ಪುಟಾಣಿ ಬಾಲಕಿಯ ಜಿಮ್ನಾಸ್ಟಿಕ್ಸ್ ಕೌಶಲ್ಯಕ್ಕೆ ಹುಬ್ಬೇರಿಸಿದ ನೆಟ್ಟಿಗರು; ವಿಡಿಯೋ ನೋಡಿ

| Updated By: shivaprasad.hs

Updated on: Nov 28, 2021 | 3:47 PM

Viral Video: ಪುಟ್ಟ ಬಾಲಕಿಯೋರ್ವಳು ಜಿಮ್ನಾಸ್ಟಿಕ್ ಕಸರತ್ತು ಮಾಡುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿ.

ಪುಟಾಣಿ ಬಾಲಕಿಯ ಜಿಮ್ನಾಸ್ಟಿಕ್ಸ್ ಕೌಶಲ್ಯಕ್ಕೆ ಹುಬ್ಬೇರಿಸಿದ ನೆಟ್ಟಿಗರು; ವಿಡಿಯೋ ನೋಡಿ
ವಿಡಿಯೋದಿಂದ ಸೆರೆಹಿಡಿಯಲಾದ ಚಿತ್ರ
Follow us on

ಅಂತರ್ಜಾಲದಲ್ಲಿ ಪುಟ್ಟ ಮಕ್ಕಳು ಕಸರತ್ತು ಮಾಡುವ ದೃಶ್ಯಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಪುಟಾಣಿಗಳು ತಮ್ಮ ಪ್ರತಿಭೆಯಿಂದ ನೆಟ್ಟಿಗರನ್ನು ಅಚ್ಚರಿಗೂ ತಳ್ಳುತ್ತಾರೆ. ಇತ್ತೀಚೆಗೆ ಅಂತರ್ಜಾಲದಲ್ಲಿ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಪುಟಾಣಿ ಬಾಲಕಿಯೊಬ್ಬಳು ಜಿಮ್ನಾಸ್ಟಿಕ್​ ಭಂಗಿಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಆಕೆಯ ಅಗಾಧ ಪ್ರತಿಭೆಗೆ ನೋಡುಗರು ಮನಸೋತಿದ್ದು, ಶಹಬ್ಬಾಸ್ ಎಂದಿದ್ದಾರೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ಅಂಕಿತಾ ಶರ್ಮ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪುಟಾಣಿ ತನ್ನ ಕಾಲುಗಳಿಂದ ಕಿಕ್ ಮಾಡುತ್ತಾ ಇರುವಾಗ ವಿಡಿಯೋ ತುಣುಕು ಆರಂಭವಾಗಿದೆ. ಆದರೆ ನಂತರದಲ್ಲಿ ಆಕೆಯ ಚಲನೆ ನೋಡುಗರ ಹುಬ್ಬೇರಿಸುವುದರಲ್ಲಿ ಅನುಮಾನವೇ ಇಲ್ಲ! 

ವಿಡಿಯೋ ಇಲ್ಲಿದೆ:

ಈ ವಿಡಿಯೋಗೆ ಬಂದಿರುವ ಕೆಲವು ಪ್ರತಿಕ್ರಿಯೆಗಳು:

ಈಗಾಗಲೇ ಈ ವಿಡಿಯೋ ಸುಮಾರು 2 ಲಕ್ಷ ಜನರಿಂದ ವೀಕ್ಷಿಸಲ್ಪಟ್ಟಿದೆ. ಅಲ್ಲದೇ ಇದು ವೈರಲ್ ಆಗುತ್ತಿದ್ದು, ವೀಕ್ಷಕರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಹಲವರು ಬಾಲಕಿಯ ಕಸರತ್ತಿಗೆ ಶಹಬ್ಬಾಸ್ ಎಂದಿದ್ದಾರೆ. ಮತ್ತೆ ಕೆಲವರು ಇಂತಹ ಕಸರತ್ತುಗಳಿಗೆ ಆಕೆಯ ವಯಸ್ಸು ಇನ್ನೂ ಚಿಕ್ಕದಲ್ಲವೇ ಎಂದು ಕಾಳಜಿ ತೋರಿಸಿದ್ದಾರೆ. ಅದಾಗ್ಯೂ ಆಕೆಯ ಪ್ರತಿಭೆಗೆ ಎಲ್ಲರೂ ತಲೆದೂಗಿದ್ದಾರೆ.

ಇದನ್ನೂ ಓದಿ:

ನೆಟ್ಟಿಗರ ಮನಸೂರೆಗೊಂಡ ಆನೆ ಮರಿಗಳ ತುಂಟಾಟ; ಈ ವಿಡಿಯೋಗಳನ್ನು ಮಿಸ್ ಮಾಡಲೇಬೇಡಿ

ರೆಡ್​ ಕಾರ್ಪೆಟ್​ನಲ್ಲಿ ಕೈ ಕೊಟ್ಟಿತ್ತು ಮಲೈಕಾ ಬಟ್ಟೆ; ಎಲ್ಲರ ಎದುರು ನಟಿಗೆ ಭಾರಿ ಮುಜುಗರ