ನೆಟ್ಟಿಗರ ಮನಸೂರೆಗೊಂಡ ಆನೆ ಮರಿಗಳ ತುಂಟಾಟ; ಈ ವಿಡಿಯೋಗಳನ್ನು ಮಿಸ್ ಮಾಡಲೇಬೇಡಿ
ಅಂತರ್ಜಾಲದಲ್ಲಿ ಪ್ರಾಣಿಗಳ ಕುರಿತ ವಿಡಿಯೋ ತುಣುಕುಗಳು ನೆಟ್ಟಿಗರ ಮನಗೆಲ್ಲುತ್ತವೆ. ಆನೆ ಮರಿಗಳು ಆಟವಾಡುತ್ತಿರುವ ವಿಡಿಯೋಗಳು ಇಲ್ಲಿದ್ದು, ನೋಡಿ ಆನಂದಿಸಿ.
ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿ ಪ್ರಿಯರು ಇಷ್ಟಪಡುವ ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಸಾಮಾನ್ಯವಾಗಿ ಜನರಿಗೆ ನೋಡಲು ಸಿಗದ ಪ್ರಾಣಿಗಳ ತುಂಟಾಟಗಳು ವಿಡಿಯೋದಲ್ಲಿ ಸೆರೆಯಾಗಿದ್ದರಂತೂ ಅದು ಎಲ್ಲರ ಮನಗೆಲ್ಲುತ್ತದೆ. ಜನರು ತಮ್ಮ ಕೆಲಸದ ಜಂಜಡಗಳ ನಡುವೆ ಇವುಗಳನ್ನು ನೋಡಿ ಮನಸ್ಸನ್ನು ಹಗುರಗೊಳಿಸಿಕೊಳ್ಳುತ್ತಾರೆ. ಪುಟಾಣಿ ಆನೆ ಮರಿಗಳ ಆಟ, ತುಂಟಾಟದ ವಿಡಿಯೋಗಳೂ ಅಂತರ್ಜಾಲದಲ್ಲಿ ಇದೇ ಕಾರಣಕ್ಕೆ ಸಖತ್ ಸದ್ದು ಮಾಡುತ್ತವೆ. ಸದ್ಯ ಅಂಥದ್ದೇ ವಿಡಿಯೋಗಳು ವೈರಲ್ ಆಗಿದ್ದು ನೆಟ್ಟಿಗರು ಮನಸೋತಿದ್ದಾರೆ. ಟ್ವಿಟರ್ನಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದ್ದು, ಮರಿ ಆನೆಗಳ ಲುಕ್ಗೆ ನೆಟ್ಟಿಗರು ಮನಸೋತಿದ್ದಾರೆ.
ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್ ಟ್ವಿಟರ್ ಖಾತೆಯಿಂದ ಈ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಮೊದಲ ವಿಡಿಯೋದಲ್ಲಿಮರಿ ಆನೆಯೊಂದು ಮರದ ಆವರಣದ ನಡುವಿದೆ. ಅದರ ಮೇಲೆ ಸೊಂಡಿಲನ್ನಿಟ್ಟುಕೊಂಡು ಅದು ಜನರನ್ನು ನೋಡುತ್ತಿದೆ. ಮರಿ ತುಂಬಾ ಸಣ್ಣಕಿದ್ದು, ಆವರಣವು ಅದಕ್ಕಿಂತ ಎತ್ತರವಿರುವುದರಿಂದ ಅದು ಸೊಂಡಿಲಿನ ಮೇಲೆ ಬಲವನ್ನು ಹಾಕಿ ಹೊರಾಂಗಣವನ್ನು ನೋಡಲು ಪ್ರಯತ್ನಿಸುತ್ತಿದೆ. ಅಲ್ಲದೇ ವಿಡಿಯೋ ಚಿತ್ರೀಕರಣ ಮಾಡುವವರಿಗೆ ಅದು ಪೋಸ್ ಕೂಡ ನೀಡಿದೆ. ಈ ವಿಡಿಯೋ ನೆಟ್ಟಿಗರಿಗೆ ಆನೆ ಮರಿ ಕಣ್ಣಾ ಮುಚ್ಚಾಲೆ ಆಡುತ್ತಿರುವಂತೆ ಭಾಸವಾಗಿದೆ.
