AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ‘ಮುದ್ದಿನ ವಿದ್ಯೆ’ ಬಲ್ಲವರೇ ಬಲ್ಲರು; ನೋಡಿ ಈ ವೈರಲ್ ವಿಡಿಯೋ

Injection : ಮಕ್ಕಳ ಡಾಕ್ಟರ್​ ಬರೀ ಡಾಕ್ಟರ್​ ಅಲ್ಲ. ಮಾಯಾವಿಯೂ ಎನ್ನಿಸಿಕೊಳ್ಳಬೇಕು! ಇದು ಒಂದು ರೀತಿಯ ಪ್ರೀತಿಯ ಕೌಶಲ. ಮಕ್ಕಳ ಬಗ್ಗೆ ಸಿಕ್ಕಾಪಟ್ಟೆ ಸಹಾನುಭೂತಿ ಮಮತೆ ಇದ್ದವರಿಗಷ್ಟೇ ಇದು ಸಾಧಿಸುವುದು.

ಈ ‘ಮುದ್ದಿನ ವಿದ್ಯೆ’ ಬಲ್ಲವರೇ ಬಲ್ಲರು; ನೋಡಿ ಈ ವೈರಲ್ ವಿಡಿಯೋ
ಮಗುವಿಗೆ ಇಂಜೆಕ್ಷನ್ ಕೊಡುತ್ತಿರುವ ಡಾಕ್ಟರ್
TV9 Web
| Edited By: |

Updated on:Dec 05, 2022 | 6:35 PM

Share

Viral Video : ನಿಮ್ಮ ಬಾಲ್ಯ ನೆನಪಿಸಿಕೊಳ್ಳಿ. ಒಂದು ಇಂಜೆಕ್ಷನ್​ ತೆಗೆದುಕೊಳ್ಳಬೇಕೆಂದರೆ ನಿಮ್ಮ ಅಪ್ಪ ಅಮ್ಮ ಅದೆಷ್ಟು ಸರ್ಕಸ್ ಮಾಡಬೇಕಾಗುತ್ತಿತ್ತು. ದೊಡ್ಡವರಾದ ಮೇಲೆ ಕೂಡ ಅನೇಕರು ಇಂಜೆಕ್ಷನ್​ ಎಂದರೆ ಹೆದರುತ್ತಾರೆ. ಇನ್ನು ಪುಟ್ಟ ಮಕ್ಕಳನ್ನು ಹೇಗೆ ಸಂಭಾಳಿಸುವುದು? ಸಾಮಾನ್ಯವಾಗಿ ಮಕ್ಕಳ ಡಾಕ್ಟರ್ ಅನ್ನು ನೀವು ಗಮನಿಸಿರುತ್ತೀರಿ. ಮಗುವಿನ ಗಮನ ಬೇರೆಡೆ ಸೆಳೆದು ಪಟ್ಟನೆ ಇಂಜೆಕ್ಷನ್​ ಚುಚ್ಚಿ ಉಕ್ಕುವ ಕಣ್ಣೀರನ್ನು ಹಾಗೇ ಇಂಗಿಸಿಬಿಡುವುದು. ಈಗ ವೈರಲ್ ಆಗಿರುವ ಈ ವಿಡಿಯೋ ಅಂಥದ್ದೇ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by DrSayed Mujahid Husain (@dr_hifive)

ಮಕ್ಕಳ ವೈದ್ಯ ಡಾ ಸೈಯದ್ ಮುಜಾಹಿದ್ ಹುಸೇನ್ ಎನ್ನುವವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಆರು ತಿಂಗಳ ಮಗು ಮಾತ್ರ ಅದ್ಭುತ, ನಾವು ದೊಡ್ಡವರು ಅಂಜುಬುರುಕರು’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.  ಈ ತನಕ ಸುಮಾರು 9.8 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

ಡಾಕ್ಟರ್ ಆಗಬೇಕೆಂದುಕೊಂಡಿರುವ ನನ್ನ ಅಂಕಲ್​ ಮಗಳಿಗೆ ಈ ವಿಡಿಯೋ ತೋರಿಸಿದ್ದೇನೆ. ಈ ವಿಡಿಯೋ ನೋಡಿ ಆಕೆ ಬಹಳ ಸ್ಫೂರ್ತಿಗೊಂಡಿದ್ದಾರೆ. ನಿಮ್ಮಂತೆಯೇ ಆಗಲು ಆಕೆ ಇಚ್ಛಿಸಿದ್ದಾರೆ ಎಂದಿದ್ದಾರೆ ಒಬ್ಬರು. ನಿಮ್ಮ ಈ ಅದ್ಭುತ ಕೆಲಸಕ್ಕೆ ಧನ್ಯವಾದ ಸರ್ ಎಂದಿದ್ದಾರೆ ಇನ್ನೊಬ್ಬರು. ದೊಡ್ಡವರಿಗೂ ಹೀಗೆಯೇ ಇಂಜೆಕ್ಷನ್ ಮಾಡುವ ಹಾಗಿದ್ದರೆ… ಎಂದಿದ್ಧಾರೆ ಮತ್ತೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:34 pm, Mon, 5 December 22