IND vs NZ, 1st Test, Day 2: ಕುತೂಹಲ ಕೆರಳಿಸಿದ ಎರಡನೇ ದಿನದಾಟ: ಶತಕದತ್ತ ಅಯ್ಯರ್: 400ರ ಗಡಿ ದಾಟುತ್ತಾ ಭಾರತ

Shreyas Iyer: ಟೀಮ್ ಇಂಡಿಯಾ 84 ಓವರ್‌ಗಳಿಗೆ ನಾಲ್ಕು ವಿಕೆಟ್‌ಗಳ ಅಂತ್ಯಕ್ಕೆ 258 ರನ್‌ ಗಳಿಸಿ ದೊಡ್ಡ ಮೊತ್ತದತ್ತ ದಾಪುಗಾಲಿಡುತ್ತಿದೆ. ಆರಂಭಿಕ ದಿನ ಜವಾಬ್ದಾರಿಯುತ ಬ್ಯಾಟ್‌ ಮಾಡಿ ತಂಡವನ್ನು ಅಪಾಯದಿಂದ ಪಾರು ಮಾಡಿದ ಅಯ್ಯರ್‌ ಶತಕದತ್ತ ದಾಪುಗಾಲಿಡುತ್ತಿದ್ದಾರೆ.

IND vs NZ, 1st Test, Day 2: ಕುತೂಹಲ ಕೆರಳಿಸಿದ ಎರಡನೇ ದಿನದಾಟ: ಶತಕದತ್ತ ಅಯ್ಯರ್: 400ರ ಗಡಿ ದಾಟುತ್ತಾ ಭಾರತ
Shreyas Iyer and Jadeja IND vs NZ

ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಗುರುವಾರ ಆರಂಭವಾಗಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಭಾರತ (India vs New Zealand 1st Test) ಉತ್ತಮ ಆರಂಭ ಪಡೆದುಕೊಂಡಿದೆ. ಆರಂಭಿಕರ ಕಳಪೆ ಪ್ರದರ್ಶನದ ನಡುವೆಯೂ ಪದಾರ್ಪಣೆ ಪಂದ್ಯದಲ್ಲಿ ಅದ್ಭುತ ಆಟವಾಡುತ್ತಿರುವ ಶ್ರೇಯಸ್ ಅಯ್ಯರ್ (Shreyas Iyer) ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ. ರವೀಂದ್ರ ಜಡೇಜಾ (Ravindra Jadeja) ಇವರಿಗೆ ಉತ್ತಮ ಸಾತ್ ನೀಡುತ್ತಿದ್ದಾರೆ. ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ (Team India) 84 ಓವರ್‌ಗಳಿಗೆ ನಾಲ್ಕು ವಿಕೆಟ್‌ಗಳ ಅಂತ್ಯಕ್ಕೆ 258 ರನ್‌ ಗಳಿಸಿ ದೊಡ್ಡ ಮೊತ್ತದತ್ತ ದಾಪುಗಾಲಿಡುತ್ತಿದೆ. ಆರಂಭಿಕ ದಿನ ಜವಾಬ್ದಾರಿಯುತ ಬ್ಯಾಟ್‌ ಮಾಡಿ ತಂಡವನ್ನು ಅಪಾಯದಿಂದ ಪಾರು ಮಾಡಿದ ಅಯ್ಯರ್‌ ಶತಕದತ್ತ ದಾಪುಗಾಲಿಡುತ್ತಿದ್ದಾರೆ.

ಟಾಸ್ ಗೆದ್ದು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ನಿರಾಸೆ ಮೂಡಿಸಿತು. ಕರ್ನಾಟಕದ ಮಯಂಕ್ ಅಗರ್ವಾಲ್ ಕೇವಲ 13 ರನ್ ಗಳಿಸಿ ಔಟಾದರು. ಆದರೆ, ನಂತರ ಶುಭ್ಮನ್ ಗಿಲ್ ಮತ್ತು ಚೇತೇಶ್ವರ್ ಪೂಜಾರ 2ನೇ ವಿಕೆಟ್​ಗೆ 61 ರನ್ ಜೊತೆಯಾಟ ಆಡಿದ್ದು ತಂಡದ ಇನ್ನಿಂಗ್ಸ್​ಗೆ ಜೀವ ಸಿಕ್ಕಿತು. ಶುಬ್ಮನ್ ಗಿಲ್ 1 ಸಿಕ್ಸರ್ ಸಹಿತ 93 ಬಾಲ್​ನಲ್ಲಿ 52 ರನ್ ಗಳಿಸಿದರು. ತಾಳ್ಮೆಯುತ ಆಟ ಪ್ರದರ್ಶಿಸುತ್ತಿದ್ದ ಪೂಜಾರ ಕೂಡ 26 ರನ್ ಗಳಿಸಿದ್ದಾಗ ವೇಗಿ ಸೋಥಿ ಬೌಲಿಂಗ್‍ನಲ್ಲಿ ಔಟಾದರು.

