AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರೆನ್ಸಿ ಇಲ್ಲ, ದೊಡ್ಡ ಸೇನೆ ಇಲ್ಲ, ಕಳ್ಳಕಾಕರಿಲ್ಲ; ರಾತ್ರಿ ಮನೆಗಳಿಗೆ ಬೀಗ ಹಾಕಲ್ಲ; ಜಗತ್ತಿನಲ್ಲಿದೆ ಇಂಥದ್ದೂ ಒಂದು ದೇಶ

Liechtenstein, the amazing tiny nation in the earth: ಕಳ್ಳಕಾಕರು, ಪೊಲೀಸರು, ಮಿಲಿಟರಿಯವರು ಬಹಳ ಕಡಿಮೆ ಇರುವ ದೇಶವೆಂದರೆ ಲೀಕ್ಟನ್​ಸ್ಟೀನ್. ಯೂರೋಪ್​ನಲ್ಲಿ ಸ್ವಿಟ್ಜರ್​ಲ್ಯಾಂಡ್ ಮತ್ತು ಆಸ್ಟ್ರಿಯಾ ನಡುವೆ ಲ್ಯಾಂಡ್ ಲಾಕ್ ಆಗಿರುವ ಲೀಕ್ಟನ್​ಸ್ಟೀನ್ ಅತ್ಯುತ್ತಮ ಆದಾಯ ಇರುವ ದೇಶ. ಇಲ್ಲಿಯ ಜನಸಂಖ್ಯೆಗಿಂತ ಹೆಚ್ಚು ಸಂಖ್ಯೆಯಲ್ಲಿ ನೊಂದಾಯಿತ ಕಂಪನಿಗಳಿವೆ. ಇಲ್ಲಿ ಮನೆಗಳಿಗೆ ಜನರು ಲಾಕ್ ಮಾಡದೇ ಮಲಗುತ್ತಾರೆ, ಅಷ್ಟು ಸುರಕ್ಷಿತ.

ಕರೆನ್ಸಿ ಇಲ್ಲ, ದೊಡ್ಡ ಸೇನೆ ಇಲ್ಲ, ಕಳ್ಳಕಾಕರಿಲ್ಲ; ರಾತ್ರಿ ಮನೆಗಳಿಗೆ ಬೀಗ ಹಾಕಲ್ಲ; ಜಗತ್ತಿನಲ್ಲಿದೆ ಇಂಥದ್ದೂ ಒಂದು ದೇಶ
ಲೀಕ್ಟನ್​ಸ್ಟೀನ್ ದೇಶ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Oct 24, 2025 | 11:21 PM

Share

ನೀವು ಎಂಥ ಜಾಗದಲ್ಲಿ ವಾಸಿಸಲು ಇಷ್ಟಪಡುತ್ತೀರಿ…? ಯಾವ ಭಯವೂ ಇಲ್ಲದೆ ಮುಕ್ತವಾಗಿರುವ, ಅತ್ಯಂತ ಸುರಕ್ಷಿತ ಸ್ಥಳದಲ್ಲಿ, ಮತ್ತು ಅತ್ಯಂತ ಶ್ರೀಮಂತ ಪ್ರದೇಶದಲ್ಲಿ ಸುಖವಾಗಿ ಬದುಕಬೇಕೆಂಬ ಕನಸು ಎಲ್ಲರಿಗೂ ಇರುತ್ತದೆ. ನೀವು ಅಂಥ ಕನಸುಗಾರರಾಗಿದ್ದರೆ ನಿಮಗೆ ಸೂಕ್ತವಾಗುವ ದೇಶವೊಂದು ಇದೆ. ಇದು ಯೂರೋಪ್​ನಲ್ಲಿರುವ ಬಹಳ ಪುಟ್ಟದಾದ ಲೀಕ್ಟನ್​ಸ್ಟೀನ್ ದೇಶ (Liechtenstein). ವಿಶ್ವದಲ್ಲಿ ಅತಿಹೆಚ್ಚು ತಲಾದಾಯ ಹೊಂದಿರುವ ದೇಶಗಳ ಮೊದಲ ಸಾಲಿನಲ್ಲಿ ಇದು ಬರುತ್ತದೆ.

ಸ್ವಿಟ್ಜರ್​ಲ್ಯಾಂಡ್ ಮತ್ತು ಆಸ್ಟ್ರಿಯಾ ನಡುವೆ ಇರುವ ಲೀಕ್ಟನ್​ಸ್ಟೀನ್ ಒಂದು ಪುಟ್ಟ ದೇಶ. ಇಲ್ಲಿ ಏರ್​ಪೋರ್ಟ್ ಇಲ್ಲ, ಸ್ವಂತ ಕರೆನ್ಸಿ ಇಲ್ಲ. ಆದರೂ ಕೂಡ ಶ್ರೀಮಂತ ನಾಡೆನಿಸಿದೆ. ಇಲ್ಲಿ ಅಪರಾಧವೇ ನಡೆಯದೇನೋ ಅನ್ನುವಷ್ಟು ಮಾತ್ರ ಕ್ರೈಮ್ ರೇಟ್ ಇರುವುದು. ಇಲ್ಲಿಯ ಜನರು ತಮ್ಮ ಮನೆಗಳಿಗೆ ಸಾಮಾನ್ಯವಾಗಿ ಬೀಗ ಹಾಕುವುದೇ ಇಲ್ಲ. ಅಷ್ಟರಮಟ್ಟಿಗೆ ಸುರಕ್ಷಿತವಾಗಿದೆ ಈ ದೇಶ. ಇಷ್ಟು ಸುರಕ್ಷತೆ ಇದೆ ಎಂದರೆ ಇಲ್ಲಿ ಬಲಿಷ್ಠವಾದ ಪೊಲೀಸ್ ಮತ್ತು ಸೇನಾ ವ್ಯವಸ್ಥೆ ಇರಬೇಕೆಂದು ನೀವು ಭಾವಿಸಿದ್ದರೆ ಅದೂ ಸುಳ್ಳು. ಬಹಳ ಕಡಿಮೆ ಪೊಲೀಸ್ ಮತ್ತು ಮಿಲಿಟರಿ ಉಪಸ್ಥಿತಿ ಇದೆ.