ವಿಡಿಯೋ ಇಲ್ಲಿದೆ:
Peekaboo ? pic.twitter.com/QCeCvt6mrw
— Sheldrick Wildlife (@SheldrickTrust) November 27, 2021
ಅದೇ ಖಾತೆಯಲ್ಲಿ ಮರಿ ಆನೆಗಳು ಸ್ನಾನ ಮಾಡುತ್ತಿರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಆನೆಗಳಿಗೆ ನೀರೆಂದರೆ ಪ್ರಾಣ. ಅದರಲ್ಲೂ ಸುಮಾರು ಮರಿ ಆನೆಗಳು ತಮ್ಮ ತಂಡದೊಂದಿಗೆ ನೀರಾಟವಾಡುತ್ತಿರುವುದು ನೋಡುಗರಿಗೆ ಖಂಡಿತಾ ಖುಷಿ ತಂದೀತು. ಈ ವಿಡಿಯೋ ನೋಡಿ.
Splash-tastic scenes down at the Ithumba mud bath ? pic.twitter.com/TmMvFNMGmz
— Sheldrick Wildlife (@SheldrickTrust) November 28, 2021
ಮರಿ ಆನೆಗಳು ತಮ್ಮ ತುಂಟಾಟಕ್ಕೆ ಹೆಸರುವಾಸಿ. ಅವು ನೀರಿನಂತೆಯೇ ಮಣ್ಣಿನಲ್ಲೂ ಆಡಬಲ್ಲವು. ಶೆಲ್ಡ್ರಿಕ್ ವೈಲ್ಡ್‌ಲೈಫ್ ಖಾತೆಯಿಂದ ಮತ್ತೊಂದು ವಿಡಿಯೋ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಮರಿ ಆನೆಯೊಂದು ಮಣ್ಣಿನಲ್ಲಿ ತುಂಟಾಟವಾಡುತ್ತಿದೆ.
Rokka’s preferred method of beating the heat? Becoming one with the mud! She has overcome dehydration and being orphaned to be alive today. Her story shows the lengths we will go to save an animal in need: https://t.co/kufdGjaSYq pic.twitter.com/kGoy5uK3bo
— Sheldrick Wildlife (@SheldrickTrust) November 27, 2021
ಈ ವಿಡಿಯೋಗಳು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದು, ನೋಡಿ ಸಂತೋಷಪಟ್ಟಿದ್ದಾರೆ. ಕೆಲವರು ಮರಿ ಆನೆಗಳನ್ನು ಮುದ್ದಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರೆ, ಇನ್ನು ಕೆಲವರು ಕಾಮೆಂಟ್ಸ್ ವಿಭಾಗದಲ್ಲಿ ಹಾರ್ಟ್ ಎಮೋಜಿಗಳೊಂದಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
WhatsApp: ವಾಟ್ಸ್ಆ್ಯಪ್ನಲ್ಲಿ ಫೋಟೋ, ವಿಡಿಯೋ ನೋಡಿದ ಬಳಿಕ ಅಟೋಮೆಟಿಕ್ ಡಿಲೀಟ್ ಆಗೋ ಟ್ರಿಕ್ ಗೊತ್ತಾ?
ಶ್ರೀದೇವಿ ಮಗಳ ಬಜಾರಿತನ ಹೇಗಿದೆ ನೋಡಿ; ವೈರಲ್ ಆಯ್ತು ಜಾನ್ವಿ ಕಪೂರ್ ಜಗಳದ ವಿಡಿಯೋ