ಈ ವೇಳೆ ಜೊತೆಯಾದ ಶ್ರೇಯಸ್‌ ಅಯ್ಯರ್‌ ಹಾಗೂ ರವೀಂದ್ರ ಜಡೇಜಾ ಕಿವೀಸ್‌ ದಾಳಿಯನ್ನು ಸಮರ್ಥವಾಗಿ ಮೆಟ್ಟಿ ನಿಂತರು. ಈ ಜೋಡಿ ಮುರಿಯದ 5ನೇ ವಿಕೆಟ್‌ಗೆ ಅಜೇಯ 113 ರನ್‌ ಗಳಿಸಿ ತಂಡಕ್ಕೆ ಆಸರೆಯಾಯಿತು. ಪದಾರ್ಪಣೆ ಪಂದ್ಯದಲ್ಲಿಯೇ ಅಮೋಘ ಬ್ಯಾಟ್‌ ಮಾಡಿದ ಶ್ರೇಯಸ್‌ ಅಯ್ಯರ್‌ 136 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ಏಳು ಬೌಂಡರಿಗಳೊಂದಿಗೆ ಅಜೇಯ 75 ರನ್‌ ಗಳಿಸಿದರು, ಮತ್ತೊಂದು ತುದಿಯಲ್ಲಿ ಇವರ ಜೊತೆ ನಿರ್ಣಾಯಕ ಶತಕದ ಜೊತೆಯಾಟವಾಡಿದ ರವೀಂದ್ರ ಜಡೇಜಾ 100 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 50 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

ನ್ಯೂಜಿಲೆಂಡ್ ಬೌಲರ್​ಗಳ ಪೈಕಿ ಕೈಲೆ ಜೇಮಿಸನ್ ಯಶಸ್ಸು ಗಳಿಸಿದರು. ಅವರು 3 ವಿಕೆಟ್ ಪಡೆದರೆ ಟಿಮ್ ಸೌದಿಗೆ ವಿಕೆಟ್ ಸಿಕ್ಕಿದ್ದು ಒಂದು ಮಾತ್ರ. ಕಿವೀಸ್ ತಂಡದ ಯಾವ ಸ್ಪಿನ್ ಬೌಲರ್​ಗೂ ವಿಕೆಟ್ ಸಿಗಲಿಲ್ಲ. ನ್ಯೂಜಿಲೆಂಡ್ ತಂಡದ ಆಲ್​ರೌಂಡರ್ ರಚಿನ್ ರವೀಂದ್ರ ಅವರು ಈ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು.

ಸ್ಕೋರು ವಿವರ ಮೊದಲ ದಿನದಾಟದ ಅಂತ್ಯಕ್ಕೆ:

ಭಾರತ ಮೊದಲ ಇನ್ನಿಂಗ್ಸ್ 84 ಓವರ್ 258/4

(ಶ್ರೇಯಸ್ ಅಯ್ಯರ್ ಅಜೇಯ 75, ರವೀಂದ್ರ ಜಡೇಜಾ ಅಜೇಯ 50, ಶುಬ್ಮನ್ ಗಿಲ್ 52, ಅಜಿಂಕ್ಯ ರಹಾನೆ 35, ಚೇತೇಶ್ವರ್ ಪೂಜಾರ 26 ರನ್- ಕೈಲೆ ಜೇಮಿಸನ್ 47/3)

IPL 2022: ಡೆಲ್ಲಿ ಕ್ಯಾಪಿಟಲ್ಸ್​ ನಾಲ್ವರು ಫೈನಲ್: ಸ್ಟಾರ್ ಆಟಗಾರರು ರಿಲೀಸ್

(Shreyas Iyer and Ravindra Jadeja revived India to 258-4 against New Zealand at stumps on the first day)

Click on your DTH Provider to Add TV9 Kannada