ಅವನೇನೂ ಬೇರೆ ಗ್ರಹದಿಂದ ಯುಎಫ್ಒನಲ್ಲಿ ಬಂದವನಲ್ಲ, ತಾನೇ ನಿರ್ಮಿಸಿದ ಡ್ರೋನ್ ಮೇಲೆ ನಿಂತು ನ್ಯೂ ಯಾರ್ಕ್​ ನಗರದ ಮೇಲೆ ಹಾರಾಡುತ್ತಿದ್ದಾನೆ!!

ಈ ವಿಡಿಯೋವನ್ನು ಮೊದಲ ಬಾರಿಗೆ ಮೊರ್ಗನ್ ನೆವಿನ್ಸ್ ಎನ್ನುವವರು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದರು. ಅದಾದ ಮೇಲೆ ರೆಕ್ಸ್ ಚಾಪ್​ಮನ್​ ಎನ್ನುವ ವ್ಯಕ್ತಿ ಟ್ವಿಟ್ಟರ್ ಪ್ಲಾಟ್​ಫಾರ್ಮ್​ನಲ್ಲಿ ಶೇರ್ ಮಾಡಿದರು. ತಮ್ಮ 10 ಸೆಕೆಂಡುಗಳ ವಿಡಿಯೊಗೆ ಅವರು, ‘ಓಹ್ ಏನಿಲ್ಲ- ಒಬ್ಬ ವ್ಯಕ್ತಿ ನ್ಯೂ ಯಾರ್ಕ್ ನಗರದ ಮೇಲೆ ಹಾರಾಡುತ್ತಿದ್ದಾನೆ’ ಎಂಬ ಶೀರ್ಷಿಕೆ ನೀಡಿದ್ದರು

ಅವನೇನೂ ಬೇರೆ ಗ್ರಹದಿಂದ ಯುಎಫ್ಒನಲ್ಲಿ ಬಂದವನಲ್ಲ, ತಾನೇ ನಿರ್ಮಿಸಿದ ಡ್ರೋನ್ ಮೇಲೆ ನಿಂತು ನ್ಯೂ ಯಾರ್ಕ್​ ನಗರದ ಮೇಲೆ ಹಾರಾಡುತ್ತಿದ್ದಾನೆ!!
ಹಂಟರ್ ಕೊವಾಲ್ಡ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jun 24, 2021 | 9:13 PM

ನಾವೆಲ್ಲ ಡ್ರೋನ್​​ಗಳು ಹಾರುವುದನ್ನು ನೋಡಿದ್ದೇವೆ. ಈಗ ಅದು ಸಾಮಾನ್ಯವಾಗಿದೆ ಆದರಲ್ಲೇನೂ ವಿಶೇಷವಿಲ್ಲ. ಆದರೆ ಡ್ರೋನ್ ಒಂದರ ಮೇಲೆ ನಿಂತ ಒಬ್ಬ ವ್ಯಕ್ತಿ ಯಾವುದೋ ಒಂದು ನಗರದ ಬೀದಿಗಳ ಮೇಲೆ, ಇಲ್ಲವೇ ಒಂದು ದೊಡ್ಡ ಮೈದಾನದ ಮೇಲೆ ಹಾರಾಡುವುದನ್ನು ನೋಡಿದ್ದೀರಾ? ಇಲ್ಲ, ಇದು ಭಾರತದಲ್ಲಿ ಆಗಿಲ್ಲ ಬಿಡಿ, ಆದರೆ, ಅಮೇರಿಕದ ನ್ಯೂ ಯಾರ್ಕ್​ ನಗರದ ಟೈಮ್ಸ್ ಚೌಕದ ಮೇಲೆ ಹಾಗೆ ಹಾರಾಡುವ ವ್ಯಕ್ತಿಯನ್ನು ಜನ ನೋಡಿದ್ದಾರೆ. ಅನೇಕರು ಆ ಅಪರೂಪ ಮತ್ತು ಅಭೂತಪೂರ್ವ ಸನ್ನಿವೇಶವನ್ನು ತಮ್ಮ ಮೊಬೈಲ್​ಗಳಲ್ಲಿ ರೆಕಾರ್ಡ್​ ಮಾಡಿಕೊಂಡಿದ್ದು ಅದೀಗ ವೈರಲ್ ಆಗಿಬಿಟ್ಟಿದೆ. ಹಾಗೆ ಹಾರಾಡಿದ ವ್ಯಕ್ತಿಯನ್ನು ಹಂಟರ್ ಕೊವಾಲ್ಡ್ ಹೆಸರಿನ ಯೂಟ್ಯೂಬರ್ ಎಂದು ಗುರುತಿಸಲಾಗಿದ್ದು ಅವನಿಗೆ 23,400 ಪಾಲೋಯರ್ಸ್​ ಇದ್ದಾರೆ.

