Video: ಹಾಡು ಹಾಡಿ ನೆಟ್ಟಿಗರ ಮನಗೆದ್ದ ದೃಷ್ಟಿ ವಿಕಲಚೇತನ ಬಾಲಕ: ಹೃದಯಸ್ಪರ್ಶಿ ವಿಡಿಯೊ ನೋಡಿ
ಚಿಕ್ಕ ವಯಸ್ಸಿನಲ್ಲಿ ಹಾಡು, ನೃತ್ಯಗಳನ್ನು ಮಾಡುತ್ತಾ ಜನರ ಮನಸ್ಸು ಗೆಲ್ಲುವ ಪ್ರತಿಭೆಗಳ ಕೌಶಲ್ಯವನ್ನು ತೋರಿಸುವ ವಿಡಿಯೊಗಳು ಸಕತ್ ಇಷ್ಟವಾಗುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೊ ಕೂಡಾ ಅಂಥದ್ದೇ! ವಿಡಿಯೋ ನೋಡಿ.
ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೊ ವಿಡಿಯೊಗಳು ಹರಿದಾಡುತ್ತವೆ. ತಮಾಷೆಯ ದೃಶ್ಯದ ವಿಡಿಯೊಗಳು ಹೆಚ್ಚು ನಗುತರಿಸುತ್ತಿದ್ದರೆ, ಮತ್ತೊಂದೆಡೆ ಹೃದಯಸ್ಪರ್ಶಿ ವಿಡಿಯೊಗಳು ಜನರ ಮನಸ್ಸು ಗೆಲ್ಲುತ್ತದೆ. ಕೆಲವು ವಿಡಿಯೊಗಳನ್ನು ಮತ್ತೆ ಮತ್ತೆ ನೋಡಬೇಕು ಅನ್ನುವಷ್ಟು ಇಷ್ಟವಾಗುತ್ತದೆ. ಅವುಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ಪ್ರತಿಭೆಗಳನ್ನು ಹೊಂದಿರುವ ಬಾಲಕ ಬಾಲಕಿಯ ಸಾಧನೆಗಳನ್ನು ನೋಡಿದಾಕ್ಷಣ ನಿಜವಾಗಿಯೂ ಖುಷಿಯಾಗುತ್ತವೆ. ಚಿಕ್ಕ ವಯಸ್ಸಿನಲ್ಲಿ ಹಾಡು, ನೃತ್ಯಗಳನ್ನು ಮಾಡುತ್ತಾ ಜನರ ಮನಸ್ಸು ಗೆಲ್ಲುವ ಪ್ರತಿಭೆಗಳ ಕೌಶಲ್ಯವನ್ನು ತೋರಿಸುವ ವಿಡಿಯೊಗಳು ಸಕತ್ ಇಷ್ಟವಾಗುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೊ ಕೂಡಾ ಅಂಥದ್ದೇ! ಛತ್ತೀಸ್ಗಢದ ದೃಷ್ಟಿ ವಿಕಲಚೇತನ ಬಾಲಕ ಧರ್ಮೆಂದ್ರ ದಾಸ್ ಹಾಡು ಹಾಡುವ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾನೆ. ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಬಾಲಕ ಹಾಡಿರುವ ಗೀತೆಯನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಧರ್ಮೇಂದ್ರ ಎಂಬ ಪುಟ್ಟ ಬಾಲಕ ಗೀತೆಯನ್ನು ಸುಶ್ರಾವ್ಯವಾಗಿ ಹಾಡುತ್ತಿರುವ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊ ಸುಮಾರು 60,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಈ ಬಾಲಕನ ಕಂಠಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ವಿಡಿಯೊ ತುಂಬಾ ಮುದ್ದಾಗಿದೆ ಎಂದು ಓರ್ವರು ಹೇಳಿದ್ದಾರೆ. ಬಾಲಕ ಎಲ್ಲವನ್ನೂ ತಿಳಿದಿದ್ದಾನೆ ಎಂದು ಮತ್ತೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಿಜವಾಗಿಯೂ ಬಾಲಕನಿಗೆ ದೇವರ ಆಶೀರ್ವಾದ ಸಿಗುತ್ತದೆ ಎಂದು ಮತ್ತೋರ್ವರು ಹೇಳಿದ್ದಾರೆ. ಬಾಲಕನ ಪ್ರತಿಭೆಯನ್ನು ನೋಡಿ ಕೆಲವರು ಸಂತೋಷಪಟ್ಟಿದ್ದಾರೆ. ಅದ್ಭುತವಾದ ದೃಶ್ಯ ಎಂದು ಇನ್ನು ಕೆಲವರು ಅನಿಸಿಕೆಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.
“माई सेल्फ धर्मेंद्र दास महंत”…सुनिए, ये छत्तीसगढ़ का राजगीत गा रहे हैं। मुझे लगा कि सुनता ही रहूं।
खूब आशीष और प्यार. pic.twitter.com/nG2XFnPz5e
— Bhupesh Baghel (@bhupeshbaghel) November 23, 2021
ಇದನ್ನೂ ಓದಿ:
Viral Video: ಸ್ಕೂಟರ್ ಕದಿಯುವ ಅವಸರದಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದ ಕಳ್ಳರು! ವಿಡಿಯೊ ಫುಲ್ ವೈರಲ್
Viral Video: ಟೀಮ್ ಇಂಡಿಯಾ ಆಟಗಾರರ ಮುಂದೆ ರಾಹುಲ್ ದ್ರಾವಿಡ್ ಸ್ಪಿನ್ ಮೋಡಿ