ಟಿ20 ಕ್ರಿಕೆಟ್​ಗೆ ಮತ್ತೊಂದು ಲೀಗ್: ಹೊಸ ತಂಡ ಖರೀದಿಸಿದ ಮುಂಬೈ ಇಂಡಿಯನ್ಸ್​

Mumbai Indians: ಈ ಲೀಗ್​ನಲ್ಲಿ ಒಟ್ಟು ಆರು ತಂಡಗಳಿರಲಿದ್ದು, ವಿಶ್ವದ ಪ್ರಮುಖ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳಲಿದೆ. ಇನ್ನು ಈ ಲೀಗ್​ನಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್​ ಫ್ರಾಂಚೈಸಿ ಕೂಡ ತಂಡವನ್ನು ಖರೀದಿಸುವ ಆಸಕ್ತಿ ಹೊಂದಿದ್ದು, ಶೀಘ್ರದಲ್ಲೇ ಉಳಿದ ತಂಡಗಳ ಮಾಲೀಕರು ಯಾರೆಂಬುದು ಬಹಿರಂಗವಾಗಲಿದೆ.

ಟಿ20 ಕ್ರಿಕೆಟ್​ಗೆ ಮತ್ತೊಂದು ಲೀಗ್: ಹೊಸ ತಂಡ ಖರೀದಿಸಿದ ಮುಂಬೈ ಇಂಡಿಯನ್ಸ್​
Mumbai Indians

ಟಿ20 ಕ್ರಿಕೆಟ್​ ಅಂಗಳದಲ್ಲಿ ಮತ್ತೊಂದು ಲೀಗ್ ಸೇರ್ಪಡೆಯಾಗುತ್ತಿದೆ. ಶೀಘ್ರದಲ್ಲೇ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ECB) ಹೊಸ ಲೀಗ್​ ಅನ್ನು ಶುರು ಮಾಡಲಿದೆ. ಈಗಾಗಲೇ ಇದರ ಸಿದ್ಧತೆಗಳು ಆರಂಭವಾಗಿದೆ. ಈ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯ ಮಾಲೀಕರಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಹೊಸ ತಂಡವನ್ನು ಖರೀದಿಸಿದೆ. ಅದರಂತೆ ಮುಂಬೈ ಇಂಡಿಯನ್ಸ್ ಮಾಲೀಕರ ಒಡೆತನದಲ್ಲಿ ಮತ್ತೊಂದು ತಂಡ ಕೂಡ ಕಾಣಿಸಿಕೊಳ್ಳಲಿದೆ. ಈಗಾಗಲೇ ಕೆಕೆಆರ್, ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್​ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ತಂಡಗಳಿವೆ. ಇದೀಗ ಮುಂಬೈ ಇಂಡಿಯನ್ಸ್​ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಹೊಸ ಲೀಗ್ ಮೂಲಕ ಜಾಗತಿಕ ಫಾಂಚೈಸ್ ಹೊಂದಿದೆ.

ಈ ಹೊಸ ಲೀಗ್ ಮೂಲಕ ನಮ್ಮ ಜಾಗತಿಕ ಅಭಿಮಾನಿಗಳನ್ನು ಬಲಪಡಿಸುವುದನ್ನು ಎದುರು ನೋಡುತ್ತಿದ್ದೇನೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಅದರ ಅಂಗಸಂಸ್ಥೆಯಾದ ರಿಲಯನ್ಸ್ ಸ್ಟ್ರಾಟೆಜಿಕ್ ಬಿಸಿನೆಸ್ ವೆಂಚರ್ಸ್ ಲಿಮಿಟೆಡ್ (RSBVL) ಮೂಲಕ ಈ ತಂಡದ ಮಾಲೀಕತ್ವ ಮತ್ತು ಕಾರ್ಯಾಚರಣೆಯ ಹಕ್ಕುಗಳನ್ನು ಪಡೆದುಕೊಂಡಿದೆ ಎಂದು ಮುಂಬೈ ಇಂಡಿಯನ್ಸ್‌ನ ಸಹ-ಮಾಲೀಕ ನೀತಾ ಅಂಬಾನಿ ತಿಳಿಸಿದ್ದಾರೆ.

ಯುಎಇ ಟಿ20 ಲೀಗ್ ಮೂಲಕ ಯುಎಇಯಲ್ಲಿ ಕ್ರಿಕೆಟ್ ಅನ್ನು ಉತ್ತೇಜಿಸುವುದು ನಮ್ಮ ಗುರಿಯಾಗಿದೆ. ಲೀಗ್‌ನೊಂದಿಗೆ RIL ನಂತಹ ದೊಡ್ಡ ಕಂಪನಿಯ ಒಡನಾಟವು ನಮ್ಮಲ್ಲಿರುವ ವಿಶ್ವಾಸ ಮತ್ತು ನಮ್ಮ ಮೂಲಸೌಕರ್ಯದ ಶಕ್ತಿಯನ್ನು ತೋರಿಸುತ್ತದೆ. ಹೀಗಾಗಿ UAE T20 ಲೀಗ್‌ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಯುಎಇ ಟಿ20 ಲೀಗ್ ಅಧ್ಯಕ್ಷ ಮತ್ತು ECB ಯ ಉಪಾಧ್ಯಕ್ಷ ಖಾಲಿದ್ ಅಲ್ ಜರೂನಿ.

ಈ ಲೀಗ್​ನಲ್ಲಿ ಒಟ್ಟು ಆರು ತಂಡಗಳಿರಲಿದ್ದು, ವಿಶ್ವದ ಪ್ರಮುಖ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳಲಿದೆ. ಇನ್ನು ಈ ಲೀಗ್​ನಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್​ ಫ್ರಾಂಚೈಸಿ ಕೂಡ ತಂಡವನ್ನು ಖರೀದಿಸುವ ಆಸಕ್ತಿ ಹೊಂದಿದ್ದು, ಶೀಘ್ರದಲ್ಲೇ ಉಳಿದ ತಂಡಗಳ ಮಾಲೀಕರು ಯಾರೆಂಬುದು ಬಹಿರಂಗವಾಗಲಿದೆ.

ಇದನ್ನೂ ಓದಿ: ಹಲಾಲ್ ಮಾಂಸ ಅಥವಾ ಹಲಾಲ್ ಕಟ್ ಎಂದರೇನು?

ಇದನ್ನೂ ಓದಿ: IPL 2022: ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಸ​ ಜೆರ್ಸಿ ಫೋಟೋ ವೈರಲ್

(RIL to own cricket team in Emirates Cricket Board’s new UAE T20 league)

Click on your DTH Provider to Add TV9 Kannada