ಈ ವಿಡಿಯೋವನ್ನು ಮೊದಲ ಬಾರಿಗೆ ಮೊರ್ಗನ್ ನೆವಿನ್ಸ್ ಎನ್ನುವವರು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದರು. ಅದಾದ ಮೇಲೆ ರೆಕ್ಸ್ ಚಾಪ್​ಮನ್​ ಎನ್ನುವ ವ್ಯಕ್ತಿ ಟ್ವಿಟ್ಟರ್ ಪ್ಲಾಟ್​ಫಾರ್ಮ್​ನಲ್ಲಿ ಶೇರ್ ಮಾಡಿದರು. ತಮ್ಮ 10 ಸೆಕೆಂಡುಗಳ ವಿಡಿಯೊಗೆ ಅವರು, ‘ಓಹ್ ಏನಿಲ್ಲ- ಒಬ್ಬ ವ್ಯಕ್ತಿ ನ್ಯೂ ಯಾರ್ಕ್ ನಗರದ ಮೇಲೆ ಹಾರಾಡುತ್ತಿದ್ದಾನೆ’ ಎಂಬ ಶೀರ್ಷಿಕೆ ನೀಡಿದ್ದರು. ಅವರ ವಿಡಿಯೊನಲ್ಲಿ ಕೆಮೆರಾ ಸುತ್ತಿರುವ ಹೆಲ್ಮೆಟ್ ಒಂದನ್ನು ಧರಿಸಿದ ವ್ಯಕ್ತಿ ಭೂಮಿಗಿಂತ 10 ಅಡಿ ಮೇಲೆ ಹಾರಾಡುತ್ತಿರುವುದನ್ನು ನೋಡಬಹುದಾಗಿದೆ.

ನಗರದ ಬೀದಿಗಳಲ್ಲಿರುವ ಜನ ಅವನನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದಾರೆ. ಸದರಿ ವಿಡಿಯೊವನ್ನು ಜೂನ್ 19 ರಂದು ಶೂಟ್​ ಮಾಡಲಾಗಿದೆ. ಚಾಪ್​ಮನ್ ಶೇರ್ ಮಾಡಿರುವ ವಿಡಿಯೋಗೆ 70 ಲಕ್ಷ ವ್ಯೂಗಳು ಬಂದಿವೆ.

ಇನ್​ಸೈಡ್​ ಹೆಸರಿನ ಪತ್ರಿಕೆಯೊಂದರ ಜತೆ ಮಾತಾಡಿರುವ ಹಂಟರ್ ಕೊವಾಲ್ಡ್, ಹಾಗೆ ಹಾರುವುದನ್ನು ಸಾಧ್ಯವಾಗಿಸಲು ತನಗೆ ಹಲವಾರು ವರ್ಷ ಬೇಕಾದವು ಎಂದು ಹೇಳಿದ್ದಾನೆ. ‘ಉತ್ಕೃಷ್ಟ ಮಟ್ಟದ ಇಂಜಿನೀಯರಿಂಗ್ ತಂತ್ರಜ್ಞಾನದ ಮೂಲಕ ಈ ಉಪಕರಣವನ್ನು ತಯಾರಿಸಲಾಗಿದೆ. ಅದನ್ನು ಸೂಕ್ತ ಮತ್ತು ಸುರಕ್ಷಿತವಾಗಿ ಹಾರಿಸಲು ನಾನು ಹಲವಾರು ವರ್ಷಗಳ ಕಾಲ ಪ್ರಯತ್ನಪಟ್ಟಿದ್ದೇನೆ. ಡ್ರೋನ್ ತಯಾರಿಸುವಾಗ ಅದರ ಸುರಕ್ಷತೆಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಒಂದು ಪಕ್ಷ ಅದರ ಎರಡು ಮೋಟಾರ್​ಗಳು ವಿಫಲಗೊಂಡರೂ ನಾನು ಸುರಕ್ಷಿತವಾಗಿ ಲ್ಯಾಂಡ್​ ಆಗಬಲ್ಲೆ, ಎಂದು ಕೊವಾಲ್ಡ್ ಹೇಳಿದ್ದಾನೆ. ತನ್ನ ಸಾಹಸದ ವಿಡಿಯೊಗಳನ್ನು ಕೊವಾಲ್ಡ್ ಆಗಾಗ ಯೂಟ್ಯೂಬ್​ನಲ್ಲಿ ಪೋಸ್ಟ್​ ಮಾಡುತ್ತಿರುತ್ತಾನೆ.

