Omicron: ಮಜವಾದ ಮೀಮ್ಗಳಿಗೆ ಆಹಾರವಾದ ಭೀಕರ ವೈರಸ್ ಒಮಿಕ್ರಾನ್; ನೆಟ್ಟಿಗರು ಹೇಳೋದೇನು?
ಪ್ರಸ್ತುತ ಜಗತ್ತಿನಲ್ಲಿ ಒಮಿಕ್ರಾನ್ ವೈರಸ್ ಕುರಿತೇ ಹೆಚ್ಚು ಚರ್ಚೆ ನಡೆಯುತ್ತಿವೆ. ಈ ನಡುವೆ ಈ ಭೀಕರ ವೈರಸ್, ಅಂತರ್ಜಾಲದಲ್ಲಿ ತಮಾಷೆಯ ಮೀಮ್ಗಳಿಗೆ ಆಹಾರವಾಗಿದೆ. ಅಂತಹ ಕೆಲವು ಮೀಮ್ಗಳು ಇಲ್ಲಿವೆ.
ಕೊರೊನಾದ ಎರಡು ಅಲೆಗಳಿಂದ ಜನ ಸಾಮಾನ್ಯರ ಬದುಕು ದುಸ್ತರವಾಗಿದೆ. ಇದೀಗ ಲಸಿಕೆ ಎಲ್ಲರಿಗೂ ಲಭ್ಯವಾಗಿ, ಎಲ್ಲರೂ ಸಾಮಾನ್ಯ ಸ್ಥಿತಿಗೆ ಮರಳಲು ಪ್ರಯತ್ನಪಡುತ್ತಿರುವಂತೆಯೇ, ಜಗತ್ತಿಗೆ ಹೊಸ ಆತಂಕ ಪ್ರಾರಂಭವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿರುವ ಕೊರೊನಾದ ಹೊಸ ರೂಪಾಂತರ ತಲ್ಲಣ ಸೃಷ್ಟಿಸಿದೆ. ವಿಶ್ವಸಂಸ್ಥೆ ಅದಕ್ಕೆ ‘ಒಮಿಕ್ರಾನ್’ ಎಂದು ನಾಮಕರಣ ಮಾಡಿದ್ದು, ವಿಶ್ವ ಆರೋಗ್ಯ ಸಂಸ್ಥೆ ಎಲ್ಲಾ ದೇಶಗಳಿಗೂ ಎಚ್ಚರಿಕೆಯಿಂದಿರಲು ಸೂಚಿಸಿದೆ. ಇದರ ಅನ್ವಯ ಎಲ್ಲಾ ದೇಶಗಳು, ರಾಜ್ಯಗಳು ಹೊಸ ನಿಯಮಾವಳಿಗಳನ್ನು ರೂಪಿಸಿ, ಕಠಿಣ ಕ್ರಮಗಲನ್ನು ಕೈಗೊಳ್ಳುತ್ತಿವೆ. ಇಷ್ಟೆಲ್ಲಾ ಆತಂಕವಿದ್ದರೂ ಕೂಡ ಜನರ ಹಾಸ್ಯಪ್ರಜ್ಞೆ ಕಡಿಮೆಯಾಗಿಲ್ಲ. ಹೊಸ ಹೊಸ ಮೀಮ್ಗಳ ಮೂಲಕ ಒಮಿಕ್ರಾನ್ ರೂಪಾಂತರವು ಸದ್ಯ ನೆಟ್ಟಿಗರಿಗೆ ಆಹಾರವಾಗಿದೆ. ಹಲವು ಮಜವಾದ ಮೀಮ್ಗಳು ಕಠಿಣ ಪರಿಸ್ಥಿತಿಯನ್ನು ಹೇಳುತ್ತಲೇ, ಮುಖದಲ್ಲಿ ಮಂದಹಾಸ ಮೂಡಿಸಿವೆ. ಅಂತಹ ಹಲವು ಮೀಮ್ಗಳು ಇಲ್ಲಿವೆ.
ಆಸ್ಟ್ರೇಲಿಯಾದ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಒಬ್ಬರು ವಿಡಿಯೋಮೀಮ್ ಹಂಚಿಕೊಂಡಿದ್ದಾರೆ. ನಂತರ ಹಲವರು, ಮುಂಬರುವ ವರ್ಷಗಳು ಹೇಗಿರಬಹುದು ಎಂದೂ, 2022 ಆದರೂ ಚೆನ್ನಾಗಿರಬಹುದು ಎಂದು ಭಾವಿಸಿದ್ದೆವೆಂದೂ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಕೆಲವರು ಒಮಿಕ್ರಾನ್ ಹೆಸರು ಕಾದಂಬರಿಯ ಹೆಸರಂತೆ ಭಾಸವಾಗುತ್ತದೆ ಎಂದೂ ಹೇಳಿದ್ದಾರೆ.
Australia preparing for Omicron
— Avi Yemini ???? (@OzraeliAvi) November 26, 2021
Omicron…looking forward to ‘22? #NuVariant #auspol pic.twitter.com/caFUTyYkCm
— Gordo (@chemicalmarx) November 27, 2021
Doing some reading on this Omicron variant pic.twitter.com/rChP8NjPuF
— Josh Butler (@JoshButler) November 27, 2021
Me learning the new COVID variant is called Omicron pic.twitter.com/9AKhpMIeVE
— Grant Holmes (@THEGrantHolmes) November 26, 2021
I’ve said it before and I’ll say it again:
You may be done with Covid but Covid ain’t done with you #Omicron
— Mehdi Hasan (@mehdirhasan) November 26, 2021
The Omicron Variant sounds like a novel by Frederick Forsyth you’d find in your uncle’s shed
— Frankie Boyle (@frankieboyle) November 26, 2021
Omicron Variant: pic.twitter.com/TOtGHx9ei6
— Section 2 : 14th Amendment of US Constitution (@kylengh) November 26, 2021
ಪ್ರಸ್ತುತ ಭಾರತದಲ್ಲಿ ಒಮಿಕ್ರಾನ್ ಕಂಡುಬಂದಿಲ್ಲ. ಆದರೆ ಬೆಂಗಳೂರಿನಲ್ಲಿ ಆಫ್ರಿಕಾದಿಂದ ಬಂದವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ ಕಾರಣ, ಎಚ್ಚರಿಕೆ ವಹಿಸಲಾಗಿದೆ. ಕೊರೊನಾ ವಿರುದ್ಧ ಹೋರಾಡಲು ಸರ್ಕಾರ ನೀಡಿರುವ ಮುನ್ನೆಚ್ಚರಿಕೆಗಳನ್ನು ನಿರ್ಲಕ್ಷ ವಹಿಸದೇ ಪಾಲಿಸಿ. ಇದರಿಂದ ಕೊವಿಡ್ ಅಪಾಯಗಳನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿ:
ಒಮಿಕ್ರಾನ್ ಭೀತಿ ಬೆನ್ನಲ್ಲೇ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಇಬ್ಬರಿಗೆ ಕೊವಿಡ್ ಸೋಂಕು ದೃಢ
Omicron Variant: ಒಮಿಕ್ರಾನ್ ಎಂಬ ಭಯಾನಕ ವೈರಸ್ ಬಗ್ಗೆ ನಿಮಗೆಷ್ಟು ಗೊತ್ತು?