ಶ್ರೀಲಂಕಾ ಮೂಲದ ಗಾಯಕಿ ಯೋಹನಿ ದಿಲೋಕಾ ಡಿ ಸಿಲ್ವಾ ಹಾಡಿದ ಮನಿಕೆ ಮಗೆ ಹಿತೆ ಹಾಡು ನೆಟ್ಟಿಗರ ಫೇವರೇಟ್ ಹಾಡುಗಳಲ್ಲಿ ಒಂದಾಗಿದೆ. ಸೋಷಿಯಲ್ ಮೀಡಿಯಾಗಳಾದ ಫೇಸ್ಬುಕ್ ಇನ್ಸ್ಟಾಗ್ರಾಮ್, ವಾಟ್ಸಾಪ್ ಎಲ್ಲಿಯೂ ಅದೇ ಹಾಡು. ಕೆಲವರು ಹಾಡು ಹೇಳುತ್ತಾ ವಿಡಿಯೊ ಮಾಡಿದರೆ ಇನ್ನು ಕೆಲವರು ಮನಿಕೆ ಮಗೆ ಹಿತೆ (Manike mage hithe) ಹಾಡಿಗೆ ನೃತ್ಯ (Dance) ಮಾಡಿದ್ದಾರೆ. ಈ ಹಿಂದೆಯೂ ವಿವಿಧ ರೀತಿಯಲ್ಲಿ ನೃತ್ಯ ಮಾಡಿರುವುದು ಸಕತ್ ವೈರಲ್ (Viral video) ಆಗಿತ್ತು. ಇದೀಗ ಹಿಮಾಲಯದ ಸನ್ಯಾಸಿಗಳು (Himalayan monks) ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ (Social Media) ಸಕತ್ ವೈರಲ್ ಆಗಿದೆ.
ಹಿಮಾಲಯದ ಸನ್ಯಾಸಿಗಳು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೊ ಕ್ಲಿಪ್ ಗಮನಿಸಿದಂತೆ, ಇಬ್ಬರು ಈ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಮನಿಕೆ ಮಗೆ ಹಿತೆ ಹಾಡನ್ನು ಎಂಜಾಯ್ ಮಾಡುತ್ತಾ ಹೆಜ್ಜೆ ಹಾಕಿದ್ದಾರೆ. ಎಂದಿಗೂ ಆಶಾವಾದಿಯಾಗಿರು, ಒಳ್ಳೆಯ ದಿನಗಳು ನಮ್ಮ ದಾರಿಯಲ್ಲಿವೆ ಎಂಬ ಶೀರ್ಷಿಕೆ ನೀಡುವ ಮೂಲಕ ವಿಡಿಯೊ ಹಂಚಿಕೊಳ್ಳಲಾಗಿದೆ.
ನೆಟ್ಟಿಗರು ವಿಡಿಯೊವನ್ನು ಇಷ್ಟಪಟ್ಟಿದ್ದಾರೆ. ಅದ್ಭುತವಾದ ವಿಡಿಯೊ ಎಂದು ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಇಂತಹ ಪ್ರತಿಭೆಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ ಎಂದು ಮತ್ತೋರ್ವರು ಹೇಳಿದ್ದಾರೆ. ಸ್ಟೇ ಪಾಸಿಟಿವ್, ನಿಮ್ಮ ದಿನಗಳು ಚೆನ್ನಾಗಿರಲಿ ಎಂದು ಹೇಳುತ್ತಾ ನೃತ್ಯ ಮಾಡುವ ಮೂಲಕ ಜನರಲ್ಲಿ ಸಂತೋಷವನ್ನು ಹರಡಲು ನೃತ್ಯ ಹಿಮಾಲಯದ ಸನ್ಯಾಸಿಗಳು ಮಾಡಿದ್ದಾರೆ. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಮನಿಕೆ ಮಗೆ ಹಿತೆ ಹಾಡು ಇತ್ತೀಚೆಗೆ ಎಲ್ಲರಿಗೂ ಫುಲ್ ಫೇವರೇಟ್ ಹಾಡಾಗಿದೆ. ಜನರು ಹೆಚ್ಚು ಇಷ್ಟಪಟ್ಟಿದ್ದು, ಹಾಡನ್ನು ಹಾಡಲು ಪ್ರಯ್ನಿಸುತ್ತಿರುವ ವಿಡಿಯೊಗಳೂ ಸಹ ಈ ಹಿಂದೆ ವೈರಲ್ ಆಗಿತ್ತು. ಕೆಲವರು ಸಕತ್ ಸ್ಟೆಪ್ ಹಾಕುವ ಮೂಲಕ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಹೀಗೆ ತಮಗಿಷ್ಟದ ಹಾಡಿಗೆ ಸಂತೋಷದಿಂದ ನೃತ್ಯ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:
‘ಮನಿಕೆ ಮಗೆ ಹಿತೆ’ ರೀಲ್ಸ್ ಮಾಡುವಂತೆ ದುಂಬಾಲು ಬಿದ್ದ ಅಭಿಮಾನಿಗಳ ಆಸೆ ನೆರವೇರಿಸಿದ ನಟಿ; ವಿಡಿಯೋ ನೋಡಿ
Viral Video: ಮನಿಕೆ ಮಗೆ ಹಿತೆ ಹಾಡಿಗೆ ಯುವತಿಯ ಬೆಲ್ಲಿ ಡಾನ್ಸ್; ನೆಟ್ಟಿಗರೆಲ್ಲಾ ಫಿದಾ