Viral: ಕ್ಯಾಬ್ ಚಾಲಕನಿಗೆ ಯುಪಿಐನಲ್ಲಿ ಟಿಪ್ಸ್‌ ನೀಡಿದ ಮಹಿಳೆ, ಮುಂದೇ ಆಗಿದ್ದೇ ಬೇರೆ

ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಕೆಲವೊಂದು ಪೋಸ್ಟ್ ನೋಡಿದಾಗ ಮಹಿಳೆಯರಿಗೆ ಸುರಕ್ಷತೆ ಎಲ್ಲಿದೆ ಎನ್ನುವ ಪ್ರಶ್ನೆಯೊಂದು ಮೂಡುವುದು ಸಹಜ. ಇದೀಗ ಮಹಿಳೆಯೊಬ್ಬರು ಕ್ಯಾಬ್ ಚಾಲಕನಿಗೆ ನೀಡಿದ ಟಿಪ್ ನಿಂದ ಎಷ್ಟೆಲ್ಲಾ ತೊಂದರೆಯಾಯಿತು ಎಂದು ವಿವರಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇನ್ನು ಮುಂದೆಯಾದ್ರೂ ಹುಷಾರಾಗಿರಿ ಎಂದು ಸಲಹೆ ನೀಡಿದ್ದಾರೆ, ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಕ್ಯಾಬ್ ಚಾಲಕನಿಗೆ ಯುಪಿಐನಲ್ಲಿ ಟಿಪ್ಸ್‌ ನೀಡಿದ ಮಹಿಳೆ, ಮುಂದೇ ಆಗಿದ್ದೇ ಬೇರೆ
ಸಾಂದರ್ಭಿಕ ಚಿತ್ರ

Updated on: Oct 10, 2025 | 12:03 PM

ಈಗಿನ ಕಾಲದಲ್ಲಿ ನಮ್ಮವರನ್ನು ನಂಬುವಂತಿಲ್ಲ, ಇನ್ನು ಅಪರಿಚಿತ ವ್ಯಕ್ತಿಗಳು ಯಾವ ಲೆಕ್ಕ. ಬಸ್ಸು, ಆಟೋ ಹಾಗೂ ಟ್ಯಾಕ್ಸಿಗಳಲ್ಲಿ ಓಡಾಡುವಾಗ ಚಾಲಕರ (Cab Driver) ವರ್ತನೆಯೂ ಹೆಣ್ಣು ಮಕ್ಕಳಿಗೆ ಕಿರಿಕಿರಿಯೆನಿಸಬಹುದು. ಈ ಹಿಂದೆ ಕಹಿ ಅನುಭವಗಳು ಕೂಡ ಆಗಿರಬಹುದು. ಇದೇ ರೀತಿ ಅನುಭವ ಈ ಮಹಿಳೆಯದ್ದಾಗಿದೆ. ಗುರುಗ್ರಾಮದ (Gurgaon) ಮಹಿಳೆಯೊಬ್ಬರು ಟ್ಯಾಕ್ಸಿ ಚಾಲಕನಿಗೆ ಯುಪಿಟಿಯಲ್ಲಿ ಟಿಪ್ ನೀಡಿದ್ದೆ ಸಮಸ್ಯೆಗೆ ನಾಂದಿ ಹಾಡಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡು ಈ ಮಹಿಳೆಗೆ ವಾಟ್ಯಾಪ್ ಸಂದೇಶ ಕಳುಹಿಸಲು ಮುಂದಾಗಿದ್ದಾನೆ. ಈ ಕುರಿತು ರೆಡ್ಡಿಟ್‌ನಲ್ಲಿ ತಮಗಾದ ಕಹಿ ಅನುಭವ ಹಂಚಿಕೊಂಡು ಕಳವಳ ವ್ಯಕ್ತಪಡಿಸಿದ್ದಾರೆ.

ಕ್ಯಾಬ್ ಚಾಲಕರಿಗೆ ಟಿಪ್ಸ್‌ ನೀಡುವ ಮುನ್ನ ಎಚ್ಚರ ಎಂದ ಮಹಿಳೆ

r/Gurgaon ಹೆಸರಿನ ಸಬ್ ರೆಡಿಟ್ ನಲ್ಲಿ ಮಹಿಳೆಯೂ ಕ್ಯಾಬ್ ಚಾಲಕನು ತನ್ನ ಜತೆಗೆ ವರ್ತಿಸಿದ ರೀತಿಯನ್ನು ವಿವರಿಸಿ, ಹುಡುಗಿಯರೇ ದಯವಿಟ್ಟು ಕ್ಯಾಬ್ ಚಾಲಕರಿಗೆ ಒಳ್ಳೆಯರಾಗುವ ಮೊದಲು ಎರಡು ಬಾರಿ ಯೋಚಿಸಿ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ರಸ್ತೆಗಳು ಬ್ಲಾಕ್ ಆಗಿದ್ದಾಗ ಅವನು ಯಾವುದೇ ತೊಂದರೆಯಿಲ್ಲದೆ ದಾರಿ ಬದಲಾಯಿಸಿ ನಮ್ಮನ್ನು ಸುರಕ್ಷಿತವಾಗಿ ಸ್ಥಳಕ್ಕೆ ತಲುಪಿಸಿದನು. ನಾನು ಅವನಿಗೆ ಆ್ಯಪ್‌ನಲ್ಲಿ ಹಣ ಪಾವತಿಸಿದೆ. ನಾನು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಅವನು ಉತ್ತಮ ಸೇವಾ ಪೂರೈಕೆದಾರನಾಗಿದ್ದರಿಂದ ಅವನಿಗೆ ಟಿಪ್ ನೀಡಬೇಕು ಎಂದುಕೊಂಡೆ. ಹಾಗಾಗಿ ನಾನು ಅವನಿಗೆ 100 ರೂ. ಕಳುಹಿಸಿದೆ ಎಂದಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

Posts from the gurgaon
community on Reddit

ಇದನ್ನೂ ಓದಿ
ರೂಮ್‌ಗೆ ಡ್ರಾಪ್ ಮಾಡಿದ ಯುವತಿಯ ಸುರಕ್ಷತೆಗಾಗಿ ಕಾದು ನಿಂತ ಡ್ರೈವರ್
ಡ್ರಾಪಿಂಗ್ ಪಾಯಿಂಟ್‌ನಲ್ಲೇ ಇಳಿಬೇಕು ಎಂದ ಚಾಲಕನ ಜೊತೆಗೆ ಜಗಳಕ್ಕಿಳಿದ ಮಹಿಳೆ
ಊಬರ್ ಚಾಲಕ ಕ್ಯಾನ್ಸಲ್ ಮಾಡಿದ್ರೂ, 5 ಸ್ಟಾರ್ ರೇಟಿಂಗ್ ಕೊಟ್ಟ ಪ್ರಯಾಣಿಕ
ಒಂಟಿತನ ಹೋಗಲಾಡಿಸಲು ಹೊಸ ಮಾರ್ಗ ಕಂಡುಕೊಂಡ ಸಾಫ್ಟ್‌ವೇರ್‌ ಇಂಜಿನಿಯರ್

