Viral Video: ಇದು ಎಣ್ಣೆ​​​​​ ಎಫೆಕ್ಟ್​​, ಕಾಲಿನಲ್ಲಿ ಒಂದು ಡಿಚ್ಚಿ, ಕಾರಿನ ಗಾಜು ಪುಡಿ ಪುಡಿ

ಕುಡಿದ ಮತ್ತಿನಲ್ಲಿ  ಕುಡುಕರು ಮಾಡುವ ಅವಾಂತರಗಳು ಒಂದೆರಡಲ್ಲ. ಈ ಕುಡುಕರ ಬೀದಿ ರಂಪಾಟದ  ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತದೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ನಶೆಯ ಮತ್ತಿನಲ್ಲಿ ಸಣ್ಣ ವಯಸ್ಸಿನ ಯುವಕನೊಬ್ಬ ತನ್ನನ್ನು ತಾನು WWE ಖ್ಯಾತಿಯ ಜಾನ್ ಸೀನಾ ಎಂದುಕೊಂಡು  ಸ್ಟಂಟ್ ಮಾಡಿ ಕಾಲಿನಿಂದ ಗುದ್ದಿ ಕಾರಿನ ಗಾಜು  ಪುಡಿ  ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ಈ ಯುವಕನ ಅವಾಂತರದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. 

Viral Video: ಇದು ಎಣ್ಣೆ​​​​​ ಎಫೆಕ್ಟ್​​, ಕಾಲಿನಲ್ಲಿ ಒಂದು ಡಿಚ್ಚಿ, ಕಾರಿನ ಗಾಜು ಪುಡಿ ಪುಡಿ
ವೈರಲ್​​ ವಿಡಿಯೋ
Edited By:

Updated on: Feb 16, 2024 | 5:27 PM

ಮದ್ಯದ ಅಮಲಿನಲ್ಲಿ ಕುಡುಕರು ಮಾಡುವ ಎಡವಟ್ಟುಗಳು ಒಂದೆರಡಲ್ಲ. ಸಾರಾಯಿ ಕಿಕ್ ಏರಿದಾದ  ಆತ ಏನು ಮಾಡುತ್ತಿದ್ದಾನೆ ಎಂಬುದು ಅವನಿಗೆಯೇ ಅರಿವಿರುವುದಿಲ್ಲ. ಅನೇಕರು  ನಶೆ ಅಮಲಿನಲ್ಲಿ ಇತರರನ್ನು ಅವಾಚ್ಯ ಪದಗಳನ್ನು ಬಳಸಿ ಬಾಯಿಗೆ ಬಂದಂತೆ ನಿಂದಿಸುವುದು, ಜಗಳವಾಡುವ, ಬೇರೆಯವರ ವಸ್ತುಗಳನ್ನು ಹಾಳು ಮಾಡುವ ಮತ್ತು ಬೀದಿ ರಂಪಾಟ ಮಾಡುವ ಕೆಲಸ ಮಾಡುತ್ತಿರುತ್ತಾರೆ. ಹೀಗೆ ಕುಡುಕರ ಅವಾಂತರಗಳು  ಒಂದೇ ಎರಡೇ… ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಂತೂ ಇವರುಗಳ ಮಂಗನಾಟ ತುಸು ಹೆಚ್ಚೇ ಇರುತ್ತೆ. ಕುಡುಕರ ಅವಾಂತರಗಳ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಈಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಯುವಕನೊಬ್ಬ  ಗುಂಡಿನ ಮತ್ತಿನಲ್ಲಿ ತನ್ನನ್ನು ತಾನು WWE ಸೂಪರ್ ಸ್ಟಾರ್ ಎಂದು ಭಾವಿಸಿ, ಯಾರದ್ದೋ ಕಾರಿನ ಮೇಲೆ ಸ್ಟಂಟ್ ಮಾಡುತ್ತಾ, ಕಾರಿನ ಗಾಜನ್ನು ಪುಡಿ ಪುಡಿ ಮಾಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಈತನ ಹುಚ್ಚಾಟವನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಗರದ ಬೀದಿ ಬದಿಯ ಅಂಗಡಿಯ ಪಕ್ಕದಲ್ಲಿ ನಿಂತಿದ್ದಂತಹ ಪಾನಮತ್ತ ಯುವಕ ಕಾರಿನ ಮೇಲೆ ಜಿಗಿದು, ಕಸರತ್ತು ಮಾಡಿ ಕಾರಿನ ಗಾಜನ್ನು ಪುಡಿ ಮಾಡುತ್ತಿರುವ  ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು @shivans_king_83 ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, “ನಶೆ ಗುಂಗಿನ ಅಡ್ಡ ಪರಿಣಾಮ” ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಯಾವುದೋ ನಗರದ ಬೀದಿಯಲ್ಲಿ ನಶೆಯ ಅಮಲಿನಲ್ಲಿ ಯುವಕನೊಬ್ಬ ಮಂಗಾಟವಾಡಿರುವುದನ್ನು ಕಾಣಬಹುದು. ಯಾವುದೋ ಅಂಗಡಿಯ ಮಂಗನಾಟವಾಡುತ್ತಾ ನಿಂತಿದ್ದ ಆ ಯುವಕ ದೂರದಲ್ಲಿ ನಿಲ್ಲಿಸಿದ್ದ ಕಾರ್ ಒಂದನ್ನು ನೋಡಿ ಅದೇನಾಯಿತೋ ಗೊತ್ತಿಲ್ಲ, ತಕ್ಷಣ ತನ್ನನ್ನು ತಾನು WWE ಸ್ಟಾರ್ ಏಂದು ಭಾವಿಸಿ ಓಡಿಕೊಂಡು ಹೋಗಿ ಆ ಕಾರಿನ ಮೇಲೆ ಪಲ್ಟಿ ಹೊಡೆದಿದ್ದಾನೆ. ಅಷ್ಟೇ ಸಾಲದ್ದಕ್ಕೆ ಕಾರಿನ ಗಾಜನ್ನು ಸಹ ಪುಡಿ ಮಾಡಿದ್ದಾನೆ.

ಇದನ್ನೂ ಓದಿ: ಅಬ್ಬಬ್ಬಾ! ಮಿರ್ಚಿ ಬಜ್ಜಿ ತಿಂದಂಗೆ ಜಿರಳೆ ಫ್ರೈ ಸವಿದ ಯುವತಿ

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 23 ಸಾವಿರಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ತರಹೇವಾರಿ ಕಮೆಂಟ್ಸ್ ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಇದು ಹೈದರಾಬಾದಿನ ಮೆಹದಿಪಟ್ಟಣಂ ಅಲ್ಲಿ ನಡೆದ ಘಟನೆ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಶೆಯಲ್ಲಿದ್ದರೂ ಆತನ ಸ್ಟಂಟ್ ಅದ್ಭುತವಾಗಿತ್ತುʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈತ ತನ್ನನ್ನು ತಾನು ಜಾನ್ ಸೀನಾ ಎಂದು ಭಾವಿಸಿರಬೇಕುʼ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಅನೇಕರು ಈ ಕುಡುಕರು ಮಾಡುವಂತಹ ಅವಾಂತರಗಳು ಅಷ್ಟಿಷ್ಟಲ್ಲಾ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