ಪ್ರತಿದಿನ ನೈಟಿ ಧರಿಸುವಂತೆ ಒತ್ತಾಯ; ಗಂಡನ ಕಾಟಕ್ಕೆ ಬೇಸತ್ತು ಠಾಣೆಯ ಮೆಟ್ಟಿಲೇರಿದ ಹೆಂಡತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 24, 2025 | 12:08 PM

ಹೊಡೆದು ಬಡಿದು ಕಿರುಕುಳ ಕೊಡ್ತಾರೆಂದು ಗಂಡ, ಅತ್ತೆ-ಮಾವನ ವಿರುದ್ಧ ದೂರು ನೀಡಿದವರ ಸುದ್ದಿಗಳನ್ನು ಕೇಳಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಓರ್ವ ಮಹಿಳೆ ತನ್ನ ಗಂಡ ಯಾವಾಗ್ಲೂ ನೈಟ್‌ಗೌನ್‌ ಧರಿಸುವಂತೆ ಒತ್ತಾಯಿಸುತ್ತಾನೆ ಹಾಗೂ ಅತ್ತೆ ಮಾವ ಕೂಡಾ ನನ್ನ ಜೀವನಶೈಲಿ ಮತ್ತು ಉಡುಗೆ ತೊಡುಗೆಯನ್ನು ನಿಯಂತ್ರಿಸಲು ಪ್ರಾರಂಭಿಸಿದ್ದಾರೆಂದು ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾಳೆ. ಈ ಸುದ್ದಿ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಪ್ರತಿದಿನ ನೈಟಿ ಧರಿಸುವಂತೆ ಒತ್ತಾಯ; ಗಂಡನ ಕಾಟಕ್ಕೆ ಬೇಸತ್ತು ಠಾಣೆಯ ಮೆಟ್ಟಿಲೇರಿದ ಹೆಂಡತಿ
ಸಾಂದರ್ಭಿಕ ಚಿತ್ರ
Follow us on

ಅಹಮದಾಬಾದ್‌, ಮಾ. 24: ಗಂಡ ಹೆಂಡ್ತಿ (Husband-Wife) ಮಧ್ಯೆ ಸಣ್ಣ-ಪುಟ್ಟ ಜಗಳ (fight), ಮನಸ್ತಾಪಗಳಿರುವುದು ಸರ್ವೇ ಸಾಮಾನ್ಯ. ಆದ್ರೆ ಕೆಲ ದಂಪತಿಗಳ (Pair) ಈ ಜಗಳಗಳು ಅತಿರೇಕಕ್ಕೆ ತಿರುಗಿ ವಿಚ್ಛೇದನ ಹಾಗೂ ಪೊಲೀಸ್‌ ಠಾಣೆಯ (Police Station) ವರೆಗೂ ಹೋದದ್ದೂ ಇದೆ. ಹೆಚ್ಚಾಗಿ ದೈಹಿಕ ಹಲ್ಲೆ, ಕಿರುಕುಳದ ಆರೋಪದ ಮೇಲೆ ಗಂಡ, ಅತ್ತೆ-ಮಾವನ ವಿರುದ್ಧ ದೂರು ನೀಡುತ್ತಾರೆ. ಆದ್ರೆ ಇಲ್ಲೊಂದು ಮಹಿಳೆ ತನ್ನ ಗಂಡ ಯಾವಾಗ್ಲೂ ನೈಟ್‌ಗೌನ್‌ (Nightgown) ಧರಿಸುವಂತೆ ಒತ್ತಾಯಿಸುತ್ತಾನೆ ಹಾಗೂ ಅತ್ತೆ ಮಾವ ಕೂಡಾ ನನ್ನ ಜೀವನಶೈಲಿ ಮತ್ತು ಉಡುಗೆ ತೊಡುಗೆಯನ್ನು ನಿಯಂತ್ರಿಸಲು ಪ್ರಾರಂಭಿಸಿದ್ದಾರೆಂದು ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾಳೆ. ಈ ಸುದ್ದಿ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಈ ವಿಚಿತ್ರ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದ್ದು, 21 ವರ್ಷ ವಯಸ್ಸಿನ ವಿವಾಹಿತ ಮಹಿಳೆ ಗಂಡ ಹಾಗೂ ಅತ್ತೆ ಮಾವನ ವಿರುದ್ಧ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾಳೆ. ಪ್ರತಿ ದಿನ ನೈಟ್‌ಗೌನ್‌ ಧರಿಸುವಂತೆ ಒತ್ತಾಯಿಸುತ್ತಾರೆ ಎಂದು ಹೇಳಿ ದೂರನ್ನು ದಾಖಲಿಸಿದ್ದಾಳೆ.

ಏನಿದು ಘಟನೆ?

ಆ ಮಹಿಳೆ ಮೇ 2023 ರಲ್ಲಿ ಸೌದಿ ಅರೇಬಿಯಾದಲ್ಲಿ ವಿವಾಹವಾದಳು. ಮದುವೆಯ ನಂತರ, ಆಕೆ ಅಹಮದಾಬಾದ್‌ನ ಬಾಪುನಗರದಲ್ಲಿರುವ ತನ್ನ ಅತ್ತೆಯ ಮನೆಗೆ ಬಂದಳು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು ನಂತರ ನಿಧಾನವಾಗಿ ಪತಿಯ ನಿಜವಾದ ಬಣ್ಣ ಹೊರಬರಲು ಪ್ರಾರಂಭಿಸಿತು. ವೃತ್ತಿಯಲ್ಲಿ ವೈದ್ಯನಾಗಿರುವ ಪತಿ, ಮದ್ಯದ ಅಮಲಿನಲ್ಲಿ ಆಕೆಯನ್ನು ನಿಂದಿಸುತ್ತಿದ್ದನು. ಅಷ್ಟೇ ಅಲ್ಲದೆ ಪ್ರತಿದಿನ ನೈಟ್‌ಗೌನ್‌ ಧರಿಸುವಂತೆ ಒತ್ತಾಯಿಸುತ್ತಾ ಡ್ರೆಸ್ಸಿಂಗ್ ಸೆನ್ಸ್ ಅನ್ನು ಕೂಡಾ ನಿಯಂತ್ರಿಸುತ್ತಿದ್ದನು. ಈ ಬಗ್ಗೆ ಮಹಿಳೆ ಆಕ್ಷೇಪ ವ್ಯಕ್ತಪಡಿಸಿ ತನ್ನ ಅತ್ತೆ-ಮಾವಂದಿರಿಗೆ ಹೇಳಿದಾಗ, ಅವರು ಕೂಡ ಆಕೆಗೆ ಸುಮ್ಮನಿರುವಂತೆ ಸೂಚಿಸಿದರು.

ಇದನ್ನೂ ಓದಿ
ಇದು ಕ್ಯಾಬ್ ಓಯೋ ಅಲ್ಲ; ವೈರಲ್‌ ಆಯ್ತು ಕ್ಯಾಬ್‌ನ ವಾರ್ನಿಂಗ್‌ ಬೋರ್ಡ್‌
ಈ ಹಳ್ಳಿಯಲ್ಲಿ ಮದುವೆಯಾಗಿ 7 ದಿನಗಳವರೆಗೆ ಬೆತ್ತಲಾಗಿರಬೇಕಂತೆ ಮಹಿಳೆಯರು
ಮಗಳ ವಯಸ್ಸಿನ ಹುಡುಗಿ ಜತೆ ರಸ್ತೆಯಲ್ಲಿ ವ್ಯಕ್ತಿಯ ರೊಮ್ಯಾನ್ಸ್
ರಸ್ತೆಯಲ್ಲಿ ಹೋಗುತ್ತಿರುವಾಗ ಕುಸಿದು ಪ್ರಾಣಬಿಟ್ಟ ಯುವಕ

ಇವರ ಕಾಟದಿಂದ ಬೇಸತ್ತು ಕೊನೆಗೆ ಮಹಿಳೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾಳೆ. ತನ್ನ ಡ್ರೆಸ್ಸಿಂಗ್ ಸೆನ್ಸ್ ನಿಯಂತ್ರಿಸುವುದಲ್ಲದೆ, ತಾನು ಯಾವಾಗ ಮಲಗಬೇಕು, ಯಾವಾಗ ಏಳಬೇಕು ಎಲ್ಲವನ್ನು ಗಂಡನೇ ನಿರ್ಧರಿಸುತ್ತಿದ್ದ ಮತ್ತು ನನಗೆ ಬೆದರಿಸುತ್ತಿದ್ದನು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

ಇದನ್ನೂ ಓದಿ: ರಸ್ತೆ ಬದಿ ಮೊಮೊಸ್‌ ತಿಂತಾ ನಿಂತಿದ್ದವನ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಖದೀಮರು; ಸಿಸಿ ಟಿವಿ ದೃಶ್ಯ ವೈರಲ್‌

ಆಘಾತಕಾರಿ ವಿಷಯವೇನೆಂದರೆ ಆಕೆಯ ಗಂಡ ತನ್ನ ಪಾದಗಳಿಗೆ ಮಸಾಜ್ ಮಾಡಲು ಒತ್ತಾಯಿಸುತ್ತಿದ್ದನು ಇದಕ್ಕೆ ಒಲ್ಲೆ ಎಂದರೆ ಆಕೆಗೆ ನಿದ್ರೆ ಮಾಡಲು ಸಹ ಬಿಡುತ್ತಿರಲಿಲ್ಲ. ಮೇ 2024 ರಲ್ಲಿ ಇವರ ಇಡೀ ಕುಟುಂಬ ಕಾಶ್ಮೀರಕ್ಕೆ ಪ್ರವಾಸ ಹೋದಾಗ ಈ ವಿಷಯ ಇನ್ನಷ್ಟು ಹದಗೆಟ್ಟಿತು. ಈ ಪ್ರವಾಸದ ನಂತರ, ಮಹಿಳೆ ತನ್ನ ಹೆತ್ತವರ ಮನೆಗೆ ಹೋದಳು. ಆಕೆಯ ಕುಟುಂಬ ರಾಜಿ ಸಂಧಾನದ ಮೂಲಕ ಸಂಬಂಧವನ್ನು ಉಳಿಸಲು ಪ್ರಯತ್ನಿಸಿತು. ಆದರೆ ಇದಕ್ಕೆ ಪತಿ ರಾಜಿ ಮಾಡಿಕೊಳ್ಳಲು ನಿರಾಕರಿಸಿದಾಗ, ಮಹಿಳೆ ಅಂತಿಮವಾಗಿ ವೆಜಲ್ಪುರ ಪೊಲೀಸ್‌ ಠಾಣೆಯಲ್ಲಿ ಕಿರುಕುಳ ಆರೋಪದಡಿ ಗಂಡನ ವಿರುದ್ಧ ದೂರು ನೀಡಿದ್ದಾಳೆ. ದೈಹಿಕ ಹಿಂಸೆ ಮತ್ತು ಕೌಟುಂಬಿಕ ಹಿಂಸೆ ಸೇರಿದಂತೆ ಹಲವು ವಿಭಾಗಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೈರಲ್​​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