Viral Video: ಜಿಮ್ನಾಸ್ಟಿಕ್ ಕೌಶಲ್ಯ ಪ್ರದರ್ಶಿಸಿದ ಪುಟ್ಟ ಬಾಲಕಿ; ವಿಡಿಯೊ ನೋಡಿ
ಪುಟ್ಟ ಬಾಕಿಯು ಜಿಮ್ನಾಸ್ಟಿಕ್ ಪ್ರದರ್ಶಿಸುತ್ತಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಪುಟ್ಟ ಬಾಲಕಿಯು ನಡೆಗಳನ್ನು ಸುಲಭವಾಗಿ ನಿರ್ವಹಿಸುವುದನ್ನು ನೋಡಿ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ತುಂಟಾಟಗಳು, ಆಟ ಹೀಗೆ ಹಲವು ವಿಡಿಯೊಗಳು ಸಕತ್ ವೈರಲ್ ಆಗುತ್ತವೆ. ಏತನ್ಮಧ್ಯೆ ಮಕ್ಕಳ ಪ್ರತಿಭೆ, ಕೌಶಲ್ಯವನ್ನು ತೋರಿಸುವ ವಿಡಿಯೊಗಳು ಹೆಚ್ಚು ಮನ ಗೆಲ್ಲುತ್ತವೆ. ಚಿಕ್ಕ ವಯಸ್ಸಿನಲ್ಲಿಯೇ ಪುಟ್ಟ ಬಾಲಕಿಯರು ಸ್ಟಂಟ್ ಮಾಡುವುದು ನೋಡಿದರೆ ಆಶ್ಚರ್ಯವಾಗುತ್ತದೆ. ಇದೀಗ ವೈರಲ್ ಆದ ವಿಡಿಯೊವನ್ನು ನೆಟ್ಟಿಗರು ಹೆಚ್ಚು ಇಷ್ಟಪಟ್ಟಿದ್ದಾರೆ. ಪುಟ್ಟ ಬಾಕಿಯು ಜಿಮ್ನಾಸ್ಟಿಕ್ ಪ್ರದರ್ಶಿಸುತ್ತಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಐಪಿಎಸ್ ಅಧಿಕಾರಿ ಅಂಕಿತಾ ಶರ್ಮಾ ಅವರು ಹಂಚಿಕೊಂಡಿರುವ ಕ್ಲಿಪ್ ಇದೀಗ ಫುಲ್ ವೈರಲ್ ಆಗಿದ್ದು, ಪುಟ್ಟ ಬಾಲಕಿಯು ನಡೆಗಳನ್ನು ಸುಲಭವಾಗಿ ನಿರ್ವಹಿಸುವುದನ್ನು ನೋಡಿ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.
ಬಾಲಕಿಯು ನಿಂತು ಲೆಗ್ ಕಿಕ್ ಮಾಡುತ್ತಿರುವುದನ್ನು ವಿಡಿಯೊದಲ್ಲಿ ಗಮನಿಸಬಹುದು. ಬಳಿಕ ಬಾಲಕಿಯು, ಸುಲಭದಲ್ಲಿ ಪಲ್ಟಿಗಳನ್ನು ಹೊಡೆದು ನೋಡುಗರಿಗೆ ಅಚ್ಚರಿ ಮುಡಿಸಿದ್ದಾಳೆ. ಬಾಲಕಿಯು ರಬ್ಬರ್ ಗೊಂಬೆಯಂತೆ ಬಹಳ ಸುಲಭದಲ್ಲಿ ಪಲ್ಟಿ ಹೊಡೆದು ಜಿಮ್ನಾಸ್ಟಿಕ್ ಪ್ರದರ್ಶಿಸಿದ್ದಾಳೆ. ಈ ವಿಟಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದ್ದು, ಫುಲ್ ವೈರಲ್ ಆಗಿದೆ.
Spellbound ? pic.twitter.com/RF5zMRq3oK
— Ankita Sharma IPS (@ankidurg) November 27, 2021
ವಿಡಿಯೊ ಸುಮಾರು 150 ಸಾವಿರಕ್ಕೂ ಹೆಚ್ಚಿನ ಲೈಕ್ಸ್ಗಳನ್ನು ಗಳಿಸಿಕೊಂಡಿದೆ. ಬಾಲಕಿಯ ಪ್ರತಿಭೆ ನೋಡಿ ಹಲವರು ಆಶ್ಚರ್ಯಗೊಂಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿಗೆ ಅಷ್ಟು ದೊಡ್ಡ ಮಟ್ಟದ ಕೌಶಲ್ಯ ಹೊಂದಿರುವ ಬಾಲಕಿಯನ್ನು ಶ್ಲಾಘಿಸಿದ್ದಾರೆ. ಜಿಮ್ನಾಸ್ಟಿಕ್ ಪ್ರದರ್ಶಿಸುವುದು ಅಷ್ಟು ಸುಲಭದ ಮಾತಲ್ಲ, ನಿಷ್ಠೆಯ ಕಲಿಕೆ ಜೊತೆಗೆ ಉತ್ತಮ ತರಬೇತಿ ಬೇಕು ಎಂದು ಇನ್ನು ಕೆಲವರು ಹೇಳಿದ್ದಾರೆ. ಎಂತಹ ಪ್ರತಿಭಾವಂತ ಮಗು ಎಂದು ವಿಡಿಯೊ ಶೀರ್ಷಿಕೆ ನೀಡುವ ಮೂಲಕ ವಿಡಿಯೊ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ:
Viral Video: ಐಸ್ಲ್ಯಾಂಡ್ ಜ್ವಾಲಾಮುಖಿ ಸ್ಫೋಟದ ಡ್ರೋನ್ ವಿಡಿಯೋ ವೈರಲ್
Viral Video: ಸಂಗೀತ ವಾದ್ಯ ನುಡಿಸುತ್ತಾ ಮನಿಕೆ ಮಗೆ ಹಿತೆ ಹಾಡು ಹಾಡಿದ 10 ವರ್ಷದ ಪುಟ್ಟ ಬಾಲಕ; ವಿಡಿಯೊ ನೋಡಿ
Published On - 8:53 am, Mon, 29 November 21