Viral Video: ಸಂಗೀತ ವಾದ್ಯ ನುಡಿಸುತ್ತಾ ಮನಿಕೆ ಮಗೆ ಹಿತೆ ಹಾಡು ಹಾಡಿದ 10 ವರ್ಷದ ಪುಟ್ಟ ಬಾಲಕ; ವಿಡಿಯೊ ನೋಡಿ
Manike Mage Hithe: ಇದೀಗ ವೈರಲ್ ಆದ ವಿಡಿಯೊದಲ್ಲಿ ಗಮನಿಸುವಂತೆ ಪುಟ್ಟ ಬಾಲಕ ಉಕುಲೇಲೆ ಸಂಗೀತ ವಾದ್ಯ ನುಡಿಸುತ್ತಾ ವಿಡಿಯೊ ಪೋಸ್ಟ್ ಮಾಡಿದ್ದಾರೆ. ನೆಟ್ಟಿಗರು ಮೆಚ್ಚಿಕೊಂಡ ವಿಡಿಯೊ ಸಕತ್ ವೈರಲ್ ಆಗಿದೆ.
ಶ್ರೀಲಂಕಾದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿದ ಮನಿಕೆ ಮಗೆ ಹಿತೆ ಹಾಡು ಹಲವಾರು ಜನರ ಮನಸ್ಸು ಗೆದ್ದಿದೆ. ಜನರು ಹೆಚ್ಚು ಇಷ್ಟಪಟ್ಟಿದ್ದು ತಾವೂ ಸಹ ಹಾಡನ್ನು ಹಾಡುವ ಮೂಲಕ ವಿಡಿಯೊ ಪೋಸ್ಟ್ ಮಾಡುತ್ತಿದ್ದಾರೆ. ಮನಿಕೆ ಮಗೆ ಹಿತೆ ಹಾಡಿಗೆ (Manike mage hithe song) ಸಕತ್ ಸ್ಟೆಪ್ ಹಾಕುತ್ತಾ ನೃತ್ಯ (Dance) ಮಾಡುವ ವಿಡಿಯೊಗಳನ್ನೂ ಸಹ ಕೆಲವರು ಈ ಹಿಂದೆ ಹಂಚಿಕೊಂಡಿದ್ದರು. ಇನ್ನು ಕೆಲವರು ಹಾಡನ್ನು ಹೇಳಲು ಪ್ರಯತ್ನಿಸಿರುವ ವಿಡಿಯೊ ಪೋಸ್ಟ್ ಮಾಡಿದ್ದರು. ಇದೀಗ ವೈರಲ್ ಆದ ವಿಡಿಯೊದಲ್ಲಿ (Viral video) ಗಮನಿಸುವಂತೆ ಪುಟ್ಟ ಬಾಲಕ ಉಕುಲೇಲೆ (Ukulele) ಸಂಗೀತ ವಾದ್ಯ ನುಡಿಸುತ್ತಾ ವಿಡಿಯೊ ಪೋಸ್ಟ್ ಮಾಡಿದ್ದಾರೆ. ನೆಟ್ಟಿಗರು ಮೆಚ್ಚಿಕೊಂಡ ವಿಡಿಯೊ ಸಕತ್ ವೈರಲ್ ಆಗಿದೆ.
ವಿಡಿಯೊದಲ್ಲಿ ನೋಡುವಂತೆ ವಿವಾನ್ ಮೆನನ್ ಎಂಬ ಹೆಸರಿನ 10 ವರ್ಷದ ಬಾಲಕ ಸಂಗೀತ ವಾದ್ಯವನ್ನು ನುಡಿಸುತ್ತಿದ್ದಾನೆ. ಜೊತೆಗೆ ಮನಿಕೆ ಮಗೆ ಹಿತೆ ಹಾಡನ್ನು ಭಾವಪೂರ್ಣವಾಗಿ ಹಾಡಿದ್ದಾನೆ. ಈತನ ಸುಮಧುರ ಧ್ವನಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಮುಂದೊಂದು ದಿನ ಒಳ್ಳೆಯ ಗಾಯಕನಾಗುತ್ತಾನೆ ಎಂದು ಹಾರೈಸಿದ್ದಾರೆ.
View this post on Instagram
ಈ ವಿಡಿಯೊ ಫುಲ್ ವೈರಲ್ ಆಗಿದ್ದು ಬಾಲಕನ ಪ್ರತಿಭೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಹೃದಯದ ಮತ್ತು ಪ್ರೀತಿಯ ಎಮೋಜಿಗಳನ್ನು ಕಳುಹಿಸುವ ಮೂಲಕ ವಿಡಿಯೊವನ್ನು ಇಷ್ಟಪಟ್ಟಿದ್ದಾರೆ. ಹುಡುಗ ಒಳ್ಳೆಯ ಕಂಠವನ್ನು ಹೊಂದಿದ್ದಾನೆ ಎಂದು ಓರ್ವರು ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. ಒಳ್ಳೆಯ ಟ್ಯಾಲೆಂಟ್ ಹೊಂದಿರುವ ಬಾಲಕ ಎಂದು ಮತ್ತೋರ್ವರು ಹೇಳಿದ್ದಾರೆ. ಇದೇ ರೀತಿ ತಮ್ಮ ಅಭಿಪ್ರಾಯಗಳನ್ನು ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಮನಿಕೆ ಮಗೆ ಹಿತೆ ಹಾಡು ಬಿಡುಗಡೆಯಾದಾಗಿನಿಂದ ಸೋಷಿಯಲ್ ಮೀಡಿಯಾಗಳಲ್ಲಿ ಹಾಡು ಫುಲ್ ವೈರಲ್ ಆಗುತ್ತಿದೆ. ಹಾಡು ಮೆಚ್ಚಿಕೊಂಡ ಜನರು ನೃತ್ಯ ಮಾಡುವ ಮೂಲಕ, ಹಾಡು ಹೇಳಲು ಪ್ರಯತ್ನಿಸುವ ಮೂಲಕ ವಿಡಿಯೊ ಪೋಸ್ಟ್ ಮಾಡುತ್ತಿದ್ದಾರೆ. ಇದೇ ರೀತಿ ಮನಿಕೆ ಮಗೆ ಹಿತೆ ಹಾಡು ನಿರಂತರವಾಗಿ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಕೇಳಿ ಬರುತ್ತಲೇ ಇದೆ.
ಇದನ್ನೂ ಓದಿ:
Viral Video: ಮನಿಕೆ ಮಗೆ ಹಿತೆ ಹಾಡಿಗೆ ಹಿಮಾಲಯದ ಸನ್ಯಾಸಿಗಳ ಡಾನ್ಸ್; ವಿಡಿಯೊ ವೈರಲ್
Viral Video: ಮನಿಕೆ ಮಗೆ ಹಿತೆ ಹಾಡಿಗೆ ಪುಟ್ಟ ಬಾಲಕಿಯ ಸಕತ್ ಸ್ಟೆಪ್