AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಚ್ ನೊಡ್ತಿದ್ದೀನಿ, ಆಮೋಲೆ ಕೋಲ್ ಮಾಡು…ಗುಟ್ಕಾ ಕ್ರಿಕೆಟ್ ಪ್ರೇಮಿ ಈಗ ಫುಲ್ ವೈರಲ್

India vs New zealand 1st Test: ಮೊದಲ ದಿನದಾಟಕ್ಕೆ ಟೀಮ್ ಇಂಡಿಯಾ 4 ವಿಕೆಟ್ ನಷ್ಟದೊಂದಿಗೆ 258 ರನ್​ ಕಲೆಹಾಕಿದೆ. ಹಾಗೆಯೇ 75 ರನ್​ಗಳಿಸಿದ ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜಾ 2ನೇ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಮೊಚ್ ನೊಡ್ತಿದ್ದೀನಿ, ಆಮೋಲೆ ಕೋಲ್ ಮಾಡು...ಗುಟ್ಕಾ ಕ್ರಿಕೆಟ್ ಪ್ರೇಮಿ ಈಗ ಫುಲ್ ವೈರಲ್
ಮೊಚ್ ನೊಡ್ತಿದ್ದೀನಿ, ಆಮೋಲೆ ಕೋಲ್ ಮಾಡು…(ಗುಟ್ಕಾ ಹಾಕಿ ಹೀಗೆ ಹೇಳಿರಬಹುದಾ)
Follow us
TV9 Web
| Updated By: ಝಾಹಿರ್ ಯೂಸುಫ್

Updated on:Nov 26, 2021 | 1:13 AM

ಭಾರತ-ನ್ಯೂಜಿಲೆಂಡ್ (India vs New zealand 1st Test) ನಡುವಣ ಮೊದಲ ಟೆಸ್ಟ್ ಪಂದ್ಯವು ಕಾನ್ಪುರದಲ್ಲಿ ಶುರುವಾಗಿದೆ. ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಮೊದಲ ದಿನದಾಟದಲ್ಲಿ ಭಾರತ ತಂಡವು ಉತ್ತಮ ಪ್ರದರ್ಶನ ನೀಡಿದೆ. ಆರಂಭಿಕ ಆಟಗಾರ ಶುಭ್​ಮನ್ ಗಿಲ್ (52) ಅರ್ಧಶತಕ ಬಾರಿಸಿ ಮಿಂಚಿದರೆ, ಚೊಚ್ಚಲ ಟೆಸ್ಟ್​ ಪಂದ್ಯವಾಡುತ್ತಿರುವ ಶ್ರೇಯಸ್ ಅಯ್ಯರ್ ಮೊದಲ ಅರ್ಧಶತಕ ಬಾರಿಸಿದ್ದಾರೆ. ಅಷ್ಟೇ ಅಲ್ಲದೆ ರವೀಂದ್ರ ಜಡೇಜಾ ಕೂಡ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ. ಸದ್ಯ ಮೊದಲ ದಿನದಾಟಕ್ಕೆ ಟೀಮ್ ಇಂಡಿಯಾ 4 ವಿಕೆಟ್ ನಷ್ಟದೊಂದಿಗೆ 258 ರನ್​ ಕಲೆಹಾಕಿದೆ. ಹಾಗೆಯೇ 75 ರನ್​ಗಳಿಸಿದ ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜಾ 2ನೇ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಆದರೆ ಟೀಮ್ ಇಂಡಿಯಾದ ಈ ಮೂವರ ಅರ್ಧಶತಕಗಿಂತ ನ್ಯೂಜಿಲೆಂಡ್ ವಿರುದ್ದದ ಪಂದ್ಯದ ವೇಳೆ ಎಲ್ಲರ ಗಮನ ಸೆಳೆದಿದ್ದು ವೀಕ್ಷಕರೊಬ್ಬರು. ಪಂದ್ಯದ ನೋಡಲು ಬಂದಿದ್ದ ಕ್ರಿಕೆಟ್ ಪ್ರೇಮಿಯೊಬ್ಬರು ಸ್ಟ್ಯಾಂಡ್‌ನಲ್ಲಿ ಕೂತು ಫೋನ್‌ನಲ್ಲಿ ಮಾತನಾಡುತ್ತಿದ್ದರು. ಆದರೆ ಇದೇ ವೇಳೆ ಆ ವ್ಯಕ್ತಿಯು ಗುಟ್ಕಾ ಅಗಿಯುತ್ತಿರುವುದು ಕಂಡು ಬಂದಿದೆ. ಈ ಅಪರೂಪದ ದೃಶ್ಯ ಸಿಕ್ಕಿದ್ದೆ ತಡ ಕ್ಯಾಮೆರಾಮ್ಯಾನ್ ಫುಲ್ ಝೂಮ್ ಮಾಡಿದ್ದಾರೆ.

