
ಗುಜರಾತ್, ಡಿಸೆಂಬರ್ 20: ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿನತ್ತ ಬರುವುದು ತೀರಾ ಸಾಮಾನ್ಯವಾಗಿಬಿಟ್ಟಿದೆ. ಹೀಗೆ ಆಹಾರವನ್ನರಸುತ್ತಾ ಬರುವ ಆನೆ, ಹುಲಿ, ಚಿರತೆಗಳು ಮನುಷ್ಯರ ಮೇಲೆ ದಾಳಿ ನಡೆಸುತ್ತವೆ. ಅದರಲ್ಲೂ ಹುಲಿ, ಸಿಂಹಗಳಂತೂ (lions) ಬೀದಿಯಲ್ಲಿ ಓಡಾಡುವ ಶ್ವಾನಗಳು,ಇನ್ಯಾವುದೇ ಪ್ರಾಣಿಗಳನ್ನು ಕಂಡರೂ ಬಡೆದು ಬಾಯಿಗೆ ಹಾಕಿಬಿಡುತ್ತವೆ. ಆದ್ರೆ ಗುಜರಾತ್‌ನಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಗ್ರಾಮದೊಳಗೆ ಪ್ರವೇಶಿಸಿದ ಸಿಂಹಗಳ ಗುಂಪು ದಾಳಿ ನಡೆಸುವ ಬದಲು ಅಲ್ಲಿದ್ದ ನಾಯಿ ಮರಿಗಳೊಂದಿಗೆ ಆಟವಾಡಿ, ನಾಯಿ ಮರಿಗಳಿಗೆ ಯಾವುದೇ ತೊಂದರೆ ಕೊಡದೆ ವಾಪಸ್ ಹೊರಟು ಹೋಗಿವೆ. ಈ ಅಚ್ಚರಿಯ ದೃಶ್ಯ ಇದೀಗ ಸಖತ್ ವೈರಲ್ ಆಗುತ್ತಿದೆ.
ಗುಜರಾತ್‌ನ ಅಮ್ರೇಲಿ ಜಿಲ್ಲೆಯ ರಾಜುಲಾ ಪ್ರದೇಶದ ಕೊವಾಯಾ ಗ್ರಾಮದಲ್ಲಿ ಈ ಅಚ್ಚರಿಯ ಘಟನೆ ನಡೆದಿದ್ದು, ಮಧ್ಯರಾತ್ರಿ ಗ್ರಾಮದೊಳಗೆ ಎಂಟ್ರಿಕೊಟ್ಟಂತಹ ಎರಡು ಸಿಂಹಗಳು ಅಲ್ಲಿದ್ದ ಮುದ್ದಾದ ನಾಯಿ ಮರಿಗಳ ಜೊತೆ ಚೆಂದವಾಗಿ ಆಟವಾಡಿವೆ. ಈ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಹಾರವನ್ನರಸುತ್ತಾ ಬಂದಂತಹ ಆ ಸಿಂಹಗಳು ಅತ್ತಿಂದಿತ್ತ ಅಡ್ಡಾಡ್ಡಿ, ನಾಯಿ ಮರಿಗಳೊಂದಿಗೆ ಆಟವಾಡಿ ಅವುಗಳಿಗೆ ಒಂದು ಚೂರು ತೊಂದರೆ ಕೊಡದೆ ವಾಪಸ್ ಹೊರಟು ಹೋಗಿವೆ.
ಸಿಸಿ ಟಿವಿ ದೃಶ್ಯದಲ್ಲಿ ಸಿಂಹಗಳು ವಸತಿ ಪ್ರದೇಶದಲ್ಲಿ ಓಡಾಡುತ್ತಿರುವ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ಸಿಂಹಗಳನ್ನು ಕಂಡು ಭಯಗೊಂಡ ನಾಯಿಮರಿಗಳೆರಡು ಅಲ್ಲಿಂದ ಓಡಿ ಹೋಗಿವೆ. ಆ ನಾಯಿಮರಿಗಳ ಹಿಂದೆಯೇ ಓಡಿ ಹೋದ ಸಿಂಹಗಳು ಅವುಗಳೊಂದಿಗೆ ಆಟವಾಡಿ, ಏನು ತೊಂದರೆ ಕೊಡದೆ ಅಲ್ಲಿಂದ ಹೊರಟು ಹೋಗಿವೆ.
ಇದನ್ನೂ ಓದಿ: ಪುಟ್ಟ ಕಂದಮ್ಮನಿಗೆ ಅಮ್ಮ ಎಂದು ಹೇಳಲು ಕಲಿಸುತ್ತಿದ್ದಂತೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಶ್ವಾನ
ಅಮ್ರೇಲಿ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಸಿಂಹಗಳು ಮತ್ತು ಚಿರತೆಗಳ ಓಡಾಟ ಹೆಚ್ಚಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಭೀತಿ ಹುಟ್ಟಿಸಿದೆ. ಕಾಡು ಪ್ರಾಣಿಗಳು ವಸತಿ ಪ್ರದೇಶಗಳಿಗೆ ಪ್ರವೇಶಿಸುವುದನ್ನು ನಿಯಂತ್ರಿಸಲು, ಅರಣ್ಯ ಇಲಾಖೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