ಇದನ್ನೂ ಓದಿ: ತಿಂಗಳಿಗೆ 21,000-26,000 ರೂ ಹೂಡಿಕೆ; 10 ವರ್ಷದಲ್ಲಿ 50 ಲಕ್ಷ ರೂ ಗಳಿಕೆ

ಅರೆ, ಇದು ಹೇಗೆ ಸಾಧ್ಯ? ಲೀಕ್ಟನ್​ಸ್ಟೀನ್ ದೇಶವು ತನ್ನ ಸುತ್ತಲಿನ ಪರಿಸರ ಮತ್ತು ದೇಶಗಳೊಂದಿಗೆ ಉತ್ತಮ ತಾಳಮೇಳ ಹೊಂದಿದೆ. ಸ್ವಿಟ್ಜರ್​ಲೆಂಡ್ ಮತ್ತು ಆಸ್ಟ್ರಿಯಾ ದೇಶಗಳ ಸಾರಿಗೆ ನೆಟ್ವರ್ಕ್ ಅನ್ನೇ ತನ್ನ ನಾಡಿಗೆ ವಿಸ್ತರಿಸಿಕೊಂಡಿದೆ. ಸ್ವಿಟ್ಜರ್​ಲೆಂಡ್​ನ ಸ್ವಿಸ್ ಫ್ರಾಂಕ್ ಕರೆನ್ಸಿಯನ್ನೇ ಇದು ಬಳಸುತ್ತದೆ. ಇದರೊಂದಿಗೆ ಸ್ವಂತವಾದ ಸೆಂಟ್ರಲ್ ಬ್ಯಾಂಕ್ ಇಟ್ಟುಕೊಳ್ಳುವ ಗೋಜಲು ಇರುವುದಿಲ್ಲ.

ಲೀಕನ್​ಸ್ಟೀನ್ ಪುಟ್ಟ ದೇಶವಾದರೂ ಉತ್ಪಾದನೆಯಲ್ಲಿ ದೈತ್ಯ

ಲೀಕ್ಟನ್​ಸ್ಟೀನ್ ದೇಶದ ಒಟ್ಟು ವಿಸ್ತೀರ್ಣ 160 ಚದರ ಕಿಮೀ ಮಾತ್ರ. ಇಲ್ಲಿಯ ಜನಸಂಖ್ಯೆ ಕೇವಲ 42,000 ಆಸುಪಾಸಿನಷ್ಟೇ ಇರುವುದು. ಬೆಂಗಳೂರಿನ ಒಂದು ಪುಟ್ಟ ಏರಿಯಾದಲ್ಲೇ ಇದಕ್ಕಿಂತ ಹೆಚ್ಚು ಜನರು ಇರುತ್ತಾರೆ.

ಇದನ್ನೂ ಓದಿ: ಭಾರತದಿಂದ 7nm ಚಿಪ್ ಯೋಜನೆ; ಇದಾಗಲಿದೆ ಗೇಮ್ ಚೇಂಜರ್; ಯಾಕೆ ಈ ಚಿಪ್ ಮಹತ್ವದ್ದು ಗೊತ್ತಾ?

ಈ ದೇಶ ಸಾಲವೇ ಹೊಂದಿಲ್ಲ. ಇಲ್ಲಿರುವ ಜನರು ಪ್ರಯೋಗಶೀಲತೆ ಮತ್ತು ನಾವೀನ್ಯತೆಯಲ್ಲಿ ಪಳಗಿದವರು. ಎಂಜಿನಿಯರಿಂಗ್​ನಲ್ಲಿ ನಿಷ್ಣಾತರು. ಅಂತೆಯೇ, ಇಲ್ಲಿ ಉತ್ಕೃಷ್ಟವಾದ ಮ್ಯಾನುಫ್ಯಾಕ್ಚರಿಂಗ್ ಸೌಕರ್ಯ ಇದೆ. ಸ್ವಿಟ್ಜರ್​ಲೆಂಡ್ ರೀತಿಯಲ್ಲಿ ಪ್ರಿಸಿಶಿನ್ ಮ್ಯಾನುಫ್ಯಾಕ್ಚರಿಂಗ್​ನಲ್ಲಿ ಲೀಕ್ಟನ್​ಸ್ಟೀನ್ ಜನರು ನಿಷ್ಣಾತರಾಗಿದ್ದಾರೆ. ಇಲ್ಲಿರುವ ಜನಸಂಖ್ಯೆಯಿಂದ ನೊಂದಾಯಿತ ಕಂಪನಿಗಳ ಸಂಖ್ಯೆಯೇ ಹೆಚ್ಚು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:18 pm, Fri, 24 October 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