70 ಓವರ್ ಮುಕ್ತಾಯದ ವೇಳೆ ಕಂಡು ಬಂದ ಈ ದೃಶ್ಯವನ್ನು ಮೈದಾನದ ಬಿಗ್ ಸ್ಕ್ರೀನ್​ನಲ್ಲೂ ತೋರಿಸಲಾಯಿತು. ಅತ್ತ ಗುಟ್ಕಾ ಅಗಿಯುತ್ತಾ ಫೋನ್​ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ದೊಡ್ಡ ಪರದೆಯಲ್ಲಿ ಕಾಣಿಸುತ್ತಿದ್ದಂತೆ ಫುಲ್ ಖುಷ್ ಆಗಿದ್ದಾರೆ. ಅಷ್ಟೇ ಅಲ್ಲದೆ ಕೈ ಬೀಸುತ್ತಾ ಸಂಭ್ರಮಿಸಿದ್ದಾರೆ. ಆದರೆ ಇದೀಗ ಕ್ಯಾಮೆರಾಮ್ಯಾನ್ ಕೈಚಳಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ಟೇಡಿಯಂನಲ್ಲಿ ಗುಟ್ಕಾ ಅಗಿಯುತ್ತಾ ಕೂತಿದ್ದ ವ್ಯಕ್ತಿಯ ಫೋಟೋದೊಂದಿಗೆ ನಾನಾ ಮೀಮ್ಸ್ ಹುಟ್ಟಿಕೊಂಡಿದೆ. ಅಷ್ಟೇ ಅಲ್ಲದೆ ಆ ದೃಶ್ಯ ವಿಡಿಯೋ ತುಣುಕು ಕೂಡ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ಫೋಟೋವನ್ನು ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಒಂದು ಉಲ್ಲಾಸದ ಮೀಮ್ಸ್​ನೊಂದಿಗೆ ಹಂಚಿಕೊಂಡಿದ್ದಾರೆ. ಬಾಯಿಂದ ಸುಪಾರಿ ಉಗಿದು ಮಾತನಾಡಪ್ಪ…ಎಂಬ ಟ್ಯಾಗ್​ಲೈನ್ ಹೊಂದಿರುವ ಫೋಟೋವನ್ನು ಜಾಫರ್ ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇದಲ್ಲದೆ ಅನೇಕ ಟ್ರೋಲ್ ಪೇಜ್​ಗಳಿಗೂ ಗುಟ್ಕಾ ಕ್ರಿಕೆಟ್​ ಅಭಿಮಾನಿ ನಗಿಸಲು ಹೊಸ ಕಥಾವಸ್ತುವಾಗಿದ್ದಾರೆ.

ಇದನ್ನೂ ಓದಿ: KL Rahul: ಕೆಎಲ್ ರಾಹುಲ್ ಹೊಸ ತಂಡದ ನಾಯಕನಾಗುವುದು ಬಹುತೇಕ ಖಚಿತ

ಇದನ್ನೂ ಓದಿ: World Record: ವಿಶ್ವದ ಅತೀ ವೇಗದ ಬೌಲಿಂಗ್ ದಾಖಲೆ ಮೇಲೆ ಐವರು ವೇಗಿಗಳ ಕಣ್ಣು

ಇದನ್ನೂ ಓದಿ: IPL 2022: ಮೆಗಾ ಹರಾಜಿಗೂ ಮುನ್ನ ಮೂವರು ಆಟಗಾರರ ನೇರ ಆಯ್ಕೆ: ಏನಿದು ನಿಯಮ?

(Video of man eating gutkha in stands in Kanpur during first Test goes viral)

Published On - 10:05 pm, Thu, 25 November 21

ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?