Mann Ki Baat: ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿಯವರಿಂದ ಮನ್ ಕೀ ಬಾತ್; ಎಲ್ಲೆಲ್ಲಿ ಪ್ರಸಾರಗೊಳ್ಳಿದೆ? ಇಲ್ಲಿದೆ ಮಾಹಿತಿ
PM Modi: ದೇಶದಲ್ಲಿ ಕೊರೊನಾ ವೈರಸ್ ಪ್ರಮಾಣ ತುಸು ತಗ್ಗಿದ್ದರೂ ಈಗೀಗ ಹೊಸಹೊಸ ರೂಪಾಂತರಗಳ ಆತಂಕ ಮತ್ತೆ ಶುರುವಾಗಿದೆ. ದೇಶದಲ್ಲಿನ ಕೊವಿಡ್ 19 ಮತ್ತು ಲಸಿಕೆ ಸ್ಥಿತಿಯ ಬಗ್ಗೆ ಚರ್ಚಿಸಲು ನಿನ್ನೆ ಪ್ರಧಾನಿ ಮೋದಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.
ಪ್ರಧಾನಿ ನರೇಂದ್ರ ಮೋದಿಯವರು ಇಂದು ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್(Mann Ki Baat)ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಂದು 83ನೇ ಆವೃತ್ತಿಯ ಮನ್ ಕೀ ಬಾತ್ ಪ್ರಸಾರವಾಗಲಿದ್ದು, ಪ್ರಧಾನಿ ಯಾವೆಲ್ಲ ವಿಚಾರಗಳ ಬಗ್ಗೆ ಮಾತನಾಡಬಹುದು ಎಂಬ ಕುತೂಹಲ ಸಹಜವಾಗಿಯೇ ಇದೆ. ಸದ್ಯ ಕೊರೊನಾ ವೈರಸ್ನ ಹೊಸ ರೂಪಾಂತರ ಒಮಿಕ್ರಾನ್ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದು, ಹಾಂಗ್ಕಾಂಗ್, ಇಸ್ರೇಲ್ಗೂ ಕಾಲಿಟ್ಟಿದೆ. ಹೀಗಾಗಿ ಈ ಬಗ್ಗೆ ಕೂಡ ಪ್ರಧಾನಿ ಮೋದಿ ಇಂದಿನ ಮನ್ ಕೀ ಬಾತ್ನಲ್ಲಿ ಪ್ರಸ್ತಾಪ ಮಾಡಬಹುದು ಎಂದು ಹೇಳಲಾಗಿದೆ. ನಿನ್ನೆ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ನಾಳೆ ಬೆಳಗ್ಗೆ 11ಗಂಟೆಗೆ ಮನ್ ಕೀ ಬಾತ್ ಉದ್ದೇಶಿಸಿ ಮಾತನಾಡುವುದಾಗಿ ತಿಳಿಸಿದ್ದರು.
ದೇಶದಲ್ಲಿ ಕೊರೊನಾ ವೈರಸ್ ಪ್ರಮಾಣ ತುಸು ತಗ್ಗಿದ್ದರೂ ಈಗೀಗ ಹೊಸಹೊಸ ರೂಪಾಂತರಗಳ ಆತಂಕ ಮತ್ತೆ ಶುರುವಾಗಿದೆ. ದೇಶದಲ್ಲಿನ ಕೊವಿಡ್ 19 ಮತ್ತು ಲಸಿಕೆ ಸ್ಥಿತಿಯ ಬಗ್ಗೆ ಚರ್ಚಿಸಲು ನಿನ್ನೆ ಪ್ರಧಾನಿ ಮೋದಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಹಾಗೇ, ನಾಳೆಯಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಶುರುವಾಗುವ ಹಿನ್ನೆಲೆಯಲ್ಲಿ ಇಂದು ಅವರು ಸರ್ವಪಕ್ಷಗಳ ಸಭೆ ನಡೆಸಲಿದ್ದಾರೆ.
ಮನ್ ಕೀ ಬಾತ್ ಎಷ್ಟೊತ್ತಿಗೆ? ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ಬೆಳಗ್ಗೆ 11 ಗಂಟೆಯಿಂದ ಪ್ರಸಾರಗೊಳ್ಳಲಿದೆ. ಆಲ್ ಇಂಡಿಯಾ ರೇಡಿಯೋ (AIR) ಮತ್ತು ದೂರದರ್ಶನದ ಎಲ್ಲ ನೆಟ್ವರ್ಕ್ಗಳಲ್ಲೂ ಮನ್ ಕೀ ಬಾತ್ ಪ್ರಸಾರವಾಗುತ್ತದೆ. ಇದರೊಂದಿಗೆ ಏರ್ ಇಂಡಿಯಾ ರೇಡಿಯೋದ ನ್ಯೂಸ್ ವೆಬ್ಸೈಟ್ www.newsonair.com ಮತ್ತು ಮೊಬೈಲ್ ಆ್ಯಪ್ newsonair ನಲ್ಲಿಯೂ ಕೇಳಬಹುದು. ಇನ್ನುಳಿದಂತೆ ಆಲ್ ಇಂಡಿಯಾ ರೇಡಿಯೋ, ಡಿಡಿ ನ್ಯೂಸ್, ಪ್ರಧಾನಮಂತ್ರಿ ಕಚೇರಿ (PMO) ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್ ಚಾನಲ್ಗಳಲ್ಲಿಯೂ ಮನ್ ಕೀ ಬಾತ್ ಭಿತ್ತರಗೊಳ್ಳಲಿದೆ. ಸದ್ಯ 11 ಗಂಟೆಗೆ ಎಲ್ಲ ನೆಟ್ವರ್ಕ್, ಚಾನಲ್ಗಳಲ್ಲೂ ಹಿಂದಿಯಲ್ಲೇ ಪ್ರಸಾರಗೊಳ್ಳಲಿದ್ದು, ಸಂಜೆ 8 ಗಂಟೆ ಹೊತ್ತಿಗೆ ಆಯಾ ಸ್ಥಳೀಯ ಭಾಷೆಗಳಲ್ಲಿ ಪ್ರಸಾರಗೊಳ್ಳುತ್ತದೆ. ಕಳೆದ ತಿಂಗಳ ಮನ್ ಕೀ ಬಾತ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನ ಇನ್ನಷ್ಟು ದೃಢವಾಗಿ ಅನುಷ್ಠಾನಕ್ಕೆ ಬರಬೇಕು ಎಂಬ ಬಗ್ಗೆ ಮಾತನಾಡಿದ್ದರು.
ಇದನ್ನೂ ಓದಿ: ಈ ಗ್ರಹದಲ್ಲಿ ಪ್ರತಿ 16 ಗಂಟೆಗೊಮ್ಮೆ ಹೊಸ ವರ್ಷ!; ವಿಜ್ಞಾನಿಗಳು ಕಂಡುಹಿಡಿದ ಹೊಸ ಗ್ರಹದ ಮಾಹಿತಿ ಇಲ್ಲಿದೆ