ಅಧಿಕೃತ ಚೀನಾ ಪಾಕ ಪದ್ಧತಿಯನ್ನು ಸವಿಯಲು ಬರೋಬ್ಬರಿ 8000 ರೆಸ್ಟೋರೆಂಟ್​ಗಳಲ್ಲಿ ತಿಂದ ವ್ಯಕ್ತಿ; ಇದಕ್ಕೆ ತಗುಲಿದ ದಶಕಗಳೆಷ್ಟು?

ಚೀನಾ- ಅಮೇರಿನ್ ವ್ಯಕ್ತಿಯೋರ್ವರು ಅಧಿಕೃತ ಚೀನಾ ಪಾಕ ಪದಾರ್ಥಗಳನ್ನು ಹುಡುಕುತ್ತಾ ಬರೋಬ್ಬರಿ 8000 ರೆಸ್ಟೋರೆಂಟ್​ಗಳಲ್ಲಿ ತಿಂದಿದ್ದಾರೆ. ಈ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ.

ಅಧಿಕೃತ ಚೀನಾ ಪಾಕ ಪದ್ಧತಿಯನ್ನು ಸವಿಯಲು ಬರೋಬ್ಬರಿ 8000 ರೆಸ್ಟೋರೆಂಟ್​ಗಳಲ್ಲಿ ತಿಂದ ವ್ಯಕ್ತಿ; ಇದಕ್ಕೆ ತಗುಲಿದ ದಶಕಗಳೆಷ್ಟು?
ಡೇವಿಡ್ ಆರ್​ ಚಾನ್ ಹಂಚಿಕೊಂಡ ಒಂದು ಚಿತ್ರ (Credits: David R Chan/ Instagram)
Follow us
TV9 Web
| Updated By: shivaprasad.hs

Updated on:Nov 28, 2021 | 2:06 PM

ಒಳ್ಳೆಯ ಆಹಾರದ ಶಕ್ತಿ ಎಂಥದ್ದೆಂದರೆ, ನಿಜವಾದ ಆಹಾರ ಪ್ರಿಯರು ಅದಕ್ಕಾಗಿ ಹಲವು ಸಮಯಗಳ ಕಾಲ ವ್ಯಯಮಾಡಲು ಸಿದ್ಧರಿರುತ್ತಾರೆ. ಇಲ್ಲೊಬ್ಬ ಚೀನಾ- ಅಮೇರಿಕನ್ ವ್ಯಕ್ತಿ ಬಹುತೇಕ ತಮ್ಮ ಜೀವಿತಾವಧಿಯ ನಾಲ್ಕು ದಶಕಗಳನ್ನು ಅತ್ಯುತ್ತಮ ಆಹಾರದ ಹುಡುಕಾಟದಲ್ಲೇ ಕಳೆದಿದ್ದಾರೆ ಎಂದರೆ ನೀವು ನಂಬಲೇಬೇಕು. ಡೇವಿಡ್ ಆರ್ ಚಾನ್ ಎಂಬುವವರು ಅಧಿಕೃತ ಚೈನೀಸ್ ಆಹಾರದ ಹುಡುಕಾಟಕ್ಕಾಗಿ ತಮ್ಮ ಬಹುತೇಕ ಜೀವಿತಾವಧಿಯನ್ನೇ ವ್ಯಯಿಸಿದ್ದಾರೆ. ಈ ಪಯಣದಲ್ಲಿ ಅವರು ಎಷ್ಟು ರೆಸ್ಟೋರೆಂಟ್​ಗಳಲ್ಲಿ ರುಚಿಯನ್ನು ಸವಿದಿರಬಹುದು ಎಂಬ ಕುತೂಹಲವಿದೆಯೇ? ಬರೋಬ್ಬರಿ 8,000ಕ್ಕೂ ಅಧಿಕ ರೆಸ್ಟೋರೆಂಟ್​ಗಳಿಗೆ ಅವರು ತಮ್ಮ ಪಯಣದಲ್ಲಿ ಭೇಟಿಯಿಟ್ಟಿದ್ದಾರೆ. ಚಾನ್ ಅವರು ಚೀನಾದ ಮೂಲ ಆಹಾರ ಹುಡುಕಲು ಅವರ ದೇಶದಲ್ಲಿ ಇಷ್ಟೆಲ್ಲಾ ಕಷ್ಟಪಡಬೇಕಾಯಿತಾ ಎಂಬ ಪ್ರಶ್ನೆ ನಿಮಗೆ ಮೂಡಿರಬೇಕಲ್ಲವೇ? ಅಲ್ಲೇ ಇರುವುದು ಅಚ್ಚರಿ. ಚಾನ್ ವಾಸ್ತವವಾಗಿ ಹುಡುಕಾಟ ನಡೆಸಿರುವುದು ಅಮೇರಿಕಾದಲ್ಲಿ.ಇದಕ್ಕೆ ಕಾರಣ, ಅವರು ಲಾಸ್ ಏಂಜಲೀಸ್​ನವರು.

