AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರಾಮಾಯಣದ ತೊಗಲು ಗೊಂಬೆಯಾಟ ವೀಕ್ಷಿಸಿದ ಮೋದಿ, ಇದು ಕರ್ನಾಟಕದ ಶ್ರೀಮಂತ ಕಲೆ

ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಗೂ ಮುನ್ನ ಪ್ರಧಾನಿ ಮೋದಿ ಮಂಗಳವಾರ  ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.  ಈ ಸಂದರ್ಭದಲ್ಲಿ ಅವರು ದೇವರಿಗೆ ವಿಶೇಷ ಪೂಜೆಯನ್ನು  ಸಲ್ಲಿಸಿ, ಬಳಿಕ ರಾಮಾಯಣ ಮಹಾಕಾವ್ಯದ ತೊಗಲು ಗೊಂಬೆಯಾಟವನ್ನು ವೀಕ್ಷಿಸಿದ್ದಾರೆ.  ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

Viral Video: ರಾಮಾಯಣದ ತೊಗಲು ಗೊಂಬೆಯಾಟ ವೀಕ್ಷಿಸಿದ ಮೋದಿ, ಇದು ಕರ್ನಾಟಕದ ಶ್ರೀಮಂತ ಕಲೆ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Jan 17, 2024 | 7:13 PM

Share

ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಗೂ ಮುನ್ನ ಪ್ರಧಾನಿ ಮೋದಿ ರಾಮಾಯಣದ ಮಹತ್ವ ಮತ್ತು ಹಿನ್ನೆಲೆ ಹೊಂದಿದಂತಹ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಮಂಗಳವಾರದಂದು ಪ್ರಧಾನಿ ಮೋದಿ ಆಂಧ್ರ ಪ್ರದೇಶದ ಲೇಪಾಕ್ಷಿಯಲ್ಲಿರುವ  ವೀರಭದ್ರ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ತೆಳುಗಿನಲ್ಲಿರುವ  ರಂಗನಾಥ ರಾಮಾಯಣದ ಪದ್ಯಗಳನ್ನೂ ಆಲಿಸಿದರು. ಅಲ್ಲದೆ ದೇವಾಲಯದಲ್ಲಿ ರಾಮಾಯಣ ಮಹಾಕಾವ್ಯದ ತೊಗಲು ಗೊಂಬೆಯಾಟವನ್ನು ಸಹ ವೀಕ್ಷಿಸಿದ್ದಾರೆ. ಪ್ರಧಾನಿ ಮೋದಿಯವರು ತೊಗಲು ಗೊಂಬೆಯಾಟವನ್ನು ವೀಕ್ಷಿಸುತ್ತಿರುವ ವೀಡಿಯೋ ತುಣುಕುಗಳು ಸಾಮಾಜಿಕ  ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ರಾಮಾಯಣ ಹಾಗೂ ಶಿವನ  ಕಥೆಗಳಿಗೆ ಕುರುಹಾಗಿ ನಿಂತಿರುವ ಲೇಪಾಕ್ಷಿ  ರಾಮಾಯಣಕ್ಕೆ ಸಂಬಂಧಿಸಿದ ಪ್ರಾಚೀನ ಗ್ರಾಮವಾಗಿದೆ. ಪುರಾತನ ಗ್ರಂಥಗಳ ಪ್ರಕಾರ,  ರಾವಣನಿಂದ ಅಪಹರಿಸ್ಪಟ್ಟ ಸೀತಾ ದೇವಿಯನ್ನು ರಕ್ಷಿಸಲು  ಜಟಾಯು ಹೊರಟಾಗ, ರಾವಣನ ಮೋಸದಾಟಕ್ಕೆ ತನ್ನ ರೆಕ್ಕೆಗಳನ್ನು ಕಳೆದುಕೊಂಡು  ಹಾರಲು ಕಷ್ಟವಾಗಿ ಜಟಾಯು  ಬಿದ್ದಂತಹ  ಸ್ಥಳವೇ ಲೇಪಾಕ್ಷಿ ಎಂದು ಹೇಳಲಾಗುತ್ತದೆ.

