Viral Video : ಒಮ್ಮೆ ನೀವು ಬೆಕ್ಕನ್ನು ಮುದ್ದಿನಿಂದ ಸವರಿದಿರೋ ಅದು ನಿಮ್ಮ ಖಾಯಂ ದೋಸ್ತ್. ಅಕ್ಕರೆಯಿಂದ ಊಟ ಹಾಕಿದಿರೋ ಮರುದಿನ ನಿಮ್ಮ ಮನೆ ಬಾಗಿಲಿಗೆ ಹಾಜರ್. ಇದೀಗ ವೈರಲ್ ಆಗಿರುವ ಈ ಹಳೆಯ ವಿಡಿಯೋ ನೋಡಿ. ಇದು ಪಕ್ಕದ ಮನೆಯ ಬೆಕ್ಕು. ಈ ಮನೆಯವರು ಇದಕ್ಕೆ ಒಮ್ಮೆ ಊಟ ಹಾಕಿದ್ದಾರೆ. ಆದು ಈತನಕವೂ ಹೀಗೇ ದಿನವೂ ಹಿಂಗಾಲಿನಿಂದ ಪಟಪಟನೆ ಬಾಗಿಲು ಬಡಿದು ಅವರ ಗಮನ ಸೆಳೆಯುತ್ತದೆ.
ಈ ಮೊದಲು ಈ ವಿಡಿಯೋ ಅನ್ನು ಟಿಕ್ ಟಾಕ್ನಲ್ಲಿ ಪೋಸ್ಟ್ ಮಾಡಲಾಗಿತ್ತು. ಇದೀಗ ಇನ್ಸ್ಟಾನಲ್ಲಿ ಮತ್ತೆ ವೈರಲ್ ಆಗುತ್ತಿದೆ. ಎಂಥ ಜೋರಾಗಿ ಹಿಂಗಾಲಿನಿಂದ ಬಡಿಯುತ್ತದೆ ನೋಡಿ, ಅದೂ ಹಕ್ಕಿನಿಂದ! ಇದನ್ನು ನೋಡಿದ ಯಾರಿಗೂ ನಗು ತಡೆಯಲಾಗದು.
ಈತನಕ ಈವಿಡಿಯೋ 85,000 ಜನರನ್ನು ತಲುಪಿದೆ. ಅನೇಕರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ‘ನೀವು ಕಿಟಕಿಯಿಂದ ಇಣುಕಿದ್ದನ್ನು ನಾನು ನೋಡಿದೆ, ಅದಕ್ಕೇ ಬಂದಿದ್ದೇನೆ ಬಾಗಿಲು ತೆರೆಯಿರಿ’ ಬೆಕ್ಕಿನ ಪರವಾಗಿ ಹೇಳಿದ್ದಾರೆ ಒಬ್ಬರು. ‘ಬಾಗಿಲು ತಟ್ಟುವುದನ್ನು ಇದರಿಂದಲೇ ಕಲಿಯಬೇಕು, ಬಹಳ ಅದ್ಭುತ’ ಎಂದಿದ್ದಾರೆ ಇನ್ನೊಬ್ಬರು. ‘ಇದರಂತೆ ಇದೇ ವೇಗದಲ್ಲಿ ಜೋರಾಗಿ ನಾವೂ ಹಿಮ್ಮುಖವಾಗಿ ಬಾಗಿಲು ತಟ್ಟಲು ಸಾಧ್ಯವೇ?’ ಎಂದಿದ್ದಾರೆ ಇನ್ನೂ ಒಬ್ಬರು. ‘ಪ್ರಯತ್ನಿಸಿ ನೋಡಿ ಗೊತ್ತಾಗುತ್ತದೆ’ ಎಂದಿದ್ಧಾರೆ ಇದಕ್ಕೆ ಪ್ರತ್ಯುತ್ತರವಾಗಿ ಇನ್ನೊಬ್ಬರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