ಈ ವಾರದ ಆರಂಭ ಎಲ್ಲಿರಿಗೂ ನೋವು ತಂದಿದೆ. ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್(Lata Mangeshwar) ನಮ್ಮನ್ನು ಅಗಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಲತಾ ಮಂಗೇಶ್ಕರ್ ಅವರಿಗೆ ತಮ್ಮದೇ ರೀತಿಯಲ್ಲಿ ಅಭಿಮಾನಿಗಳು ನಮನ ಸಲ್ಲಿಸಿದ್ದಾರೆ. ಅದೇ ರೀತಿ ವ್ಯಾಲೆಂಟೈನ್ಸ್ ವೀಕ್ (Valentine’s Week) ಕೂಡ ನಡೆಯುತ್ತಿದೆ. ಇವೆಲ್ಲದರ ನಡುವೆ ಈ ವಾರ ಕೆಲವೊಂದಿಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Virla Video) ಆಗಿದೆ. ಇಲ್ಲಿವೆ ನೋಡಿ ಈ ವಾರದ ಟಾಪ್ 5 ವೈರಲ್ ವಿಡಿಯೋಗಳು.
ಈ ವಾರ ಶೂಟರ್ ದಾದಿ ಎಂದೇ ಖ್ಯಾತಿ ಪಡೆದಿರುವ ಪ್ರಕಾಶಿ ತೋಮರ್ ಈಗಾಗಲೇ ವಿದೇಶಗಳಲ್ಲೂ ಸಖತ್ ವೈರಲ್ ಆಗಿರುವ ಕಚ್ಚಾ ಬಾದಾಮ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ
ಲತಾ ಮಂಗೇಶ್ಕರ್ ನಿಧನ ಸಂಗೀತ ಲೊಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ನಿಧನದ ಬಳಿಕ ಇಂಡೋ-ಫ್ರೆಂಚ್ ಜೋಡಿ ಅವರ ಹಾಡನ್ನು ಹಾಡುವ ಮೂಲಕ ಲತಾ ಅವರಿಗೆ ನಮನ ಸಲ್ಲಿಸಿದ್ದಾರೆ. ಇಂಡಿಯಾದ ಮೆಘದೂತ್ ರಾಯ್ ಚೌದರಿ ಮತ್ತು ಪೌಲಿನಾ ದಂಪತಿ ಲತಾ ಅವರ ಹಾಡನ್ನು ಹೇಳುವ ಮೂಲಕ ಗೌರವ ಸಲ್ಲಿಸಿದ್ದಾರೆ. ಅದರ ವಿಡಿಯೋ ಇಲ್ಲಿದೆ ನೋಡಿ
ಪುಷ್ಟ ಚಿತ್ರದ ಓ ಅಂಟಾವಾ ಹಾಡಿಗೆ ಸಖತ್ ಸ್ಟೆಪ್ ಹಾಕಿದ ದೇಸಿ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿದೆ. ಪ್ರಾಂಚಿ ಮತ್ತು ರೋನಕ್ ಎನ್ನುವ ದಂಪತಿಯ ಡ್ಯಾನ್ಸ್ ವಿಡಿಯೋ ನೋಡಿ ನೆಟ್ಟಿಗರೂ ಕೂಡ ಮೆಚ್ಚಿಕೊಂಡಿದ್ದಾರೆ.
ಬಾಲಕಿಯೊಬ್ಬಳು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ರಾಮ್ ಲೀಲಾ ಚಿತ್ರದ ಡೈಲಾಗ್ ಅನ್ನು ಯಥಾವತ್ತಾಗಿ ನಟನೆ ಮಾಡಿದ್ದಾಳೆ. ದೀಪಿಕಾ ಪಡುಕೋಣೆಯಂತೆ ಉಡುಪನ್ನು ಧರಿಸಿ ಡೈಲಾಗ್ ಹೇಳಿದ ವಿಡಿಯೊ ವೈರಲ್ ಆಗಿದೆ. ವಿಡಿಯೋ ಇಲ್ಲಿದೆ ನೋಡಿ
Leela jaisi koi nahi! ?
Check out this mini version of you! @deepikapadukone
Love the expressions! ❤️ #chotideepika pic.twitter.com/sY3Pa692CG— Ranveer Singh (@RanveerOfficial) February 9, 2022
ಪುಷ್ಟ ಚಿತ್ರದ ಹಾಟ್ ವೈರಲ್ ಹಾಡು ಶ್ರೀವಲ್ಲಿಗೆ ಬಚ್ಪನ್ಕಾ ಪ್ಯಾರ್ ಖ್ಯಾತಿಯ ಸಹದೇವ್ ದಿರ್ಡೋ ಸಖತ್ ಸ್ಟೆಪ್ ಹಾಕಿದ್ದಾರೆ. ಈಗಾಗಲೇ ಹಲವು ಸ್ಟಾರ್ ನಟ, ನಟಿಯರು ಅಷ್ಟೇ ಯಾಕೆ ವಿದೇಶದಲ್ಲಿ ಶ್ರೀವಲ್ಲಿ ಹಾಡಿನ ಸಿಗ್ನೇಚರ್ ಸ್ಟೆಪ್ ಸಖತ್ ವೈರಲ್ ಆಗಿತ್ತು.
ಇದನ್ನೂ ಓದಿ: