Viral Video: ಟೀಮ್ ಇಂಡಿಯಾ ಆಟಗಾರರ ಮುಂದೆ ರಾಹುಲ್ ದ್ರಾವಿಡ್ ಸ್ಪಿನ್ ಮೋಡಿ
Rahul Dravid: ದ್ರಾವಿಡ್ ಅವರು ಪರಾಸ್ ಮಾಂಬ್ರೆ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರೊಂದಿಗೆ ಅಭ್ಯಾಸವನ್ನು ಮೇಲ್ವಿಚಾರಣೆ ಮಾಡುತ್ತಿದ್ದರು. ನಾಯಕ ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ಚೇತೇಶ್ವರ್ ಪೂಜಾರ, ರವೀಂದ್ರ ಜಡೇಜಾ, ಪ್ರಸಿದ್ಧ್ ಕೃಷ್ಣ ಮುಂತಾದವರು ತರಬೇತಿ ಅವಧಿಯಲ್ಲಿ ಪಾಲ್ಗೊಂಡಿದ್ದರು.
ಗುರುವಾರದಿಂದ ಕಾನ್ಪುರದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಶುರುವಾಗಲಿದೆ. ಇದಕ್ಕಾಗಿ ಟೀಮ್ ಇಂಡಿಯಾ ಬುಧವಾರ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿತ್ತು. ಆಟಗಾರರ ಅಭ್ಯಾಸ ನಡುವೆ ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಬೌಲಿಂಗ್ ಮಾಡಿರುವುದು ವಿಶೇಷ. ಅಭ್ಯಾಸದ ಅವಧಿಯಲ್ಲಿ ಬ್ಯಾಟರ್ಗಳಿಗೆ ದ್ರಾವಿಡ್ ಬೌಲಿಂಗ್ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿತ್ತು. ಇದೀಗ ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ.
ರಾಹುಲ್ ದ್ರಾವಿಡ್ ಅವರ ಈ ಸ್ಪಿನ್ ಬೌಲಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಸಂದರ್ಭಕ್ಕನುಗುಣವಾಗಿ ರಾಹುಲ್ ದ್ರಾವಿಡ್ ಯಾವುದೇ ಪಾತ್ರ ನಿಭಾಯಿಸಬಲ್ಲರು. ಇದೀಗ ಟೀಮ್ ಇಂಡಿಯಾ ಆಟಗಾರರಿಗಾಗಿ ಬೌಲರ್ ಆಗಿದ್ದಾರೆ ಎಂದು ಅನೇಕರು ದ್ರಾವಿಡ್ ಅವರನ್ನು ಹಾಡಿಹೊಗಳಿದ್ದಾರೆ.
ಇದಕ್ಕೂ ಮೊದಲು, ದ್ರಾವಿಡ್ ಅವರು ಪರಾಸ್ ಮಾಂಬ್ರೆ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರೊಂದಿಗೆ ಅಭ್ಯಾಸವನ್ನು ಮೇಲ್ವಿಚಾರಣೆ ಮಾಡುತ್ತಿದ್ದರು. ನಾಯಕ ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ಚೇತೇಶ್ವರ್ ಪೂಜಾರ, ರವೀಂದ್ರ ಜಡೇಜಾ, ಪ್ರಸಿದ್ಧ್ ಕೃಷ್ಣ ಮುಂತಾದವರು ತರಬೇತಿ ಅವಧಿಯಲ್ಲಿ ಪಾಲ್ಗೊಂಡಿದ್ದರು.
ನಾಳೆಯಿಂದ (ನವೆಂಬರ್ 25) ನ್ಯೂಜಿಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಈ ಪಂದ್ಯದೊಂದಿಗೆ ರಾಹುಲ್ ದ್ರಾವಿಡ್ ಕೂಡ ಟೀಮ್ ಇಂಡಿಯಾ ಟೆಸ್ಟ್ ತಂಡದ ಕೋಚ್ ಆಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.
???? ?????-??? ???-???? ??????? ?
? That moment when #TeamIndia Head Coach Rahul Dravid rolled his arm over in the nets. ? ?#INDvNZ @Paytm pic.twitter.com/97YzcKJBq3
— BCCI (@BCCI) November 24, 2021
ಭಾರತ ಟೆಸ್ಟ್ ತಂಡ ಹೀಗಿದೆ: ಅಜಿಂಕ್ಯ ರಹಾನೆ (ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ (ಉಪನಾಯಕ), ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಶ್ವಿನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ
ಇದನ್ನೂ ಓದಿ: ಟಿ20 ಕ್ರಿಕೆಟ್ಗೆ ಮತ್ತೊಂದು ಲೀಗ್: ಹೊಸ ತಂಡ ಖರೀದಿಸಿದ ಮುಂಬೈ ಇಂಡಿಯನ್ಸ್
ಇದನ್ನೂ ಓದಿ: ಹಲಾಲ್ ಮಾಂಸ ಅಥವಾ ಹಲಾಲ್ ಕಟ್ ಎಂದರೇನು?
ಇದನ್ನೂ ಓದಿ: IPL 2022: ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಸ ಜೆರ್ಸಿ ಫೋಟೋ ವೈರಲ್
(VIDEO: Rahul Dravid rolls his arms in nets; bowls off-spin)