ಸರಿಯಾದ ಸಮಯಕ್ಕೆ ಬ್ಲೌಸ್ ನೀಡಲು ವಿಫಲನಾದ ಟೈಲರ್, 7000 ರೂ ದಂಡ ವಿಧಿಸಿದ ಕೋರ್ಟ್

ನಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಕೆಲವು ಘಟನೆಗಳನ್ನು ನೋಡಿದಾಗ ನಂಬಲು ಕಷ್ಟವಾಗುತ್ತದೆ. ಆದರೆ ಇಲ್ಲೊಂದು ಕಡೆ ಮಹಿಳೆಯೂ, ಸರಿಯಾದ ಸಮಯಕ್ಕೆ ಬ್ಲೌಸ್ ನೀಡದಿದ್ದಕ್ಕಾಗಿ ಟೈಲರ್ ವಿರುದ್ಧ ದೂರು ನೀಡಿದ್ದಾಳೆ. ಈ ದೂರಿನ ಮೇರೆಗೆ ಗ್ರಾಹಕ ಕೋರ್ಟ್‌ ಆತನಿಗೆ ಬರೋಬ್ಬರಿ ಏಳು ಸಾವಿರ ರೂ ದಂಡ ವಿಧಿಸಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಸರಿಯಾದ ಸಮಯಕ್ಕೆ ಬ್ಲೌಸ್ ನೀಡಲು ವಿಫಲನಾದ ಟೈಲರ್, 7000 ರೂ ದಂಡ ವಿಧಿಸಿದ ಕೋರ್ಟ್
ಸಾಂದರ್ಭಿಕ ಚಿತ್ರ
Image Credit source: Pinterest

Updated on: Oct 28, 2025 | 4:47 PM

ಗುಜರಾತ್, ಅಕ್ಟೋಬರ್ 28: ನೀವೇನಾದ್ರೂ ಟೈಲರ್ (tailor) ಆಗಿದ್ದು ನಿಮ್ಮ ಬಳಿ ಬ್ಲೌಸ್ ಹೊಲಿಸಲು ಬರುವ ಮಹಿಳೆಯರಿಗೆ ಸರಿಯಾದ ಸಮಯಕ್ಕೆ ಬ್ಲೌಸ್ ತಲುಪಿಸುವುದು ಒಳ್ಳೆಯದು. ನಿಮ್ಮ ನಿರ್ಲಕ್ಷ್ಯ ಅಥವಾ ಒಪ್ಪಿಕೊಂಡ ಕೆಲಸ ಮಾಡದಿದ್ದಲ್ಲಿ ನಿಮ್ಗೂ ಕೂಡ ಇಂತಹದ್ದೇ ಪರಿಸ್ಥಿತಿ ಬರಬಹುದು. ಹೌದು, ಮಹಿಳೆಯೊಬ್ಬರಿಗೆ ಸರಿಯಾದ ಸಮಯಕ್ಕೆ ಬ್ಲೌಸ್ ನೀಡದೇ ಇದದ್ದೇ ಟೈಲರ್‌ಗೆ ನುಂಗಲಾರದ ಬಿಸಿ ತುತ್ತಾಗಿ ಪರಿಣಮಿಸಿದೆ. ಗ್ರಾಹಕ ನ್ಯಾಯಾಲಯವು ಟೈಲರ್‌ಗೆ ಏಳು ಸಾವಿರ ರೂ ದಂಡ ವಿಧಿಸಿದ್ದು ಹಾಗೂ ಬ್ಲೌಸ್ ಹೊಲಿಯಲು ನೀಡಲಾಗಿದ್ದ ಪೂರ್ಣ ಮೊತ್ತವನ್ನು ಮರುಪಾವತಿಸುವಂತೆ ಆದೇಶಿಸಿದೆ. ಈ ಘಟನೆಯೂ ನಡೆದಿರುವುದು ಗುಜರಾತ್‌ನ ಅಹಮದಾಬಾದ್‌ನಲ್ಲಿ (Ahmedabad of Gujarat) ಎನ್ನಲಾಗಿದೆ.

ಮಹಿಳಾ ಗ್ರಾಹಕಿಯ ನಂಬಿಕೆಗೆ ಮೋಸ, ಏನಿದು ಘಟನೆ?

