ಸಾಕಷ್ಟು ಜನರಿಗೆ ಬೆಳಗ್ಗೆ ಮತ್ತು ಸಂಜೆ ಕಾಫಿ ಬೇಕೇ ಬೇಕು. ಒಂದೊಂದು ಸಿಪ್ ಆನಂದಿಸುತ್ತಾ ಕಾಫಿ ಕುಡಿಯುತ್ತಾರೆ. ಆದರೆ ಜರ್ಮನಿಯ ವ್ಯಕ್ತಿಯೊಬ್ಬರು ಒಂದು ಕಪ್ ಕಾಫಿ ಕುಡಿದು ವಿಶ್ವದಾಖಲೆ ಮಾಡಿದ್ದಾರೆ. ಅದು ಕೇವಲ 3 ಸೆಕೆಂಡ್‌ಗಳಲ್ಲಿ ಈ ಕಪ್ ಕಾಫಿ ಕುಡಿದು ಮುಗಿಸಿದ್ದಾರೆ. ವ್ಯಕ್ತಿಯ ಹೆಸರು ಫೆಲಿಕ್ಸ್ ವಾನ್ ಮೈಬೊಮ್. ಜರ್ಮನಿಯ ಫ್ರಾಂಕ್‌ಫರ್ಟ್ ನಿವಾಸಿ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಫೆಲಿಕ್ಸ್ ಒಂದು ಕಪ್ ಕಾಫಿಯನ್ನು ಮಿಂಚಿನ ವೇಗದಲ್ಲಿ ಕುಡಿದು ಕುಡಿದು ದಾಖಲೆಯನ್ನು ನಿರ್ಮಿಸಿದ್ದಾರೆ.ಅದರ ವೀಡಿಯೊವನ್ನು ಈಗ ಗಿನ್ನೆಸ್ ವಿಶ್ವ ದಾಖಲೆಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಬ್ಲ್ಯಾಕ್ ಕಾಫಿಯನ್ನು ಕಾಫಿ ಮಗ್‌ಗೆ ಸುರಿಯಲಾಗುತ್ತದೆ. ಮೇಜೀನ ಮೇಲೆ ಮೊಬೈಲ್ನಲ್ಲಿ ಟೈಮ್ ಸೆಟ್ ಮಾಡಿ, ನಿಖರವಾಗಿ 3 ಸೆಕೆಂಡುಗಳಲ್ಲಿ ಒಂದೇ ಗುಟುಕಿಗೆ ಕುಡಿದು ಮುಗಿಸುವುದನ್ನು ಕಾಣಬಹುದು.
ಇದನ್ನೂ ಓದಿ: 500ರ ನೋಟಿನಲ್ಲಿ ಗಾಂಧಿ ಬದಲು ಶ್ರೀರಾಮನ ಫೋಟೋ; ಪೋಸ್ಟ್ ವೈರಲ್
ಈ ಆಸಕ್ತಿದಾಯಕ ದಾಖಲೆಯನ್ನು ನೋಡಿದ ನಂತರ, ಬಳಕೆದಾರರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ವ್ಯಕ್ತಿ ‘ನಾನು ಇದನ್ನು ಪ್ರತಿದಿನ ಬೆಳಿಗ್ಗೆ ಮಾಡುತ್ತೇನೆ’ ಎಂದು ತಮಾಷೆಯಾಗಿ ಬರೆದರೆ, ಇನ್ನೊಬ್ಬ ಬಳಕೆದಾರರು ‘ಇದು ನಾನು ಸಹ ಮಾಡಬಹುದಾದ ಕೆಲಸ’ ಎಂದು ಬರೆದಿದ್ದಾರೆ. ಅದೇ ಸಮಯದಲ್ಲಿ, ಒಬ್ಬ ಬಳಕೆದಾರನು ‘ನಾನು ಅವನನ್ನು ಸೋಲಿಸಬಲ್ಲೆ’ ಎಂದು ಬಹಳ ಆತ್ಮವಿಶ್ವಾಸದಿಂದ ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:39 pm, Wed, 17 January 24