Telangana: ಮದುವೆ ಪತ್ರಿಕೆ ಹಂಚಲು ಹೋಗಿದ್ದ ವರ ನಾಪತ್ತೆ; ಕಾಲುವೆಯಲ್ಲಿ ಮೃತದೇಹ ಪತ್ತೆ

|

Updated on: Mar 12, 2024 | 5:19 PM

ಹನುಮಕೊಂಡ ಟೌನ್‌ನ ಗೋಕುಲ್ ನಗರ ಪ್ರದೇಶ ನಿವಾಸಿಯಾಗಿರುವ ಕೃಷ್ಣತೇಜ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ನರಸಂಪೇಟೆಯ ಯುವತಿಯೊಂದಿಗೆ ಮಾರ್ಚ್ 16 ರಂದು ಮದುವೆ ನಿಶ್ಚಯವಾಗಿತ್ತು. ಎರಡೂ ಕುಟುಂಬಗಳ ಒಪ್ಪಿಗೆಯಿಂದಲೇ ಮದುವೆಗೆ ತಯಾರಿ ನಡೆಸಲಾಗಿತ್ತು.

Telangana: ಮದುವೆ ಪತ್ರಿಕೆ ಹಂಚಲು ಹೋಗಿದ್ದ ವರ ನಾಪತ್ತೆ; ಕಾಲುವೆಯಲ್ಲಿ ಮೃತದೇಹ ಪತ್ತೆ
Follow us on

ಇನ್ನೇನು ಮದುವೆಗೆ ನಾಲ್ಕೇ ದಿನವಿರುವಾಗಲೇ ಮದುಮಗ ನಾಪತ್ತೆಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮದುವೆ ಪತ್ರಿಕೆ ಹಂಚಲು ಹೋಗಿದ್ದ ವರ ಎಷ್ಟೇ ಹೊತ್ತಾದರೂ ಮನೆಗೆ ಬರದೇ ಇದ್ದಾಗ ಮನೆಯವರು ಆತಂಕಗೊಂಡಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ. ಅಂತಿಮವಾಗಿ ಎಸ್‌ಆರ್‌ಎಸ್‌ಪಿ ಕಾಲುವೆಯಲ್ಲಿ ಕೃಷ್ಣ ತೇಜ್ ಮೃತದೇಹ ಪತ್ತೆಯಾಗಿದ್ದು, ಮದುವೆ ತಯಾರಿಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಕೃಷ್ಣ ತೇಜ್ ಅವರ ಮದುವೆ ಮಾರ್ಚ್ 16 ರಂದು ಮದುವೆ ನಡೆಯಬೇಕಿತ್ತು. ಹೀಗಾಗಿ ಮದುವೆ ಆಮಂತ್ರಣ ಪತ್ರ ಹಂಚಲು ಹೋಗಿದ್ದ ಹೋಗಿದ್ದ ಕೃಷ್ಣ ತೇಜ್ ಶವವಾಗಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಹನುಮಕೊಂಡ ಟೌನ್‌ನ ಗೋಕುಲ್ ನಗರ ಪ್ರದೇಶ ನಿವಾಸಿಯಾಗಿರುವ ಕೃಷ್ಣತೇಜ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ನರಸಂಪೇಟೆಯ ಯುವತಿಯೊಂದಿಗೆ ಮಾರ್ಚ್ 16 ರಂದು ಮದುವೆ ನಿಶ್ಚಯವಾಗಿತ್ತು. ಎರಡೂ ಕುಟುಂಬಗಳ ಒಪ್ಪಿಗೆಯಿಂದಲೇ ಮದುವೆಗೆ ತಯಾರಿ ನಡೆಸಲಾಗಿತ್ತು.

ಇದನ್ನೂ ಓದಿ: ಮಾತ್ರೆ ಪ್ಯಾಕೆಟ್​​ ಮೇಲೆ ಕೆಂಪು ಗೆರೆ ಏಕೆ ಇರುತ್ತದೆ? ಇದರ ಅರ್ಥವೇನು?

ಸಂಬಂಧಿಕರಿಗೆ ಮದುವೆಯ ಆಮಂತ್ರಣ ಪತ್ರಿಕೆ ಹಂಚಲು ಹೋಗಿದ್ದ ಕೃಷ್ಣತೇಜ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಇದೇ ವೇಳೆ ಎಸ್‌ಆರ್‌ಎಸ್‌ಪಿ ಕಾಲುವೆ ಬಳಿ ಅವರ ಬೈಕ್‌ ಪತ್ತೆಯಾಗಿದೆ. ಗಜ ಈಜುಗಾರರಿಗೆ ಅನುಮಾನಾಸ್ಪದವಾಗಿ ಮೃತದೇಹ ಕಾಣಿಸಿದೆ. ಆದರೆ ಇದು ಆತ್ಮಹತ್ಯೆಯೋ ಅಥವಾ ಬೇರೆ ಕಾರಣವೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