ಒಂದು ಹನಿ ಇಂಧನವಿಲ್ಲದೆ ಕೇವಲ ನೀರಿನಲ್ಲೇ 900 ಕಿ.ಮೀ. ಓಡುವ ಕಾರು, ವಿಜ್ಞಾನ ಲೋಕದಲ್ಲಿ ಹೊಸ ಚರ್ಚೆ
ಇರಾನಿ ವಿಜ್ಞಾನಿ ಅಲಾವುದ್ದೀನ್ ಖಾಸೆಮಿ ನೀರಲ್ಲೇ ಓಡುವ ಕಾರಿನ ವಿಡಿಯೋ ಹಂಚಿಕೊಂಡಿದ್ದು, ಇದೀಗ ಅದು ವೈರಲ್ ಆಗಿದೆ. ನೀರನ್ನು ಹೈಡ್ರೋಜನ್ ಮತ್ತು ಆಮ್ಲಜನಕವಾಗಿ ಬೇರ್ಪಡಿಸಿ ಶಕ್ತಿ ಉತ್ಪಾದಿಸಬಹುದು ಎಂದು ಅವರು ಹೇಳಿದ್ದಾರೆ. ಒಂದು ಹನಿ ಇಂಧನವಿಲ್ಲದೆ 900 ಕಿ.ಮೀ. ಚಲಿಸಬಹುದು ಎನ್ನುವ ಅವರ ಹೇಳಿಕೆ ವಿಜ್ಞಾನ ಲೋಕದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಯೋಗಕ್ಕೆ ಹೆಚ್ಚಿನ ಶಕ್ತಿಯ ಅಗತ್ಯವಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಕಾರುಗಳು ಡೀಸೆಲ್, ಪೆಟ್ರೋಲ್ ಇಲ್ಲದೆ ಓಡುವುದಿಲ್ಲ, ಈಗ ಸಿಎನ್ಜಿ ಕಾರು ಕೂಡ ಬಂದಿದೆ, ಆದರೆ ಒಂದು ಕಾರು ನೀರಿನಲ್ಲಿ (Water Car) ಚಲಿಸುತ್ತದೆ ಎಂದರೆ ನಂಬಲು ಸಾಧ್ಯವೇ? ಆದರೆ ನಂಬಲೇಬೇಕು, ಏಕೆಂದರೆ ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇರಾನಿನ ವಿಜ್ಞಾನಿ ಅಲಾವುದ್ದೀನ್ ಖಾಸೆಮಿ ಎಂಬುವವರು ಈ ಪ್ರಯೋಗವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲಾವುದ್ದೀನ್ ಖಾಸೆಮಿ ಹೇಳುವ ಪ್ರಕಾರ ನೀರನ್ನು ಹೈಡ್ರೋಜನ್ ಮತ್ತು ಆಮ್ಲಜನಕವಾಗಿ ಬೇರ್ಪಡಿಸುವುದರಿಂದ ಶಕ್ತಿಯನ್ನು ಉತ್ಪಾದಿಸಬಹುದು ಎಂದು ಹೇಳಿದ್ದಾರೆ.
ಈ ವಿಡಿಯೋದಲ್ಲಿ ಅಲಾವುದ್ದೀನ್ ಖಾಸೆಮಿ ಸಾಮಾನ್ಯವಾಗಿ ಉಪಯೋಗಿಸುವ ಪೈಪ್ನ್ನು ಬಳಸಿಕೊಂಡು ಕಾರಿನ ಟ್ಯಾಂಕ್ನೊಳಗೆ ನೀರು ಹಾಕಿದ್ದಾರೆ. ಅದಕ್ಕೂ ಮೊದಲು ಅವರು ಸ್ವಲ್ಪ ನೀರು ಕುಡಿಯುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಕಾರಿನ ಇಂಜಿನ್ ನೀರನ್ನು ಹೈಡ್ರೋಜನ್ ಮತ್ತು ಆಮ್ಲಜನಕವಾಗಿ ಪರಿವರ್ತಿಸುತ್ತದೆ. ನಂತರ ಅದರಿಂದ ಬರುವ ಶಕ್ತಿಯಿಂದ ಕಾರು ಮುಂದಕ್ಕೆ ಚಲಿಸುತ್ತದೆ. ಒಂದು ಹನಿ ಇಂಧನ ಹಾಗೂ ಬಾಹ್ಯ ಇಂಧನಗಳು ಮೂಲಗಳಿಲ್ಲದೆ, ಕೇವಲ 60 ಲೀಟರ್ ನೀರಿನಲ್ಲಿ 900 ಕಿಲೋ ಮೀಟರ್ ಪ್ರಯಾಣಿಸಬಹುದು ಎಂದು ಅಲಾವುದ್ದೀನ್ ಖಾಸೆಮಿ ಹೇಳುತ್ತಾರೆ.
ಇದನ್ನೂ ಓದಿ: ಮಗುವಿಗೆ ‘ಸಿಂಗಾಪುರ್’ ಎಂದು ಹೆಸರಿಟ್ಟು ಕೃತಜ್ಞತೆ ಸಲ್ಲಿಸಿದ ಗಾಜಾ ದಂಪತಿ, ಇಲ್ಲಿದೆ ನೋಡಿ ಕರುಣಾಜನಕ ಕಥೆ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
An Iranian scientist claims he’s built a car that runs on nothing but water. The inventor says the vehicle uses a process to split water into hydrogen and oxygen, then burns the hydrogen to power the engine allegedly traveling 900 km on 60 liters! God save his life 👍🏻 pic.twitter.com/7Am2x716Gi
— Rattan Dhillon (@ShivrattanDhil1) October 19, 2025
ಆದರೆ ಈ ಬಗ್ಗೆ ವಿಜ್ಞಾನ ಲೋಕ ಹೇಳುವಂತೆ ಆ ಪ್ರಯೋಗಕ್ಕೆ ಹೆಚ್ಚಿನ ಶಕ್ತಿಯ ಅಗತ್ಯ ಇದೆ ಎಂದು ಹೇಳಿದೆ. ಇನ್ನು ಈ ವಿಡಿಯೋ ನೋಡಿ, ಇದು ಹೊಸ ಪ್ರಯತ್ನ ಎಂದು ಹೇಳಿದ್ದಾರೆ. ಆದರೆ ಈ ವಿಡಿಯೋದಲ್ಲಿರುವುದು ಎಷ್ಟು ಸತ್ಯ ಎಷ್ಟು ಸುಳ್ಳು ಎಂಬ ಬಗ್ಗೆ ಯಾವುದೇ ವರದಿ ಬಂದಿಲ್ಲ. ಇನ್ನು ಭಾರತದಲ್ಲೂ ಕೂಡ ಇಂಥಹದೇ ಒಂದು ಪ್ರಯತ್ನವನ್ನು ಮಾಡಿತ್ತು, ಒಬ್ಬ ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ ಬೈಕ್ನ ಟ್ಯಾಂಕ್ಗೆ ನೀರು ಸುರಿದು ಅದನ್ನು ಸ್ಟಾರ್ಟ್ ಮಾಡಲು ಪ್ರಯತ್ನ ಮಾಡುತ್ತಾನೆ, ಆದರೆ ಮೊದಲು ಪ್ರಯತ್ನ ವಿಫಲವಾದರೂ, ನಂತರದ ಸ್ಟಾರ್ಟ್ ಆಗುತ್ತದೆ. ಇದರ ಸತ್ಯಾಸತ್ಯತೆ ಬಗ್ಗೆ ಇನ್ನು ತಿಳಿದುಬಂದಿಲ್ಲ
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




