ರಿಯಲಿಸ್ಟಿಕ್ ಸ್ಕೆಚ್ಗಳನ್ನು ಪ್ರದರ್ಶಿಸುವ ಸಾಕಷ್ಟು ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತವೆ. ಅವುಗಳಲ್ಲಿ ಕೆಲವು ಚಿತ್ರಗಳನ್ನು ನೋಡಿದಾಕ್ಷಣ ನಿಜವಾದ ವಸ್ತು ಅನ್ನಿಸುವಷ್ಟು ಸುಂದರವಾಗಿ ಮೂಡಿಬಂದಿರುತ್ತವೆ. ಇವುಗಳೆಲ್ಲವೂ ಕಲಾವಿದನ ಕೈಚಳಕದಿಂದ ಮೂಡಿರುವಂಥದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆದ ವಿಡಿಯೊವೊಂದು ಇಲ್ಲಿವೆ. ಕಣ್ಣಿನಂಚಿನಿಂದ ಕೆನ್ನೆಯ ಮೇಲೆ ನೀರು ಜಾರುವುದರಲ್ಲಿದೆ, ನಿಜವಾದ ಕಣ್ಣು ಅನ್ನಿಸುವಷ್ಟರ ಮಟ್ಟಿಗೆ ಆಕರ್ಷಕವಾಗಿ ಕಾಣಿಸುವ ಚಿತ್ರ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ಕಲಾವಿದನನ್ನು ಶ್ಲಾಘಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದೆ. ಮೊದಲು ಯುಟ್ಯೂಬ್ನಲ್ಲಿ ವಿಡಿಯೊ ಹಂಚಿಕೊಂಡ ಬಳಿಕ ಇತರ ಸಾಮಾಜಿಕ ಮಾಧ್ಯಗಳಲ್ಲಿ ವಿಡಿಯೊ ಹರಿದಾಡಿತು. ನೆಟ್ಟಿಗರ ಗಮನಸೆಳೆದ ವಿಡಿಯೊ ಇದಾಗಿದ್ದು, ನಿಜವಾಗಿಯೂ ವ್ಯಕ್ತಿ ಅಳುತ್ತಿದ್ದಂತೆಯೇ ಅನಿಸುತ್ತಿದೆ ಎಂದು ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. ವಿಡಿಯೊ ಪೋಸ್ಟ್ ಮಾಡಿದ ಬಳಿಕ ಸುಮಾರು 30,000 ಕ್ಕೂ ಹೆಚ್ಚಿನ ಲೈಕ್ಸ್ಗಳನ್ನು ಗಳಿಸಿಕೊಂಡಿದೆ. ತುಂಬಾ ಅದ್ಭುತವಾದ ವಿಡಿಯೊವಿದು ಎಂದು ಓರ್ವರು ಹೇಳಿದ್ದಾರೆ.
View this post on Instagram
ವಾವ್! ಅದ್ಭುತ ಎಂದು ಓರ್ವರು ಪ್ರತಿಕ್ರಿಯೆ ನೀಡಿದ್ದಾರೆ. ತುಂಬಾ ಸುಂದರವಾಗಿದೆ ಎಂದು ಮತ್ತೋರ್ವರು ಅಭಿಪ್ರಾಯವನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಅದೆಷ್ಟೊ ವಿಡಿಯೊಗಳು ಮನಸ್ಸಿಗೆ ಹೆಚ್ಚು ಇಷ್ಟವಾಗುತ್ತವೆ. ಅವುಗಳಲ್ಲಿ ಕೆಲವನ್ನು ಪದೇ ಪದೇ ನೋಡಬೇಕು ಅನ್ನುವಷ್ಟು ಅಚ್ಚರಿ ಮೂಡಿಸುತ್ತವೆ. ಇದೀಗ ವೈರಲ್ ಆದ ವಿಡಿಯೊ ಕ್ಲಿಪ್ ಕೂಡಾ ಅಂಥದ್ದೇ, ಕಲಾವಿದ ತುಂಬಾ ಸುಂದರವಾಗಿ ಕಣ್ಣಿನ ಚಿತ್ರವನ್ನು ಬಿಡಿಸಿದ್ದಾರೆ.
ಇದನ್ನೂ ಓದಿ:
Viral Video: ಫಾಂಟಾ ಕೋಲ್ಡ್ ಡ್ರಿಂಕ್ಸ್ ವಿತ್ ನೂಡಲ್ಸ್ ಸವಿದಿದ್ದೀರಾ? ಹೆಸರು ಕೇಳಿಯೇ ಕನ್ಫ್ಯೂಸ್ ಆದ ನೆಟ್ಟಿಗರು