ಹೈದರಾಬಾದ್: ಹೈದರಾಬಾದ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಆಚಾರ್ಯ ಮಕುನೂರಿ ಶ್ರೀನಿವಾಸ ಅವರು ವಿಶ್ವದ ಅತಿ ದೊಡ್ಡ ಬಾಲ್ ಪೆನ್ ನಿರ್ಮಿಸಿ, ಗಿನ್ನಿಸ್ ದಾಖಲೆಗೆ ಪಾತ್ರರಾಗಿದ್ದಾರೆ. 2011ರಲ್ಲಿ ರಚಿಸಲಾದ ಬೃಹತ್ ಪೆನ್ 37.23 ಕೆಜಿ ತೂಕ ಮತ್ತು 5.5 ಮೀಟರ್ ಉದ್ದವಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ (Guinness World Record) ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ರೀಲ್ ಪ್ರಕಾರ, ಈ ಮೊದಲು 1.45 ಮೀಟರ್ ಉದ್ದದ ಪೆನ್ ವಿಶ್ವ ದಾಖಲೆಯಾಗಿತ್ತು. ಇದೀಗ ಆ ದಾಖಲೆಯನ್ನು ಮುರಿದು ಆಚಾರ್ಯ ಮಕುನೂರಿ ಶ್ರೀನಿವಾಸ ಹೊಸ ದಾಖಲೆ ಬರೆದಿದ್ದಾರೆ.
ಗಿನ್ನೆಸ್ ದಾಖಲೆಯ ಮಾರ್ಗಸೂಚಿಗಳ ಪ್ರಕಾರ, ಈ ಪೆನ್ ಅನ್ನು ಬಳಸುವಾಗ ಸಣ್ಣ ಲೋಹದ ಗೋಳದ ತುದಿಯಲ್ಲಿ ಇಂಕ್ ಬರುತ್ತದೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತಿಳಿಸಿದೆ. ಗಿನ್ನೆಸ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಶ್ರೀನಿವಾಸ್ ಅವರ ತಂಡ ಬಿಳಿ ಕಾಗದದ ಮೇಲೆ ಭಾರತೀಯ ಪುರಾಣದ ದೃಶ್ಯಗಳಿರುವ ಪೆನ್ನಿಂದ ಬರೆಯುತ್ತಿರುವುದನ್ನು ಕಾಣಬಹುದು. (Source)
ಈ ವಿಡಿಯೋವನ್ನು 67,500 ಇನ್‌ಸ್ಟಾಗ್ರಾಮ್ ಬಳಕೆದಾರರು ಲೈಕ್ ಮಾಡಿದ್ದಾರೆ. ಈಗಾಗಲೇ 266 ಜನರು ರೀಲ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ. “ಕತ್ತಿಗಿಂತಲೂ ಪೆನ್ನು ಶಕ್ತಿಯುತವಾದುದು ಎಂದು ಯಾಕೆ ಹೇಳುತ್ತಾರೆಂಬುದು ಈಗ ನನಗೆ ಅರ್ಥವಾಗಿದೆ.” ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಯುನೈಟೆಡ್ ಸ್ಟೇಟ್ಸ್‌ನ (ಅಮೆರಿಕಾ) ಫಿಶರ್ ಸ್ಪೇಸ್ ಪೆನ್ ಕಂಪನಿಯು ತಯಾರಿಸಿದ ಈ ಸ್ಪೇಸ್ ಪೆನ್ ಶ್ರೇಣಿಯು ವಿಸ್ಕೋ-ಎಲಾಸ್ಟಿಕ್ ಶಾಯಿಯನ್ನು ವಿತರಿಸಲು ವಿಶೇಷ ನೈಟ್ರೋಜನ್ ಪ್ರೆಷರೈಸ್ಡ್ ಕಾರ್ಟ್ರಿಡ್ಜ್‌ಗಳನ್ನು ಬಳಸುವುದರಿಂದ ಈ ಪೆನ್ ಗಿನ್ನೆಸ್ ವಿಶ್ವ ದಾಖಲೆಯನ್ನು ಗೆದ್ದುಕೊಂಡಿತು.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:14 pm, Tue, 10 May 22