ಪ್ರಧಾನಿ ಮೋದಿಯವರು ಮಾತ್ರವಲ್ಲದೆ @BJPIndia ಕೂಡಾ X ನಲ್ಲಿ ಪ್ರಧಾನಿ ಮೋದಿಯವರು ಮಹಾಕಾವ್ಯ ರಾಮಾಯಣದ ತೊಗಲು ಗೊಂಬೆಯಾಟವನ್ನು ವೀಕ್ಷಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿ ರಾಮಾಯಣದ ತೊಗಲು ಗೊಂಬೆಯಾಟವನ್ನು ವೀಕ್ಷಿಸುತ್ತಿರುವ ಕ್ಷಣಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ಇದನ್ನೂ ಓದಿ:  ಅಯೋಧ್ಯೆ ತಲುಪಿದ ರಾಮ, ಸೀತೆ ಮತ್ತು ಲಕ್ಷ್ಮಣ

ತೊಗಲು ಗೊಂಬೆಯಾಟದ ಹಿನ್ನಲೆ:

ಕರ್ನಾಟಕದ ಶ್ರೀಮಂತ ಕಲೆಗಳಲ್ಲಿ ಗೊಂಬೆಯಾಟವು ಒಂದು. ಈ ಗೊಂಬೆಯಾಟದ  ಪ್ರಕಾರಗಳಲ್ಲಿ ತೊಗಲು ಗೊಂಬೆಯಾಟಕ್ಕೆ ವಿಶಿಷ್ಟ ಸ್ಥಾನವಿದೆ. ಇದನ್ನು ನೆರಳು ಗೊಂಬೆಯಾಟವೆಂದೂ ಕರೆಯುತ್ತಾರೆ.  ಒಂದು ಕಾಲದಲ್ಲಿ ತೊಗಲು ಗೊಂಬೆಯಾಟ ಸಿನಿಮಾದಷ್ಟೇ ಆಕರ್ಷಣೆ ಹೊಂದಿದ್ದ ಜಾನಪದ ಕಲೆಯಾಗಿತ್ತು. ಆಗಿನ ಕಾಲದಲ್ಲಿ ಗೊಂಬೆಯಾಡಿಸುವ ಗೊಂಬೆರಾಮರು ಸುಗ್ಗಿಯ ಸಮಯದಲ್ಲಿ ಹೆಚ್ಚಾಗಿ ಹಳ್ಳಿಗಳ ಕಡೆಗಳಲ್ಲಿ ಗೊಂಬೆಯಾಟದ ಪ್ರದರ್ಶನವನ್ನು ನೀಡುತ್ತಿದ್ದರು.

ಮೊದಮೊದಲು ಗೊಂಬೆರಾಮರು ಗೊಂಬೆಗಳನ್ನು ಜಿಂಕೆಯ ಚರ್ಮದಿಂದ ಮಾಡುತ್ತಿದ್ದರು, ಆದರೆ ನಂತರದಲ್ಲಿ ಮೇಕೆಯ ಚರ್ಮಗಳನ್ನು ಬಳಸಲು ಆಂಭಿಸಿದರು. ತೊಗಲು ಗೊಂಬೆ ಆಡಿಸುವುದು ಒಂದು ಕಲೆಯಾದರೆ,  ಆ ಗೊಂಬೆಯನ್ನು ಮಾಡುವುದು ಕೂಡಾ ಒಂದು ಕುಶಲ ಕಲೆಯಾಗಿದೆ. ಗೊಂಬೆರಾಮರು  ಮೇಕೆ ಚರ್ಮವನ್ನು ಹದ ಮಾಡಿ ಒಣಗಿಸಿ, ಪಾತ್ರಗಳಿಗೆ ತಕ್ಕಂತೆ ತೊಗಲನ್ನು ಕತ್ತರಿಸಿ,  ಯಾವ ಪಾತ್ರಗಳಿಗೆ ಯಾವ ಬಣ್ಣ ಹಾಕಬೇಕು ಎಂಬುದನ್ನು ನೋಡಿಕೊಂಡು ಬಣ್ಣ ಹಚ್ಚುತ್ತಿದ್ದರು. ಮತ್ತು ಬಿದಿರಿನ ಕಡ್ಡಿಯನ್ನು ಬಳಸಿಕೊಂಡ ಚಿತ್ರಗಳ ರೂಪವನ್ನು ರಚಿಸುತ್ತಿದ್ದರು. ಒಂದು ಕಾಲದಲ್ಲಿ ರಾಮಾಯಣ ಮತ್ತು ಮಹಾಭಾರತದಂತಹ ಪ್ರಸಂಗಗಳನ್ನು ಜನರಿಗೆ ತಲುಪಿಸುವಲ್ಲಿ ತೊಗಲು ಗೊಂಬೆಯಾಟ ಅಗ್ರ ಪಂಕ್ತಿಯಲ್ಲಿತ್ತು. ಆದರೆ ಇಂದು ತಂತ್ರಜ್ಞಾನ, ಆಧುನಿಕತೆಯ ನಾಗಾಲೋಟಕ್ಕೆ ಸಿಲುಕಿ  ತೊಗಲು ಗೊಂಬೆಯಾಟ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯದಲ್ಲಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!