ಮದುವೆಗೆ ಮೂರು ದಿನ ಇರುವಾಗ ಯುವತಿಯ ಅಪಹರಣ, ಅತ್ಯಾಚಾರ; ಬಿಜೆಪಿ ಮುಖಂಡ ಸೇರಿ ಇಬ್ಬರ ವಿರುದ್ಧ ಕೇಸ್​ ದಾಖಲು

ಮದುವೆಗೆ ಮೂರು ದಿನ ಇರುವಾಗ ಯುವತಿಯ ಅಪಹರಣ, ಅತ್ಯಾಚಾರ; ಬಿಜೆಪಿ ಮುಖಂಡ ಸೇರಿ ಇಬ್ಬರ ವಿರುದ್ಧ ಕೇಸ್​ ದಾಖಲು
ಪ್ರಾತಿನಿಧಿಕ ಚಿತ್ರ

ವಾಪಸ್ ಬಂದ ಬಳಿಕ ಯುವತಿ ಪೊಲೀಸರಿಗೆ ಘಟನೆಯನ್ನು ವಿವರಿಸಿದ್ದಾಳೆ. ನಾನು ಮನೆಯ ಹೊರಗೆ ಇದ್ದಾಗ, ಅಲ್ಲಿಂದಲೇ ನನ್ನನ್ನು ಕೋಮಲ್​ ಗುಪ್ತಾ ಮತ್ತು ಧರ್ಮೇಂದ್ರ ಗುಪ್ತಾ ಅಪಹರಿಸಿದ್ದಾರೆ. ನನ್ನ ಮೂಗಿಗೆ ಮತ್ತು ಬರುವ ಔಷಧ ಹಿಡಿದು ಎಚ್ಚರ ತಪ್ಪಿಸಲಾಗಿತ್ತು ಎಂದಿದ್ದಾರೆ.

TV9kannada Web Team

| Edited By: Lakshmi Hegde

Feb 20, 2022 | 5:28 PM

ಯುವತಿಯನ್ನು ಅಪಹರಣ ಮಾಡಿ, ಅತ್ಯಾಚಾರ ಮಾಡಿದ ಆರೋಪದಡಿ ಮಧ್ಯಪ್ರದೇಶದ ಸಿಂಗ್ರೌಲಿಯ ಬಿಜೆಪಿ ಮುಖಂಡ ಮತ್ತು ಆತನ ಬಾವನ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಬಿಜೆಪಿಯ ಸರೈ ಮಂಡಲ ಅಧ್ಯಕ್ಷ ಕೋಮಲ್​ ಗುಪ್ತಾ ಮತ್ತು ಆತನ ಬಾವ ಧರ್ಮೇಂದ್ರ ಗುಪ್ತಾ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದು, ಇದರಲ್ಲಿ ಧರ್ಮೇಂದ್ರ ಗುಪ್ತಾನನ್ನು ಪೊಲೀಸರು ಬಂಧಿಸಿದ್ದಾರೆ. ಕೋಮಲ್​ ಗುಪ್ತಾ ಇನ್ನೂ ಸಿಕ್ಕಿಲ್ಲ.

ಇದು ಜನವರಿಯಲ್ಲಿ ನಡೆದ ಘಟನೆ. ಈ ಯುವತಿಯ ವಿವಾಹ ಇನ್ನು ಮೂರು ದಿನ ಇದೆ ಎನ್ನುವಾಗ ಅಂದರೆ ಜನವರಿ 27ರಂದು ಆಕೆಯನ್ನು ಅಪಹರಣ ಮಾಡಲಾಗಿತ್ತು. ಅದೇ ದಿನ ಸಂಜೆ ಹೊತ್ತಿಗೆ ಹುಡುಗಿಯ ಕುಟುಂಬದವರು ಪೊಲೀಸರಿಗೆ ದೂರು ನೀಡಿ, ನಮ್ಮ ಮಗಳು ಕಾಣಿಸುತ್ತಿಲ್ಲ ಎಂದು ಹೇಳಿದ್ದರು. ಅಂದಿನಿಂದಲೂ ಹುಡುಕಾಟ ನಡೆಸಿದ್ದ ಪೊಲೀಸರು ಸಂತ್ರಸ್ತೆಯನ್ನು ಫೆ.19ರಂದು ಬಾಲಾಘಾಟ್​ ಬಳಿ ರಕ್ಷಿಸಿದ್ದಾರೆ.

ವಾಪಸ್ ಬಂದ ಬಳಿಕ ಯುವತಿ ಪೊಲೀಸರಿಗೆ ಘಟನೆಯನ್ನು ವಿವರಿಸಿದ್ದಾಳೆ. ನಾನು ಮನೆಯ ಹೊರಗೆ ಇದ್ದಾಗ, ಅಲ್ಲಿಂದಲೇ ನನ್ನನ್ನು ಕೋಮಲ್​ ಗುಪ್ತಾ ಮತ್ತು ಧರ್ಮೇಂದ್ರ ಗುಪ್ತಾ ಅಪಹರಿಸಿದ್ದಾರೆ. ನನ್ನ ಮೂಗಿಗೆ ಮತ್ತು ಬರುವ ಔಷಧ ಹಿಡಿದು ಎಚ್ಚರ ತಪ್ಪಿಸಲಾಗಿತ್ತು. ಕೆಲವು ಹೊತ್ತುಗಳ ಬಳಿಕ ನನಗೆ ಎಚ್ಚರವಾಯ್ತು. ಆಗ ನಾನು ಜಬಲ್ಪುರದ ಸಮೀಪ ಎಲ್ಲೋ ಇದ್ದಿದ್ದು ಗೊತ್ತಾಯ್ತು. ಅಲ್ಲಿ ಧರ್ಮೇಂದ್ರ ಗುಪ್ತಾ ಮತ್ತು ಕೋಮಲ್​ ಗುಪ್ತಾ ಪ್ರತ್ಯೇಕ ದಾರಿ ಹಿಡಿದರು. ಧರ್ಮೇಂದ್ರ ಗುಪ್ತಾ ನನ್ನನ್ನು ಕರೆದುಕೊಂಡು, ತನ್ನ ಆಂಟಿಯ ಮನೆಗೆ ಹೋಗಿದ್ದಲ್ಲದೆ, ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಂಗ್ರೌಲಿ ಎಸ್​​ಪಿ ಬೀರೇಂದ್ರ ಕುಮಾರ್​ ಸಿಂಗ್​, ಧರ್ಮೇಂದ್ರ ಗುಪ್ತಾ ಮುಖ್ಯ ಆರೋಪಿ. ಈತನೇ ರೇಪ್​ ಮಾಡಿದ್ದಾಗಿ ಸಂತ್ರಸ್ತ ಯುವತಿ ಹೇಳಿಕೊಂಡಿದ್ದಾಳೆ. ಇನ್ನು ಈತನಿಗೆ ಕೋಮಲ್​ ಗುಪ್ತಾ ಸಹಾಯ ಮಾಡಿದ್ದಾನೆ. ಮುಖ್ಯ ಆರೋಪಿಯನ್ನು ಈಗಾಗಲೇ ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿಯ ಮೊಬೈಲ್ ಕದ್ದವರ ಬಂಧನ; ಆರೋಪಿಗಳ ಮೇಲಿತ್ತು 35ಕ್ಕೂ ಹೆಚ್ಚು ಸುಲಿಗೆ ಕೇಸ್!

Follow us on

Related Stories

Most Read Stories

Click on your DTH Provider to Add TV9 Kannada