ಈ ಸ್ಟಂಟ್​ಗೆ ಕೈ ಹಾಕುವ ಮೊದಲು ಅಗತ್ಯವಿದ್ದ ಸಕಲ ಅನುಮತಿಗಳನ್ನು ಪಡೆದುಕೊಳ್ಳಲಾಯಿತು ಎಂದು ಕೊವಾಲ್ಡ್​ ಹೇಳಿದ್ದಾನೆ. ‘ಸಾಕಷ್ಟು ಮೊದಲೇ ಕೇಳಿ ಪಡೆದ ಅನುಮತಿ ನಮಗಿತ್ತು. ಈ ಸಾಹಸ ಸುರಕ್ಷಿತವಾಗಿ ನೇರವೇರಲಿ ಅಂತ ಎಲ್ಲರೂ ನಮಗೆ ಸಹಾಯ ಮಾಡಿದರು,’ ಎಂದು ಅವನು ಹೇಳಿದ್ದಾನೆ ಆದರೆ, ನ್ಯೂ ಯಾರ್ಕ್ ಪೊಲೀಸ್ ಇಲಾಖೆ (ಎನ್ ವೈ ಪಿ ಡಿ) ಸದರಿ ವಿಡಿಯೋವನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದೆ.

ನೆಟ್ಟಿಗರು ಕೊವಾಲ್ಡ್​ ಸಾಹಸವನ್ನು ಸ್ಪೈಡರ್​ಮ್ಯಾನ್ ಚಿತ್ರದಲ್ಲಿ ಗ್ರೀನ್​ ಗೋಬ್ಲಿನ್ ಮಾಡಿದ ಸ್ಟಂಟ್​ಗಳಿಗೆ ಹೋಲಿಸುತ್ತಿದ್ದಾರೆ. ಸಿನಿಮಾದ ಬಗ್ಗೆ ಮಾಹಿತಿ ಇಲ್ಲದವರಿಗೆ ಗ್ರೀನ್​ ಗೋಬ್ಲಿನ್ ಆ ಚಿತ್ರದಲ್ಲಿ ಖಳನಾಯಕನಾಗಿದ್ದಾನೆ. ಚಿತ್ರದಲ್ಲಿ ವಿಲ್ಲೆಮ್ ಡಾಫೆಯ ಗ್ರೀನ್​ ಗೋಬ್ಲಿನ್ ತನ್ನ ಹೋವರ್​​ಬೋರ್ಡ್​ ಮೇಲೆ ನಗರದ ಮೇಲೆಲ್ಲ ಹಾರಾಡಿ ಸ್ಫೋಟಕಗಳನ್ನು ಡ್ರಾಪ್ ಮಾಡುವ ಸನ್ನಿವೇಶ ನೆಟ್ಟಿಗರಿಗೆ ನೆನಪಾಗುತ್ತಿದೆ.

ಇದನ್ನೂ ಓದಿ: Viral Video: ಈ ಡ್ರೋನ್​ನಲ್ಲಿ ಮನುಷ್ಯರೂ ಕೂತು ಹಾರಬಹುದು! ವಿಡಿಯೋ ನೋಡಿ

ಇದನ್ನೂ ಓದಿ: Drones in Agriculture: ಭತ್ತದ ಕಣಜದಲ್ಲಿ ಕ್ರೀಮಿನಾಶಕ ಸಿಂಪಡಣೆಗಾಗಿ ಡ್ರೋನ್​ಗೆ ಮೊರೆ ಹೋದ ರೈತರು

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್