ಲಾಸ್ ಏಂಜಲೀಸ್‌ನ ನಿವೃತ್ತ ತೆರಿಗೆ ವಕೀಲರಾದ ಚಾನ್ ಅವರು ತಮ್ಮ ಅನುಭವಗಳನ್ನು ಸ್ಪ್ರೆಡ್‌ಶೀಟ್‌ನಲ್ಲಿ ಸಂಗ್ರಹಿಸಿದ್ದಾರೆ. ಅದರಲ್ಲಿ ಅವರು ತಮ್ಮ ಪ್ರತಿಯೊಂದು ಭೇಟಿಗಳನ್ನು ವಿವರಿಸಿದ್ದಾರೆ. ಮೂರನೇ ತಲೆಮಾರಿನ ಚೈನೀಸ್ ಅಮೇರಿಕನ್ ಆದ ಚಾನ್ ತಮ್ಮ ಹುಡುಕಾಟವನ್ನು 1960 ರ ದಶಕದಲ್ಲಿ ಪ್ರಾರಂಭಿಸಿದರು. ನಂತರ ಕಾಲೇಜು ವಿದ್ಯಾರ್ಥಿಯಾದ ಅವರು ಅಮೇರಿಕನ್ ನಾಗರಿಕ ಹಕ್ಕುಗಳ ಚಳವಳಿಯಿಂದ ಸ್ಫೂರ್ತಿ ಪಡೆದು, ಅದರ ಪರಂಪರೆಯನ್ನು ಅನ್ವೇಷಿಸಲು ಬಯಸಿದ್ದರು. ಅಮೆರಿಕದಲ್ಲಿ ಚೀನಿಯರ ಬಗ್ಗೆ ಅವರ ಆಸಕ್ತಿ ಹೆಚ್ಚಾದಂತೆ, ಅಡುಗೆಯ ವೈವಿಧ್ಯತೆಯನ್ನು ಕಲಿಯುವ ಕುತೂಹಲ ಹೆಚ್ಚಾಯಿತು. ಇದಕ್ಕೂ ಮೊದಲು, ಅದು ಎಷ್ಟು ವೈವಿಧ್ಯಮಯವಾಗಿದೆ ಎಂಬುದರ ಬಗ್ಗೆ ಅವರಿಗೆ ಅಷ್ಟಾಗಿ ತಿಳುವಳಿಕೆ ಇರಲಿಲ್ಲವಂತೆ.

ಬಾಲ್ಯದಲ್ಲಿ, ಚಾನ್ ಚೈನೀಸ್ ಆಹಾರವನ್ನು ಸೇವಿಸಿರಲಿಲ್ಲ. 1950 ರ ದಶಕದಲ್ಲಿನ ಅವರ ಮೊದಲ ಚೈನೀಸ್ ಊಟವನ್ನು ಪ್ರಸ್ತುತ 72 ವರ್ಷದ ಚಾನ್ ನೆನಪಿಸಿಕೊಂಡಿದ್ದಾರೆ. ಬಿಬಿಸಿಯೊಂದಿಗೆ ಮಾತನಾಡುತ್ತಾ ಅವರು ಆಗ ಆಹಾರವು ಅತ್ಯಾಧುನಿಕವಾಗಿರಲಿಲ್ಲ. ನಾನು ಅನ್ನದ ಮೇಲೆ ಸೋಯಾ ಸಾಸ್ ತಿನ್ನುತ್ತೇನೆ ಮತ್ತು ಬೇರೇನೂ ಇಲ್ಲ. ಅಮೇರಿಕಾ, ಕೆನಡಾ ಮತ್ತು ಏಷ್ಯಾದ ದೂರದ ರಾಜ್ಯಗಳಿಗೆ ನನ್ನ ವ್ಯಾಪಾರ ಪ್ರವಾಸಗಳಲ್ಲಿ, ಚೈನೀಸ್ ಆಹಾರವನ್ನು ಸ್ಯಾಂಪಲ್ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

