Video: ಝೂನಲ್ಲಿ ಸಿಂಹವಿದ್ದ ಬೇಲಿಯೊಳಗೆ ಹೋಗಲು ಪ್ರಯತ್ನಿಸಿದ ವ್ಯಕ್ತಿ; ಪ್ರಶ್ನಿಸಿದ್ದಕ್ಕೆ ಊಹಿಸಲೂ ಸಾಧ್ಯವಿಲ್ಲದ ಉತ್ತರ ಕೊಟ್ಟ!
ಈ ವ್ಯಕ್ತಿಯ ಹೆಸರು ಜಿ.ಸಾಯಿಕುಮಾರ್. 31 ವರ್ಷ. ನೆಲದ ಮೇಲೆ ಸಿಂಹವಿದೆ. ಈತ ಅಲ್ಲಿಯೇ ಇರುವ ಬಂಡೆಗಲ್ಲಿನ ಮೇಲೆ ಕುಳಿತ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಎಂತೆಂತಾ ವಿಚಿತ್ರ ಜನರು ಇರುತ್ತಾರೆ ಎಂಬುದಕ್ಕೆ ಈ ಸುದ್ದಿಯೇ ಸಾಕ್ಷಿ. ಹೈದರಾಬಾದ್ನಲ್ಲಿ ಒಬ್ಬ ವ್ಯಕ್ತಿ ಅಲ್ಲಿನ ನೆಹರೂ ಝೂಲಾಜಿಕಲ್ ಪಾರ್ಕ್ (ನೆಹರೂ ಝೂ)ಗೆ ಹೋಗಿ ಆತಂಕ ಸೃಷ್ಟಿಸಿದ್ದಾನೆ. ಪ್ರಾಣಿ ಸಂಗ್ರಹಾಲಯಕ್ಕೆ ಹೋದ ಆತ ಸೀದಾ ಆಫ್ರಿಕಾದ ಸಿಂಹಗಳಿದ್ದ ಸ್ಥಳಕ್ಕೆ ಬೇಲಿಯೊಳಗೆ ನುಸುಳಲು ಪ್ರಯತ್ನ ಪಟ್ಟಿದ್ದಾನೆ. ಅದನ್ನು ನೋಡಿದ ಝೂ ಸಿಬ್ಬಂದಿ ಕೂಡಲೇ ಆ ವ್ಯಕ್ತಿಯನ್ನು ತಡೆದು, ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಚಿತ್ರ ಕಾರಣ ಕೊಟ್ಟ ವ್ಯಕ್ತಿ ಸಾಮಾನ್ಯವಾಗಿ ಪ್ರಾಣಿ ಸಂಗ್ರಹಾಲಯಗಳಲ್ಲಿ ಬೇರೆಬೇರೆ ವಿಭಾಗಗಳಲ್ಲಿ ಬೇರೆ ಬೇರೆ ಜಾತಿಯ ಪ್ರಾಣಿಗಳು ಇರುತ್ತವೆ. ಹಾಗೇ, ಅವಕ್ಕೊಂದು ಪಂಜರದ ಮಾದರಿಯ ಬೇಲಿ ಮಾಡಿಡಲಾಗುತ್ತದೆ. ಈತ ಸೀದಾ ಬಂದು ಆ ಬೇಲಿಯೊಳಗೆ ನುಗ್ಗಿ ಸಿಂಹವಿದ್ದಲ್ಲಿಗೆ ಹೋಗುವುದನ್ನು ನೋಡಿ ಝೂ ಸಿಬ್ಬಂದಿಯೇ ತಲೆಕೆಡಿಸಿಕೊಂಡಿದ್ದಾರೆ. ಅಲ್ಲಿ ಸಿಂಹ ಓಡಾಡುತ್ತಿದ್ದರೂ ಬೇಲಿಯೊಳಗೆ ಹೋಗಲು ಯಾಕೆ ಪ್ರಯತ್ನಿಸಿದೆ ಎಂಬ ಪ್ರಶ್ನೆಗೆ ಅವನು ನೀಡಿದ ಉತ್ತರ ಇನ್ನಷ್ಟು ಅಚ್ಚರಿಯನ್ನುಂಟು ಮಾಡಿದೆ. ಆ ಸಿಂಹ ಇರುವ ಜಾಗದಲ್ಲಿ ಡೈಮಂಡ್ (ವಜ್ರ)ನ್ನು ಅಡಗಿಸಿಡಲಾಗಿದೆ. ಅದನ್ನು ತೆಗೆದುಕೊಳ್ಳಬೇಕು. ಹಾಗಾಗಿ ಒಳಗೆ ಹೋಗುತ್ತಿದ್ದೆ ಎಂದು ಆತ ಹೇಳಿದ್ದಾನೆ.
ಈ ವ್ಯಕ್ತಿಯ ಹೆಸರು ಜಿ.ಸಾಯಿಕುಮಾರ್. 31 ವರ್ಷ. ನೆಲದ ಮೇಲೆ ಸಿಂಹವಿದೆ. ಈತ ಅಲ್ಲಿಯೇ ಇರುವ ಬಂಡೆಗಲ್ಲಿನ ಮೇಲೆ ಕುಳಿತ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಪೊಲೀಸರು ಈತನನ್ನು ಹಿಡಿದು ವಿಚಾರಿಸಿದಾಗ ಇವನು ಸ್ವಲ್ಪಮಟ್ಟಿಗೆ ಮಾನಸಿಕ ಅಸ್ವಸ್ಥ ಎಂಬುದು ಗೊತ್ತಾಗಿದೆ. ನಂತರ ಪೊಲೀಸರು ಯುವಕನ ಪಾಲಕರಿಗೆ ವಿಷಯ ತಿಳಿಸಿ ಆತನನ್ನು ಕಳಿಸಿಕೊಟ್ಟಿದ್ದಾರೆ.
#WATCH | Telangana: A 31-year-old man who went close to an African lion moat area at Nehru Zoological Park in Hyderabad was rescued by the zoo authorities and handed over to police earlier today pic.twitter.com/Xo4G7gL7pN
— ANI (@ANI) November 23, 2021