Viral Video: ಶಿನ್-ಚಾನ್ ಕಾರ್ಟೂನ್ ಧ್ವನಿಯಲ್ಲಿ ‘ಓ ಬೇದರ್ದೆಯಾ’ ಹಿಂದಿ ಹಾಡನ್ನು ಹಾಡಿದ ಯುವತಿ

ಶಿನ್-ಚಾನ್ ಕಾರ್ಟೂನ್ ಧ್ವನಿಯಲ್ಲಿ ಮೂಡಿಬಂದ ಓ ಬೇಡರ್ದೆಯಾ’ ಹಿಂದಿ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋವನ್ನು ಧ್ವನಿ ಮುದ್ರಿಕೆ ಕಲಾವಿದೆ ಆಕಾಂಕ್ಷಾ ಶರ್ಮ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Viral Video: ಶಿನ್-ಚಾನ್ ಕಾರ್ಟೂನ್ ಧ್ವನಿಯಲ್ಲಿ ‘ಓ ಬೇದರ್ದೆಯಾ’ ಹಿಂದಿ ಹಾಡನ್ನು ಹಾಡಿದ ಯುವತಿ
ವೈರಲ್ ವೀಡಿಯೊ
Updated By: ಅಕ್ಷಯ್​ ಪಲ್ಲಮಜಲು​​

Updated on: May 11, 2023 | 7:29 PM

ಆನಿಮೇಟೆಡ್ ಕಾರ್ಟೂನ್ ಶಿನ್-ಚಾನ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ನೀವು ನಿಮ್ಮ ಬಾಲ್ಯದಲ್ಲಿ ಕಾರ್ಟೂನ್​​​ಗಳನ್ನು ಇಷ್ಟಡುತ್ತಿದ್ದರೆ, ಖಂಡಿತವಾಗಿಯೂ ಶಿನ್-ಚಾನ್ ಕಾರ್ಟೂನ್ ಬಗ್ಗೆ ನಿಮಗೆ ಗೊತ್ತಿರುತ್ತೆ. ಶಿನ್-ಚಾನ್ ಚೇಷ್ಟೆ ಮತ್ತು ತುಂಟಾಟ ಮತ್ತು ತನ್ನ ತಮಾಷೆಯ ಧ್ವನಿಯ ಮೂಲಕ ಮಕ್ಕಳಿಗೆ ಇಷ್ಟವಾಗುತ್ತಾನೆ. ಈ ಕಾರ್ಟೂನ್ ಧ್ವನಿಯಲ್ಲಿ ಒಂದು ಹಾಡು ಹಾಡಿದರೆ ಹೇಗಿರಬಹುದು, ಅದರಲ್ಲೂ ಶ್ರದ್ಧಾ ಕಪೂರ್ ಮತ್ತು ರಣಬೀರ್ ಕಪೂರ್ ಅಭಿನಯದ ತು ಜೂತಿ ಮೈನ್ ಮಕ್ಕರ್ ಚಿತ್ರದ ಓ ಬೇದರ್ದೆಯಾ’ ಎಂಬ ಎಮೋಷನಲ್ ಹಾಡನ್ನು ಹಾಡಿದರೆ ಹೇಗಿರಬಹುದು. ಈ ಪ್ರಯೋಗವನ್ನು ಧ್ವನಿ ಮುದ್ರಿಕೆ ಕಲಾವಿದೆ ಆಕಾಂಕ್ಷ ಶರ್ಮ ಅವರು ಪ್ರಯೋಗಿಸಿದ್ದಾರೆ. ಜೊತೆಗೆ ಅವರ ಶಿನ್-ಚನ್ ಆವೃತ್ತಿಯ ಓ ಬೇಡರ್ದೆಯಾ’ ಹಾಡು ಇನ್ಸ್ಟಾಗ್ರಾಮ್ ನಲ್ಲಿ ಸಕ್ಕತ್ ವೈರಲ್ ಆಗಿದೆ.

ಈ ವೀಡಿಯೋವನ್ನು ಆಕಾಂಕ್ಷ ಶರ್ಮಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಓ ಬೇಡರ್ದೆಯ ಹಾಡಿನ ಶಿನ್-ಚನ್ ಆವೃತ್ತಿ. ಶಿಂಚನ್ ತಮಾಷೆ ಮಾಡದೆ ಎಮೋಷನಲ್ ಹಾಡುಗಳನ್ನು ಹಾಡಬಹುದೇ” ಎಂದು ಶೀರ್ಷಿಕೆಯನ್ನು ನೀಡಿದ್ದಾರೆ. ಆಕಾಂಕ್ಷ ಹೆಡ್ಫೋನ್ ಧರಿಸಿ ಮೈಕ್ರೋಫೋನ್ ಮುಂದೆ ಶಿಂಚನ್ ಧ್ವನಿಯಲ್ಲಿ ಹಾಡುವುದನ್ನು ಈ ವೀಡಿಯೋದಲ್ಲಿ ಕಾಣಬಹುದು. ಈ ದುಃಖದ ಹಾಡನ್ನು ಶಿಂಚನ್ ಧ್ವನಿಯಲ್ಲಿ ಕೇಳಿದರೆ ನಿಮಗೆ ನಗು ಬರುವುದಂತೂ ಖಂಡಿತ.

ಇದನ್ನೂ ಓದಿ:Viral News: ಪತಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸ್​ ಠಾಣೆ ಮೆಟ್ಟಿಲೇರಿದ ಪತ್ನಿ, ವಿಷಯ ಬೇರೆಯೇ ಇದೆ

ಈ ವೈರಲ್ ವೀಡಿಯೋ ಇಲ್ಲಿಯವರೆಗೆ 636 ಸಾವಿರ ವೀಕ್ಷಣೆಗಳನ್ನು ಮತ್ತು 51.9 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್​​​ಗಳು ಹರಿದು ಬಂದಿವೆ. ಒಬ್ಬ ಬಳಕೆದಾರರು ‘ಅತ್ಯಂತ ದುಃಖದ ಹಾಡನ್ನು ತಮಾಷೆಯ ಹಾಡನ್ನಾಗಿ ಪರಿವರ್ತಿಸಲಾಗಿದೆ, ನಿಮಗೆ ಧನ್ಯವಾದಗಳು’ನಗುತ್ತಾ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ನೀವು ನೋವಿನಲ್ಲೂ ನನ್ನನ್ನು ನಗುವಂತೆ ಮಾಡಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಹೆಚ್ಚಿನವರು ಇದು ತುಂಬಾ ತಮಾಷೆಯಾಗಿದೆ ಎಂದು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

 

Published On - 3:47 pm, Thu, 11 May 23