Guinness World Records: 1ಗಂಟೆಯಲ್ಲಿ 1,123 ಮರಗಳನ್ನು ತಬ್ಬಿ ವಿಶ್ವ ದಾಖಲೆ ಬರೆದ ವ್ಯಕ್ತಿ

ಪ್ರತಿ ಮೂರು ಸೆಕೆಂಡಿಗೆ ಒಂದು ಮರವನ್ನು ಅಪ್ಪಿಕೊಳ್ಳುವ ಮೂಲಕ ಒಂದು ಘಂಟೆಯಲ್ಲಿ 1,123 ಮರಗಳನ್ನು ತಬ್ಬಿ ವಿಶ್ವ ದಾಖಲೆ ಮಾಡಿದ್ದಾರೆ. ಇದಲ್ಲದೇ ಈ ದಾಖಲೆ ಮಾಡುವಂತಹ ಸಂದರ್ಭದಲ್ಲಿ ಅಬುಬಕರ್ ರಂಜಾನ್ ಉಪವಾಸ ಮಾಡುತ್ತಿದ್ದು, ಹೀಗಾಗಿ ಒಂದು ಹನಿ ನೀರನ್ನು ಕುಡಿಯದೇ ದಾಖಲೆ ಬರೆದಿದ್ದಾರೆ ಎಂದು ಗಿನ್ನೆಸ್ ವಿಶ್ವ ದಾಖಲೆಯ ಪ್ರಕಟಣೆಯಲ್ಲಿ ತಿಳಿಸಿದೆ.

Guinness World Records: 1ಗಂಟೆಯಲ್ಲಿ 1,123 ಮರಗಳನ್ನು ತಬ್ಬಿ ವಿಶ್ವ ದಾಖಲೆ ಬರೆದ ವ್ಯಕ್ತಿ
Guinness World Records

Updated on: May 08, 2024 | 4:23 PM

ಆಫ್ರಿಕಾದ ಘಾನಾದ ವಿದ್ಯಾರ್ಥಿ ಅಬುಬಕರ್ ತಾಹಿರು(29) 1ಗಂಟೆಯಲ್ಲಿ 1,123 ಮರಗಳನ್ನು ತಬ್ಬಿಕೊಳ್ಳುವ ಮೂಲಕ ಗಿನ್ನೆಸ್​ ವಿಶ್ವ ದಾಖಲೆ (Guinness World Records) ಯನ್ನು ಬರೆದಿದ್ದಾನೆ. ಅಮೆರಿಕಾದ ಅಲಬಾಮಾದಲ್ಲಿರುವ ಟುಸ್ಕೆಗೀ ರಾಷ್ಟ್ರೀಯ ಅರಣ್ಯದಲ್ಲಿ ಒಂದು ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಳ್ಳುವ ಮೂಲಕ ವರ್ಲ್ಡ್ ರೆಕಾರ್ಡ್ ಮಾಡಿದ್ದಾನೆ. ಆತ ಮರಗಳನ್ನು ಅಪ್ಪಿಕೊಳ್ಳುವ ವಿಡಿಯೋವನ್ನು ಗಿನ್ನೆಸ್​ ವಿಶ್ವ ದಾಖಲೆಯ ಅಧಿಕೃತ ಇನ್ಸ್ಟಾಗ್ರಾಮ್​ ಪುಟದಲ್ಲಿ ಹಂಚಿಕೊಳ್ಳಲಾಗಿದೆ.

@guinnessworldrecords ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಮೇ 05ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಮೂರು ದಿನಗಳಲ್ಲಿ 9ಲಕ್ಷದ 98ಸಾವಿರ ವೀಕ್ಷಣೆಯನ್ನು ಪಡೆದುಕೊಂಡಿದೆ. ಸದ್ಯ ವಿಡಿಯ ಎಲ್ಲೆಡೆ ಭಾರೀ ವೈರಲ್​ ಆಗುತ್ತಿದೆ.

ಮರವನ್ನು ತಬ್ಬಿಕೊಳ್ಳುವ ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ವಿದ್ಯಾರ್ಥಿಗೆ ಪರೀಕ್ಷೆಯಲ್ಲಿ 200ಕ್ಕೆ 212 ಅಂಕ, ಇದು ಹೇಗೆ ಸಾಧ್ಯ?

ಪ್ರತಿ ಮೂರು ಸೆಕೆಂಡಿಗೆ ಒಂದು ಮರವನ್ನು ಅಪ್ಪಿಕೊಳ್ಳುವ ಮೂಲಕ ಒಂದು ಘಂಟೆಯಲ್ಲಿ 1,123 ಮರಗಳನ್ನು ತಬ್ಬಿ ವಿಶ್ವ ದಾಖಲೆ ಮಾಡಿದ್ದಾರೆ. ಇದಲ್ಲದೇ ಈ ದಾಖಲೆ ಮಾಡುವಂತಹ ಸಂದರ್ಭದಲ್ಲಿ ಅಬುಬಕರ್ ರಂಜಾನ್ ಉಪವಾಸ ಮಾಡುತ್ತಿದ್ದು, ಹೀಗಾಗಿ ಒಂದು ಹನಿ ನೀರನ್ನು ಕುಡಿಯದೇ ದಾಖಲೆ ಬರೆದಿದ್ದಾರೆ ಎಂದು ಗಿನ್ನೆಸ್ ವಿಶ್ವ ದಾಖಲೆಯ ಪ್ರಕಟಣೆಯಲ್ಲಿ ತಿಳಿಸಿದೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us