ಒಂದಲ್ಲ ಎರಡಲ್ಲ ನೂರಕ್ಕೂ ಹೆಚ್ಚು ಬಾರ್ಗಳಲ್ಲಿ ಒಂದೇ ದಿನದಲ್ಲಿ ಭೇಟಿ ನೀಡಿ ಕುಡಿದು ವಿಶ್ವದಾಖಲೆ ನಿರ್ಮಿಸಿದ 69ರ ಹರೆಯದ ವ್ಯಕ್ತಿಯೊಬ್ಬ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದ್ದಾನೆ. ಆಸ್ಟ್ರೇಲಿಯಾದ ಡೇವಿಡ್ ಕ್ಲಾರ್ಕ್ಸನ್(69) 24 ಗಂಟೆಗಳಲ್ಲಿ ಅತಿ ಹೆಚ್ಚು ಬಾರ್ಗಳಿಗೆ ಭೇಟಿ ನೀಡಿ ಗಿನ್ನೆಸ್ ವಿಶ್ವ ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಏಪ್ರಿಲ್ 12 ರಂದು, ಬೆಳಿಗ್ಗೆಯಿಂದ ಒಟ್ಟು 24 ಗಂಟೆಗಳಲ್ಲಿ 120 ಪಬ್ಗಳಿಗೆ ಭೇಟಿ ನೀಡಿ ಕುಡಿದು ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಒಂದು ದಿನದಲ್ಲಿ 99 ಪಬ್ಗಳಿಗೆ ಭೇಟಿ ನೀಡಿ ದಾಖಲೆ ಮಾಡಿದ್ದ ಡೇವಿಡ್, ಇದೀಗ ತನ್ನದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿದ್ದಾನೆ.
ಇದನ್ನೂ ಓದಿ: ಈ ವೈರಲ್ ಜೀನ್ಸ್ ಪ್ಯಾಂಟ್ ಕಂಡು ‘ಬೇಸಿಗೆಗೆ ಹೇಳಿ ಮಾಡಿಸಿದ ಜೀನ್ಸ್’ ಎಂದ ನೆಟ್ಟಿಗರು
ಈ ದಾಖಲೆಯನ್ನು ಸಿಡ್ನಿಯ ಕ್ಯಾಪ್ಟನ್ ಕುಕ್ ಹೋಟೆಲ್‌ನಿಂದ ಪ್ರಾರಂಭಿಸಿ, ಕೊನೆಯದಾಗಿ ಸಸೆಕ್ಸ್ ಗಾರ್ಡನ್ ಬಾರ್‌ನಲ್ಲಿ ಮುಗಿಸಿದ್ದಾರೆ. ಈ ಮೂಲಕ ಒಂದೇ ದಿನದಲ್ಲಿ 120 ಬಾರ್ಗಳಲ್ಲಿ ಕುಡಿದು ದಾಖಲೆ ಬರೆದಿದ್ದಾರೆ. ಒಂದು ಪಬ್ನಿಂದ ಇನ್ನೊಂದು ಪಬ್ಗೆ ನಡೆದುಕೊಂಡು ಹೋಗಿಯೇ ದಾಖಲೆ ಬರೆದಿದ್ದಾರೆ. ಕೊನೆಯ ಸಸೆಕ್ಸ್ ಗಾರ್ಡನ್ ಬಾರ್‌ನಲ್ಲಿ ಡೇವಿಡ್ ಗಿನ್ನೆಸ್ ವಿಶ್ವ ದಾಖಲೆ ಪ್ರಶಸ್ತಿ ನೀಡಲಾಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