Video: ಮದುವೆಯಲ್ಲಿ ವಧುವಿನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವರ; ವಧುವಿನ ರಿಯಾಕ್ಷನ್ ಹೇಗಿತ್ತು ನೋಡಿ

| Updated By: shruti hegde

Updated on: Sep 14, 2021 | 3:01 PM

ಪ್ರಾಚೀನ ಕಾಲದಿಂದಲೂ ಅನುಸರಿಸಿಕೊಂಡ ಬಂದಂಥಹ ಸಂಪ್ರದಾಯದ ಪ್ರಕಾರ ವಧು ತನ್ನ ಪತಿಯಲ್ಲಿ ಆಶೀರ್ವಾದ ಪಡೆಯಲು ಮುಂದಾಗುತ್ತಾಳೆ. ಕಾಲಿಗೆ ಬಿದ್ದು ನಮಸ್ಕರಿಸುತ್ತಿದ್ದಂತೆಯೇ ವರ ಹಿಂದಕ್ಕೆ ಸರಿದು, ಅವಳ ಕಾಲಿಗೆ ಬೀಳಲು ಮುಂದಾಗುತ್ತಾನೆ.

Video: ಮದುವೆಯಲ್ಲಿ ವಧುವಿನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವರ; ವಧುವಿನ ರಿಯಾಕ್ಷನ್ ಹೇಗಿತ್ತು ನೋಡಿ
ಮದುವೆಯಲ್ಲಿ ವಧುವಿನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವರ
Follow us on

ವಿವಾಹದಲ್ಲಿ ನಡೆಯುವ ಅದೆಷ್ಟೋ ವಿಡಿಯೋಗಳು ತಮಾಷೆಯಾಗಿರುತ್ತವೆ. ಅಂಥಹ ವಿಡಿಯೋಗಳನ್ನು ಪದೇ ಪದೇ ನೋಡೋಣ ಅನ್ನುವಷ್ಟು ಮನಸ್ಸಿಗೆ ಹಿಡಿಸಿ ಬಿಡುತ್ತದೆ. ಬಾಯ್ತುಂಬ ಮನಸ್ಸು ಪೂರ್ತಿ ನಗಿಸುವ ದೃಶ್ಯಗಳು ಮನಸ್ಸಿಗೆ ಹೆಚ್ಚು ಇಷ್ವಾಗುತ್ತವೆ. ಇದೀಗ ವೈರಲ್ ಆದ ವಿಡಿಯೋದಲ್ಲಿ ಗಮನಿಸುವಂತೆ ವರನೇ ವಧುವಿನ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದಾನೆ. ಆಗ ವಧು ಯಾವ ರೀತಿ ರಿಯಾಕ್ಷನ್ ಕೊಟ್ಟಿದ್ದಾಳೆ ಎಂಬುದನ್ನ ವಿಡಿಯೋದಲ್ಲೇ ನೋಡಿ.

ಪ್ರಾಚೀನ ಕಾಲದಿಂದಲೂ ಅನುಸರಿಸಿಕೊಂಡ ಬಂದಂಥಹ ಸಂಪ್ರದಾಯದ ಪ್ರಕಾರ ವಧು ತನ್ನ ಪತಿಯಲ್ಲಿ ಆಶೀರ್ವಾದ ಪಡೆಯಲು ಮುಂದಾಗುತ್ತಾಳೆ. ಕಾಲಿಗೆ ಬಿದ್ದು ನಮಸ್ಕರಿಸುತ್ತಿದ್ದಂತೆಯೇ ವರ ಹಿಂದಕ್ಕೆ ಸರಿದು, ಅವಳ ಕಾಲಿಗೆ ಬೀಳಲು ಮುಂದಾಗುತ್ತಾನೆ. ಇಬ್ಬರೂ ನಗುತ್ತಾ ಇರುವ ದೃಶ್ಯ ಇದೀಗ ಫುಲ್ ವೈರಲ್ ಆಗಿದೆ.

ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, 34.5 ದಶಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. 2 ಮಿಲಿಯನ್​ಗಿಂತಲೂ ಹೆಚ್ಚಿನ ಲೈಕ್ಸ್​ಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದು, ಓರ್ವರು ಕ್ಯಾ ಬಾತ್ ಹೆ ಎಂದು ಹೇಳಿದ್ದಾರೆ. ಮತ್ತೋರ್ವರು ಇಬ್ಬರಿಗೂ ಶುಭ ಹಾರೈಸಿದ್ದಾರೆ. ಇಬ್ಬರು ತುಂಬಾ ಮುದ್ದಾಗಿದ್ದೀರಿ ಭವಿಷ್ಯದಲ್ಲಿ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದ್ದಾರೆ. ಈ ಆರಾಧ್ಯ ವಿಡಿಯೋ ಆನ್​ಲೈನ್​ನಲ್ಲಿ ಸಾವಿರಾರು ಜನ ಮನ ಗೆದ್ದಿದೆ.

ಇದನ್ನೂ ಓದಿ:

Viral Video: ತೂಗು ಸೇತುವೆ ಮೇಲೆ ಬೈಕ್ ಹತ್ತಿ ಸ್ಟಂಟ್ ಮಾಡಿದ ವ್ಯಕ್ತಿ ಪರಿಸ್ಥಿತಿ ಏನಾಯ್ತು ನೋಡಿ!

Viral Video: ಆಪ್ತ ಸ್ನೇಹಿತರಾಗಿ ವಾಕಿಂಗ್ ಹೊರಟ ನಾಯಿ ಮರಿ ಮತ್ತು ಕುದುರೆ; ಹೃದಯಸ್ಪರ್ಶಿ ವಿಡಿಯೋ ವೈರಲ್

(Groom takes bride Ashirwad during wedding video goes viral)