AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆತನಿಗೆ ಹೆಂಡತಿಯಲ್ಲ, ಸೇವಕಿ ಬೇಕಾಗಿರುವುದು, ಪತಿಯ ವಿಚ್ಛೇದನ ಅರ್ಜಿ ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್​

ಕರ್ನಾಟಕ ಹೈಕೋರ್ಟ್ ವಿಚ್ಛೇದನ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದೆ. ದಾಂಪತ್ಯದಲ್ಲಿ ಸಣ್ಣ ಜಗಳ ಸಹಜ, ಮಾತುಕತೆಯಿಂದ ಪರಿಹರಿಸಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ಆತನಿಗೆ ಬೇಕಿರುವುದು ಸಂಗಾತಿಯ ಬದಲು ಸೇವಕಿ ಎಂದು ಕೋರ್ಟ್​ ತರಾಟೆಗೆ ತೆಗೆದುಕೊಂಡಿದೆ. ಮದುವೆ ಮಕ್ಕಳಾಟವಲ್ಲ, ಪರಸ್ಪರ ರಾಜಿ ಮತ್ತು ಹೊಂದಾಣಿಕೆಯಿಂದ ವೈವಾಹಿಕ ಜೀವನ ನಡೆಸಬೇಕು ಎಂದು ಕೋರ್ಟ್ ಹೇಳಿದೆ.

ಆತನಿಗೆ ಹೆಂಡತಿಯಲ್ಲ, ಸೇವಕಿ ಬೇಕಾಗಿರುವುದು, ಪತಿಯ ವಿಚ್ಛೇದನ ಅರ್ಜಿ ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್​
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Oct 23, 2025 | 4:49 PM

Share

ಬೆಂಗಳೂರು, ಅ.23: ವೈವಾಹಿಕ ಜೀವನದಲ್ಲಿ ಕೋಪ, ಜಗಳ ಬರುವುದು ಸಹಜ, ಅದನ್ನು ಸುಧಾರಿಸಿಕೊಂಡು ಹೋಗುವುದು ಪ್ರತಿಯೊಬ್ಬ ದಂಪತಿಗಳ ಕರ್ತವ್ಯ, ಆದರೆ ಇಂದಿನ ಕಾಲದಲ್ಲಿ ಚಿಕ್ಕ ಸಮಸ್ಯೆಯನ್ನು ದೊಡ್ಡದ್ದು ಮಾಡಿ ವಿಚ್ಛೇದನದವರೆಗೆ (Rejects Divorce Plea) ಹೋಗುತ್ತಾರೆ. ಆದರೆ ಕೋರ್ಟ್​​​ ಇಂತಹ ಪ್ರಕರಣದಲ್ಲಿ ತುಂಬಾ ಯೋಚನೆ ಮಾಡಿ ತಿರ್ಮಾನವನ್ನು ತೆಗೆದುಕೊಳ್ಳುತ್ತದೆ. ಕೆಲವೊಂದು ಸಂಬಂಧಗಳನ್ನು ಉಳಿಸುವ ಪ್ರಯತ್ನವನ್ನು ಕೋಟ್​​​ ಮಾಡುತ್ತದೆ. ಇದೀಗ ಇಲ್ಲೊಂದು ಅಂತಹದೇ ಘಟನೆಯೊಂದು ನಡೆದಿದೆ. ವಿಚ್ಛೇದನ ಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ (Karnataka High Court ) ತಿರಸ್ಕರಿಸಿದ್ದು, ಇದು ದೊಡ್ಡ ಸಮಸ್ಯೆಯೇ ಅಲ್ಲ ಎಂದು ಹೇಳಿದೆ. ಈ ವಿಚಾರವನ್ನು ಇಬ್ಬರು ಮಾತುಕತೆ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ಹೇಳಿದೆ. ಇನ್ನು ಈ ವಿಚ್ಛೇದನ ಕೇಳುತ್ತಿರುವ ವ್ಯಕ್ತಿಗೆ ಪತ್ನಿ ಅಲ್ಲ ಬೇಕಿರುವುದು ಪ್ರಾಮಾಣಿಕ ಸೇವಕಿ ಎಂದು ಕೋಟ್​​​​​ ತರಾಟೆಗೆ ತೆಗೆದುಕೊಂಡಿದೆ.

ಹೈಕೋರ್ಟ್​​​ ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ಉಮೇಶ್ ಅಡಿಗ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶವನ್ನು ನೀಡಿದೆ. ಈ ಹಿಂದೆ ಅಂದರೆ ಸೆಪ್ಟೆಂಬರ್ 15 ರಂದು ಇದೇ ಪೀಠ ಸಾರ್ವಜನಿಕವಾಗಿ ಒಂದು ವಿಷಯವನ್ನು ಪ್ರಸ್ತಾಪ ಮಾಡಿತ್ತು. ಮದುವೆ ಎಂಬುದು ಮಕ್ಕಳಾಟ ಅಲ್ಲ, ಕೇಳಿದಾಗ ನಿಮಗೆ ವಿಚ್ಛೇದನ ನೀಡಲು ಸಾಧ್ಯವಿಲ್ಲ. ಗಂಡ ಮತ್ತು ಹೆಂಡತಿ ಇಬ್ಬರೂ ಸಾಮಾನ್ಯ ವೈವಾಹಿಕ ಜೀವನವನ್ನು ನಡೆಸಲು ಪರಸ್ಪರ ರಾಜಿ ಮಾಡಿಕೊಳ್ಳಬೇಕು ಮತ್ತು ಹೊಂದಿಕೊಳ್ಳಬೇಕು ಎಂದು ಹೇಳಿತ್ತು. ಇದೀಗ ಈ ಪ್ರಕರಣದಲ್ಲೂ ಕೋರ್ಟ್ ಅದನ್ನೇ ಹೇಳಿದೆ.

ಇನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯವು 2020ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಹೈಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ದರು. ಆ ತೀರ್ಪಿನಲ್ಲಿ, ಮಹಿಳೆಯು ತಾನು ಮತ್ತು ತನ್ನ ತಾಯಿ ಸಾಕಷ್ಟು ವರದಕ್ಷಿಣೆ ಅಥವಾ ಆಸ್ತಿಯನ್ನು ನೀಡದ ಕಾರಣ ನನ್ನ ಗಂಡ ಅತೃಪ್ತರಾಗಿದ್ದಾರೆ. ಆ ಕಾರಣಕ್ಕೆ ವಿಚ್ಛೇದನ ಕೇಳುತ್ತಿದ್ದಾರೆ ಎಂದು ಕೋರ್ಟ್​ ಮುಂದೆ ಹೇಳಿದ್ದಾರೆ. ಈ ಬಗ್ಗೆ ಮನವರಿಕೆ ಮಾಡಿಕೊಂಡ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಮಹಿಳೆಯ ಪತಿ ಹೈಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಅರ್ಜಿಯ ಪ್ರಕಾರ ಈ ಇಬ್ಬರು ದಂಪತಿಗಳಿಗೆ 2015 ರಲ್ಲಿ ವಿವಾಹವಾಗಿತ್ತು. ಕೇವಲ 5 ದಿನಗಳು ಮಾತ್ರ ಇಬ್ಬರು ಸಂಸಾರ ಮಾಡಿದ್ದಾರೆ. ಇನ್ನು ಪತ್ನಿಗೆ ಸಿಂಗಾಪುರದಲ್ಲಿ ಕೆಲಸ, ಆಕೆ ತಾಯಿ ಜತೆಗೆ ವಾಸಿಸುತ್ತಿದ್ದರು.ಗಂಡ ಅಮೆರಿಕದಲ್ಲಿದ್ದ ಕಾರಣ, ಅಮೆರಿಕಕ್ಕೆ ಬರುವಂತೆ ಹಾಗೂ ಕೆಲಸವನ್ನು ಇಲ್ಲಿಗೆ ವರ್ಗಾವಣೆ ಮಾಡಿಕೊಳ್ಳುವಂತೆ ಹೇಳಿದ್ದಾರೆ. ಆದರೆ ಇದಕ್ಕೆ ಪತ್ನಿ ಒಪ್ಪಿಲ್ಲ, ಆ ಕಾರಣಕ್ಕೆ ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಒಂದು ಹನಿ ಇಂಧನವಿಲ್ಲದೆ ಕೇವಲ ನೀರಿನಲ್ಲೇ 900 ಕಿ.ಮೀ. ಓಡುವ ಕಾರು, ವಿಜ್ಞಾನ ಲೋಕದಲ್ಲಿ ಹೊಸ ಚರ್ಚೆ

ತನ್ನ ಪತ್ನಿ ಅಮೆರಿಕಕ್ಕೆ ಬರದಿರಲು ಆಕೆಯ ತಾಯಿ ಕಾರಣ, ಅವರೇ ಅವಳನ್ನು ಇಲ್ಲಿಗೆ ಬರಲು ಬೀಡುತ್ತಿಲ್ಲ ಎಂದು ಅರ್ಜಿಯಲ್ಲಿ ದೂರಿದ್ದಾರೆ. ಅಮೆರಿಕಕ್ಕೆ ಬರಲು ಅನುಕೂಲವಾಗುವಂತೆ ಯಾವುದೇ ವೀಸಾ ವ್ಯವಸ್ಥೆಗಳನ್ನು ಮಾಡಿಲ್ಲ, ಎಲ್ಲದಕ್ಕೂ ಅವಳ ತಾಯಿ ಅಡ್ಡ ಬರುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ ಹೈಕೋರ್ಟ್​​​ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು, ಆತನಿಗೆ ಹೆಂಡತಿಗಿಂತ ಸೇವಕಿ ಬೇಕಾಗಿದೆ. ಅವನು ತನ್ನ ಜೀವನ ಸಂಗಾತಿಯಿಂದ ತುಂಬಾ ನಿರೀಕ್ಷಿಸುತ್ತಿರುವಂತೆ ಕಾಣುತ್ತದೆ. ತಾನು ಹೇಳಿದಂತೆ ಕೇಳಬೇಕು, ತನ್ನ ಇಚ್ಛೆಯಂತೆ ವರ್ತಿಸಬೇಕು ಎಂಬ ಹಂಬಲ ಆತನಿಗಿದೆ ಎಂದು ಕೋರ್ಟ್​ ಹೇಳಿದೆ. ಈ ಕ್ಷುಲ್ಲಕ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸುವಂತೆ ಹೇಳಿದೆ.

ಬೆಂಗಳೂರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