ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೊಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ವಿಡಿಯೊಗಳು ಭಯಾನಕವಾಗಿರುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಬೈಕ್ ಸ್ಟಂಟ್ಳಗಳ ಅದೆಷ್ಟೊ ವಿಡಿಯೊಗಳನ್ನು ನಾವು ನೋಡಿದ್ದೇವೆ. ಬೈಕ್ ಸ್ಟಂಟ್ ಮಾಡಲು ಹೋಗಿ ಆಕಸ್ಮಿಕವಾಗಿ ನಡೆದ ಕೆಲವು ಅಪಘಾತಗಳು ಎಚ್ಚರಿಕೆಯ ಸಂದೇಶವನ್ನು ಸಾರುತ್ತವೆ. ಅಂತಹುದೇ ಒಂದು ವಿಡಿಯೊ ಇದೀಗ ವೈರಲ್ ಆಗಿದೆ. ರಸ್ತೆಯ ಮೇಲೆ ಬೈಕ್ ಸ್ಟಂಟ್ ಮಾಡಲು ಹೋದ ವ್ಯಕ್ತಿಯ ಪರಿಸ್ಥಿತಿ ಏನಾಗಿದೆ ಎಂದು ವಿಡಿಯೊದಲ್ಲೇ ನೋಡಿ.
ವಿಡಿಯೊದಲ್ಲಿ ಗಮನಿಸುವಂತೆ ವ್ಯಕ್ತಿ ಬೈಕ್ ಸ್ಟಂಟ್ ಮಾಡುತ್ತಿದ್ದಾನೆ. ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡುತ್ತಿದ್ದಂತೆಯೇ ಇನ್ನೋರ್ವ ವ್ಯಕ್ತಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ ಹಿಡಿದಿದ್ದಾನೆ. ಬೈಕರ್ ವೇಗವಾಗಿ ಬೈಕ್ ಓಡಿಸುತ್ತಾ ವೀಲಿಂಗ್ ಮಾಡಿದ್ದಾನೆ. ಬಳಿಕ ಬೈಕ್ ಮೇಲೆ ಹತ್ತಿ ನಿಲ್ಲುತ್ತಾನೆ. ಆ ಸಂದರ್ಭದಲ್ಲಿ ಅಚಾನಕ್ಆಗಿ ನಿಯಂತ್ರಣ ತಪ್ಪಿ ನೆಲಕ್ಕುರುಳಿದ್ದಾನೆ. ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು ಫುಲ್ ವೈರಲ್ ಆಗಿದೆ.
ಈ ಶಾಕಿಂಗ್ ವಿಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ಹೆಲ್ಮೆಟ್ ಧರಿಸುವುದು ಎಷ್ಟು ಮುಖ್ಯ ಎಂಬುದನ್ನು ವಿಡಿಯೊ ನೋಡಿ ತಿಳಿಯಬಹುದು. ಬೈಕರ್ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದ್ದರಿಂದ ಯಾವುದೇ ಅಪಾಯಗಳಾಗಿಲ್ಲ. ನವೆಂಬರ್ 26ರಂದು ವಿಡಿಯೊ ಹಂಚಿಕೊಳ್ಳಲಾಗಿದೆ. ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಸ್ಟಂಟ್ ವಿಡಿಯೊವನ್ನು ನೋಡಿ ಕೆಲವರು ಕೋಪಗೊಂಡಿದ್ದಾರೆ. ಪ್ರಾಣಕ್ಕೇ ಅಪಾಯ ತಂದೊಡ್ಡುವ ಸಾಹಸಗಳನ್ನು ಏಕೆ ಮಾಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಬೈಕ್ ಓಡಿಸುವಾಗ ಎಂದಿಗೂ ಹೆಲ್ಮೆಟ್ ಧರಿಸುವುದನ್ನು ಮರೆಯದಿರಿ ಎಂದು ಸೂಚನೆ ನೀಡಿದ್ದಾರೆ. ಇನ್ನು ಕೆಲವರು ತಮಾಷೆ ಮಾಡಿದ್ದು, ಇದು ಆಸ್ಪತ್ರೆ ತಲುಪುವ ಟ್ರಿಕ್ ಆಗಿರಬೇಕು ಅಂದಿದ್ದಾರೆ.
ಇದನ್ನೂ ಓದಿ:
Shocking Video: ಪ್ಯಾರಾಸೈಲಿಂಗ್ ಮಾಡುವ ವೇಳೆ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ; ಶಾಕಿಂಗ್ ವಿಡಿಯೊ ವೈರಲ್