಿದ್ದಾರೆ ಮತ್ತೊಬ್ಬರು. ಸಾಕಿದವರು ಪ್ರಾಣಿಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ, ಗೌರವ ಘನತೆಯಿಂದ ನೋಡಿಕೊಳ್ಳುತ್ತಾರೆ ಅದರಲ್ಲೇನಿದೆ ಎಂದು ಇನ್ನೊಬ್ಬರು ಕೇಳಿದ್ದಾರೆ.

ಕೆಲವರು ನಾಯಿಯ ಹುಟ್ಟುಹಬ್ಬ ಮಾಡುತ್ತಾರೆ. ನಾಯಿಯ ಮದುವೆಯನ್ನೂ ಮಾಡುತ್ತಾರೆ. ಇನ್ನೂ ಕೆಲವರು ಹೀಗೆ ತಮ್ಮ ಮದುವೆಗೆ ಮದುಮಗಳೊಂದಿಗೆ ಬರುವುದಕ್ಕಿಂತ ನಾಯಿಯೊಂದಿಗೆ ಬರುತ್ತಾರೆ. ಪ್ರಾಣಿಪ್ರೇಮವನ್ನು ಮೆರೆಯುತ್ತಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 3:44 pm, Mon, 5 December 22