ಆದರೆ, ಕೆಲವೇ ಕ್ಷಣಗಳಲ್ಲಿ, ಚಾಲಕ ಹಣವನ್ನು ನನಗೆ ಹಿಂದಿರುಗಿಸಿದನು. ಶೀಘ್ರದಲ್ಲೇ ನನಗೆ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಲು ಪ್ರಾರಂಭಿಸಿದನು. ನಾನು ತಕ್ಷಣ ಅವನ ನಂಬರ್ ಬ್ಲಾಕ್ ಮಾಡಿದೆ (ಅವನು ನನ್ನ ಪೇಟಿಎಂ ಯುಪಿಐ ಐಡಿಯಿಂದ ನನ್ನ ನಂಬರ್ ತೆಗೆದುಕೊಂಡನು, ಅದನ್ನು ನಾನು ಈಗ ಬದಲಾಯಿಸಿದ್ದೇನೆ). ಈ ವ್ಯಕ್ತಿಯೂ ಮಧ್ಯವಯಸ್ಸಿನವನಾಗಿದ್ದನು. ನಾನು ಅವನನ್ನು ಬ್ಲಾಕ್ ಮಾಡಿದ ನಂತರವೂ, ಅವನು ಪೇಟಿಎಂನಲ್ಲಿ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದನು. ನಾನು ಅವನನ್ನು ಅಲ್ಲಿಯೂ ಬ್ಲಾಕ್ ಮಾಡಿದೆ ಮತ್ತು ಆಪ್‌ನಲ್ಲಿ ದೂರು ನೀಡಿದೆ ಎಂದು ತಮಗಾದ ಕಹಿ ಅನುಭವವನ್ನು ವಿವರಿಸಿದ್ದಾರೆ.

ಪ್ರಯಾಣದ ಸಮಯದಲ್ಲಿ ನಾನು ನನ್ನ ಸ್ನೇಹಿತ ಚಾಲಕನೊಂದಿಗೆ ಮಾತನಾಡಲಿಲ್ಲ. ನಾನು ಎಲ್ಲಿ ವಾಸಿಸುತ್ತಿದ್ದೇನೆಂದು ಅವನಿಗೆ ತಿಳಿದಿರುವುದರಿಂದ ಇದು ಇನ್ನಷ್ಟು ಭಯಾನಕವಾಗಿದೆ. ಹೀಗಾಗಿ ನಾನು ಪೊಲೀಸರನ್ನು ಒಳಗೊಳ್ಳಬೇಕೆ ಅಥವಾ ಮಧ್ಯವರ್ತಿಯ ಮೂಲಕ ಅವನನ್ನು ಎದುರಿಸಬೇಕೆ ಎಂದು ಸಲಹೆ ಕೇಳಿರುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ:Video: ರೂಮ್‌ಗೆ ಡ್ರಾಪ್ ಮಾಡಿದ ಯುವತಿಯ ಸುರಕ್ಷತೆಗಾಗಿ ಮಧ್ಯರಾತ್ರಿಯವರೆಗೆ ಕಾದು ನಿಂತ ರ್‍ಯಾಪಿಡೋ ಡ್ರೈವರ್

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ನೀವು ಈಗ ಸುರಕ್ಷಿತರಾಗಿದ್ದೀರಿ ಎಂದು ನಾನು ಭಾವಿಸುತ್ತೇನೆ. ಚಿಂತಿಸಬೇಡಿ, ನಿಮ್ಮ ಮನೆಗೆ ಬೀಗ ಹಾಕಿ ಸುರಕ್ಷತೆಯ ಬಗ್ಗೆ ಗಮನ ಕೊಡಿ ಎಂದು ಹೇಳಿದ್ದಾರೆ. ಮತ್ತೊಬ್ಬರು ಈ ಕ್ಯಾಬ್ ಚಾಲಕ ನಿಮಗೆ ರಾತ್ರಿ ಸಮಯ ಅಥವಾ ಕೆಟ್ಟ ಸಂದೇಶ ಕಳುಹಿಸಿದರೆ ದೂರು ನೀಡುವುದು ಒಳ್ಳೆಯದು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಮೊದಲನೇದಾಗಿ ನಿಮಗೆ ಧನ್ಯವಾದಗಳು, ಯುಪಿಐ ಐಡಿ ಕೂಡ ನನ್ನ ನಂಬರ್ ಆಗಿತ್ತು, ಈಗಷ್ಟೇ ಬದಲಾಯಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:01 pm, Fri, 10 October 25