ಬಿಹಾರ: ಕ್ಷುಲಕ ಕಾರಣಕ್ಕೆ ಮದುವೆ(Marriage) ಬೇಡ ಎನ್ನುವುದು ಇತ್ತೀಚೆಗೆ ಸಾಮಾನ್ಯ ಎನ್ನುವಂತೆ ಆಗಿದೆ. ಅದೆಷ್ಟೋ ಮದುವೆಗಳು ಮಂಟಪದವರೆಗೆ ಬಂದು, ನಂತರ ಮಧ್ಯಕ್ಕೆ ನಿಂತಿರುವುದು ಇದೆ. ಆದರೆ ಯಾಕೆ ಮದುವೆ ಹೀಗೆ ಅರ್ಧಕ್ಕೆ ನಿಂತಿದೆ ಎಂಬ ಬಗ್ಗೆ ವಧು-ವರನಿಗೂ(Groom) ಕೂಡ ತಿಳಿದಿರುವುದಿಲ್ಲ. ಒಟ್ಟಿನಲ್ಲಿ ಮದುವೆ ಮುರಿಯುವುದಕ್ಕೆ ಒಂದು ಕಾರಣ ಬೇಕು ಎನ್ನುವಂತೆ ಆಗಿದೆ. ಸದ್ಯ ಇಂತಹದ್ದೇ ಘಟನೆಯೊಂದು ಬಿಹಾರದ ಪುರ್ನಿಯಾದ ಮೊಹಾನಿ ಪಂಚಾಯತ್‌ನ ಬಟೌನಾ ಗ್ರಾಮದ ಈಸ್ವರಿ ಟೋಲಾದಲ್ಲಿ ನಡೆದಿದೆ. ತನ್ನ ಕುಟುಂಬಕ್ಕೆ ತಡವಾಗಿ ಊಟ (Food)ಬಡಿಸಿದ ಕಾರಣಕ್ಕೆ ವರನೊಬ್ಬ ಮದುವೆಯಾಗಲು ನಿರಾಕರಿಸಿದ್ದಾನೆ.
ಅಮರಿ ಕುಕ್ರೌನ್‌ನ ನಿವಾಸಿ ವರ ರಾಜ್‌ಕುಮಾರ್ ಓರಾನ್ ನಿಗದಿತ ಸಮಯಕ್ಕೆ ತಮ್ಮ ಕುಟುಂಬಸ್ಥರೊಂದಿಗೆ ಮದುವೆ ನಡೆಯುವ ಸ್ಥಳಕ್ಕೆ ತಲುಪಿದ್ದರು. ವಿವಾಹ ವಿಧಿ ವಿಧಾನಗಳು ನಡೆಯುತ್ತಿದ್ದರಿಂದ ವರನ ಕುಟುಂಬದ ಸದಸ್ಯರಿಗೆ ಊಟ ಬಡಿಸಲು ವಿಳಂಬವಾಗಿದೆ. ಇದು ವರನ ತಂದೆಯನ್ನು ತುಂಬಾ ಕೆರಳಿಸಿತು. ಹೀಗಾಗಿ ಮದುವೆ ಮುರಿಯುವ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೇ ಮದುವೆ ಮಂಟಪದಿಂದ ಹಿಂತಿರುಗಲು ನಿರ್ಧರಿಸಿದ್ದಾರೆ.
ಈ ವೇಳೆ ಸ್ಥಳೀಯರು ಹಾಗೂ ಪಂಚಾಯಿತಿಯವರು ಮಧ್ಯ ಪ್ರವೇಶಿಸಿ ಎರಡು ಕಡೆಯವರ (ವಧು ಮತ್ತು ವರನ) ನಡುವೆ ಸಮಸ್ಯೆ ಬಗೆಹರಿಸಲು ಯತ್ನಿಸಿದರು. ಆದರೆ, ಅಷ್ಟೊತ್ತಿಗಾಗಲೇ ವರನು ಸ್ಥಳದಿಂದ ಪಲಾಯನ ಮಾಡಿದ್ದರಿಂದ ಮದುವೆಯನ್ನು ನಿಲ್ಲಿಸಬೇಕಾಯಿತು. ಇದೇ ವೇಳೆ, ವರನ ತಂದೆ ವಧುವಿನ ಕುಟುಂಬಕ್ಕೆ ಅಡುಗೆ ಮಾಡಲು ತಗಲುವ ವೆಚ್ಚವನ್ನು, ಬೈಕ್ ಮತ್ತು ವರದಕ್ಷಿಣೆಯಾಗಿ ನೀಡಿದ ಎಲ್ಲಾ ಉಡುಗೊರೆಗಳನ್ನು ವಾಪಾಸ್ ನೀಡಿದರು. ಇದೀಗ ವಧುವಿನ ತಾಯಿ, ವರ ಹಾಗೂ ಆತನ ತಂದೆ ವಿರುದ್ಧ ಕಸ್ಬಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ.
ಕಳೆದ ವರ್ಷ ಇದೇ ರೀತಿಯ ಘಟನೆಯಲ್ಲಿ, ಸುಕಿಂದಾದಲ್ಲಿ ವರನೊಬ್ಬ ಮದುವೆಯ ವಿಧಿವಿಧಾನ ಪ್ರಾರಂಭವಾಗುವ ಕೆಲವೇ ಕ್ಷಣಗಳ ಮೊದಲು ತನ್ನ ಮದುವೆಯನ್ನು ರದ್ದುಗೊಳಿಸಿದನು. 27 ವರ್ಷದ ವರನನ್ನು ರಮಾಕಾಂತ್ ಪಾತ್ರ ಎಂದು ಗುರುತಿಸಲಾಗಿದ್ದು, ವಧುವಿನ ಕುಟುಂಬದವರು ಹಬ್ಬದಲ್ಲಿ ಕುರಿಯೂಟವನ್ನು ಬಡಿಸಲು ವಿಫಲವಾದ ಕಾರಣಕ್ಕೆ ಅಸಮಾಧಾನಗೊಂಡಿದ್ದಾನೆ. ಅಷ್ಟೇ ಅಲ್ಲದೇ ಮನೆಗೆ ಹಿಂದಿರುಗುವ ಮೊದಲು ಅವನು ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ಕೂಡ ಮುಂದಾಗಿದ್ದ.
ಇದನ್ನೂ ಓದಿ:
ಮದುವೆ ಬಳಿಕ ಮೊದಲ ಬಾರಿ ಜೋಡಿಯಾಗಿ ಟಿವಿ ಶೋಗೆ ಬರಲಿರುವ ಕತ್ರಿನಾ ಕೈಫ್-ವಿಕ್ಕಿ ಕೌಶಲ್?
Published On - 3:19 pm, Mon, 21 February 22