ಚಾನ್ ಅವರೇನು ಬಹುದೊಡ್ಡ ಆಹಾರ ವಿಮರ್ಶಕರಲ್ಲವಂತೆ. ಇದಕ್ಕೆ ಅವರು ಕಾರಣವನ್ನೂ ಹೇಳಿದ್ದಾರೆ. ಕೆಫೀನ್ ಕಾರಣದಿಂದ ಚಹಾವನ್ನು ತ್ಯಜಿಸಿದರಂತೆ. ಜೊತೆಗೆ ಕಡಿಮೆ ಕೊಲೆಸ್ಟರಾಲ್, ಕಡಿಮೆ ಸಕ್ಕರೆ ಆಹಾರವನ್ನು ಸೇವಿಸುತ್ತಾರಂತೆ. ಆದರೆ ತಮ್ಮಿಷ್ಟದ ಆಹಾರ, ಅದನ್ನು ತಿಂದಿದ್ದರ ಕುರಿತು ಅವರು ಸಾಮಾಜಿಕ ಜಾಲತಾಣಗಳಲ್ಲಿ ಸತತವಾಗಿ ಬರೆಯುತ್ತಾರೆ. ಪೋರ್ಕ್​ನಿಂದ ಟೀಯವರೆಗೆ, ಬಾತುಕೋಳಿಯ ಖಾದ್ಯದಿಂದ ಅನಾನಸ್​ ಬನ್​ಗಳವರೆಗೆ ಈ ಚೀನೀ ಅಮೇರಿನ್ ಚಾನ್- ತಮ್ಮ ಅನುಭವಗಳನ್ನು ವಿವರಿಸುತ್ತಾರೆ.

View this post on Instagram

A post shared by David R. Chan (@chandavkl)

ಇದುವರೆಗಿನ ಜೀವನ ಹಾಗೂ ಅನುಭವವನ್ನು ಆಧರಿಸಿ ಹೇಳುವುದಾದರೆ, ಅಮೇರಿಕಾದಲ್ಲಿ ಅತ್ಯಂತ ಅಧಿಕೃತ ಚೀನೀ ಪಾಕಪದ್ಧತಿಯ ಅಡುಗೆಗಳು ಎಲ್ಲಿ ಲಭ್ಯವಿದೆ ಎಂಬ ಪ್ರಶ್ನೆಗೆ ಚಾನ್ ಉತ್ತರಿಸಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿರುವ ಸ್ಯಾನ್ ಗೇಬ್ರಿಯಲ್ ವ್ಯಾಲಿಯನ್ನು ಅಮೆರಿಕದಲ್ಲಿನ ಅತ್ಯಂತ ವೈವಿಧ್ಯಮಯ ಅಧಿಕೃತ ಚೈನೀಸ್ ಆಹಾರಗಳಿಗೆ ಅತ್ಯುತ್ತಮ ಸ್ಥಳವೆಂದು ಚಾನ್ ಶಿಫಾರಸು ಮಾಡಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ ಕೂಡ ಉತ್ತಮ ಆಯ್ಕೆ ಎಂದು ಅವರು ಹೇಳಿದ್ದಾರೆ.

ಚಾನ್ ಅವರು ತಮ್ಮ ಮುಂದಿನ ಯೋಜನೆಗಳ ಕುರಿತೂ ಮಾಹಿತಿ ಹಂಚಿಕೊಂಡಿದ್ದಾರೆ. ಮುಂದೆಯೂ ಕೂಡ ಸಾಧ್ಯವಾದಷ್ಟು ರೆಸ್ಟೋರೆಂಟ್​ಗಳ ರುಚಿಯನ್ನು ಅವರು ನೋಡಲಿದ್ದಾರಂತೆ. ನಿವೃತ್ತಿಯ ನಂತರ ಫುಡ್ ಬ್ಲಾಗ್​ನಲ್ಲಿ ಬರೆಯುತ್ತಾ, ತಮ್ಮ ಪ್ರಯಾಣವನ್ನು ಮುಂದುವರೆಸಲಿದ್ದಾರಂತೆ. ಅವರ ಪತ್ನಿ ಚೀನಾದವರು. ಆದರೆ ಈ ಕುರಿತು ತಮಾಷೆ ಮಾಡುವ ಅವರು, ಆಕೆಗೆ ತಮ್ಮ ರುಚಿ, ಪ್ರಾವೀಣ್ಯತೆಯ ಕುರಿತು ಸಂಶಯವಿದೆ ಎಂದು ನಕ್ಕಿದ್ದಾರೆ.

ಇದನ್ನೂ ಓದಿ:

ಈ ಗ್ರಹದಲ್ಲಿ ಪ್ರತಿ 16 ಗಂಟೆಗೊಮ್ಮೆ ಹೊಸ ವರ್ಷ!; ವಿಜ್ಞಾನಿಗಳು ಕಂಡುಹಿಡಿದ ಹೊಸ ಗ್ರಹದ ಮಾಹಿತಿ ಇಲ್ಲಿದೆ

Omicron: ಮಜವಾದ ಮೀಮ್​ಗಳಿಗೆ ಆಹಾರವಾದ ಭೀಕರ ವೈರಸ್ ಒಮಿಕ್ರಾನ್; ನೆಟ್ಟಿಗರು ಹೇಳೋದೇನು?

Published On - 2:00 pm, Sun, 28 November 21

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