ಮದುವೆಯ ರವಿಕೆಯನ್ನು ಸಮಯಕ್ಕೆ ಸರಿಯಾಗಿ ತಲುಪಿಸುವಲ್ಲಿ ಟೈಲರ್ ವಿಫಲವಾಗಿದ್ದು, ಈ ಕಾರಣವೇ ಕೋರ್ಟ್‌ ಮೆಟ್ಟಿಲೇರಲು ಪ್ರಮುಖ ಕಾರಣವಾಗಿದೆ. ಈ ಘಟನೆಯೂ ನಡೆದಿರುವುದು ಡಿಸೆಂಬರ್ 24, 2024 ರಲ್ಲಿ. ಮಹಿಳೆಯೊಬ್ಬಳು ತಮ್ಮ ಸಂಬಂಧಿಕರೊಬ್ಬರ ಮದುವೆಗೆ ಹಾಜರಾಗಬೇಕಾಗಿತ್ತು. ಹೀಗಾಗಿ ಅಹಮದಾಬಾದ್‌ನ ಮಹಿಳಾ ಗ್ರಾಹಕಿರೊಬ್ಬರು ಟೈಲರ್ ಬ್ಲೌಸ್ ಹೊಲಿಯಲು ನೀಡಿದ್ದಳು. ಅಷ್ಟೇ ಅಲ್ಲದೇ ಮಹಿಳೆ ಬ್ಲೌಸ್ ಹೊಲಿಯಲು ಟೈಲರ್‌ಗೆ ಮುಂಗಡವಾಗಿ 4,395 ರೂ.ಗಳನ್ನು ನೀಡಿದ್ದಳು. ಮದುವೆಗೆ ಮೊದಲು ಬ್ಲೌಸ್ ಅನ್ನು ಸಿದ್ಧಪಡಿಸುವುದಾಗಿ ಟೈಲರ್ ಭರವಸೆ ನೀಡಿದ್ದರು. ಹೀಗಿರುವಾಗ ಡಿಸೆಂಬರ್ 14 ರಂದು ಬ್ಲೌಸ್ ತೆಗೆದುಕೊಳ್ಳಲು ಹೋದಾಗ ಬ್ಲೌಸ್ ಹೇಳಿದ್ದ ಅಳತೆ ಹಾಗೂ ವಿನ್ಯಾಸದ ಪ್ರಕಾರವಾಗಿ ಹೊಲಿದಿರಲಿಲ್ಲ. ಸರಿ ಮಾಡಿ ಕೊಡುವುದಾಗಿ ಹೇಳಿದ್ದ ಟೈಲರ್ ಡಿಸೆಂಬರ್ 24 ದಾಟಿದರೂ  ಮಹಿಳೆಯ ಕೈಗೆ ಬ್ಲೌಸ್ ತಲುಪಲಿಲ್ಲ.

ಇದನ್ನೂ ಓದಿ:ಮದುವೆಯಾದ ಕೆಲವೇ ನಿಮಿಷಗಳಲ್ಲಿ ವಿಡಿಯೋ KYC ಮೂಲಕ ಮದುವೆ ನೋಂದಣಿ ಮಾಡಿಕೊಂಡ ಕೇರಳದ ದಂಪತಿ

ಇದನ್ನೂ ಓದಿ
ವಿಡಿಯೋ KYC ಮೂಲಕ ಮದುವೆ ನೋಂದಣಿ ಮಾಡಿಕೊಂಡ ಕೇರಳದ ದಂಪತಿ
ಜನರು ರಾತ್ರಿ ಮನೆಗೆ ಬೀಗ ಹಾಕದ ದೇಶ ಇದು...
24ರ ಯುವತಿಯ ಕೈಹಿಡಿದ 74ರ ವೃದ್ಧ, ಮುಂದೇನಾಯ್ತು ನೋಡಿ
ಪತಿಯ ವಿಚ್ಛೇದನ ಅರ್ಜಿ ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್

ಕೊನೆಗೆ ಮಹಿಳಾ ಗ್ರಾಹಕಿಯೂ ಟೈಲರ್‌ಗೆ ಕಾನೂನು ನೋಟಿಸ್ ಕಳುಹಿಸಿ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆದರೆ ಟೈಲರ್ ಅಹಮದಾಬಾದ್ ಗ್ರಾಹಕ ವಿವಾದ ಪರಿಹಾರ ಆಯೋಗದ ಮುಂದೆ ಹಾಜರಾಗಲಿಲ್ಲ. ಆಯೋಗವು ಟೈಲರ್‌ ಬ್ರೌಸ್ ಒದಗಿಸಲು ವಿಫಲವಾಗಿರುವುದನ್ನು ಕಂಡು ಸೇವೆಯಲ್ಲಿ ಸ್ಪಷ್ಟವಾದ ಕೊರತೆ ಎಂದು ದೃಢಪಡಿಸಿದ್ದು ಹಾಗೂ ದೂರು ನೀಡಿದ್ದ ಮಹಿಳೆ ಮಾನಸಿಕ ಕಿರುಕುಳ ಅನುಭವಿಸಿದ್ದಾಳೆ ಎಂದು ತಿಳಿಸಿದೆ. ನ್ಯಾಯಾಲಯವು ಟೈಲರ್‌ಗೆ 4,395 ಮೊತ್ತವನ್ನು ಮರುಪಾವತಿಸಲು ಹೇಳಿದೆ. 7% ವಾರ್ಷಿಕ ಬಡ್ಡಿ ಮತ್ತು ಮಾನಸಿಕ ಯಾತನೆ ಮತ್ತು ಮೊಕದ್ದಮೆ ವೆಚ್ಚಗಳಿಗೆ ಹೆಚ್ಚುವರಿ ಪರಿಹಾರವನ್ನು ನೀಡಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:47 pm, Tue, 28 October 25