Viral Video: ರೆಡ್ ರೋಸ್ ಕೊಟ್ಟು ಹೆಂಡತಿಯ ಮನ ಗೆದ್ದ ಗಂಡ; ರಿಯಾಕ್ಷನ್ ಹೇಗಿತ್ತು ನೋಡಿ

ಯಾವಾಗಲೂ ಸರ್ಪ್ರೈಸ್ ಕೊಡುತ್ತಾ ಹೆಂಡತಿಗೆ ಅಚ್ಚರಿ ಮೂಡಿಸುವುದೆಂದರೆ ಗಂಡನಿಗೆ ಹೆಚ್ಚು ಖುಷಿ. ಹಾಗಾಗಿ ಪ್ರೀತಿಯ ಹೆಂಡತಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟು ಮನ ಕದ್ದಿದ್ದಾರೆ. ನಾಚಿನೀರಾದ ಹೆಂಡತಿಯ ರಿಯಾಕ್ಷನ್ ಇದೀಗ ಫುಲ್ ವೈರಲ್ ಆಗಿದೆ.

Viral Video: ರೆಡ್ ರೋಸ್ ಕೊಟ್ಟು ಹೆಂಡತಿಯ ಮನ ಗೆದ್ದ ಗಂಡ; ರಿಯಾಕ್ಷನ್ ಹೇಗಿತ್ತು ನೋಡಿ
ರೆಡ್ ರೋಸ್ ಕೊಟ್ಟು ಹೆಂಡತಿಯ ಮನ ಗೆದ್ದ ಗಂಡ
Updated By: shruti hegde

Updated on: Oct 11, 2021 | 11:19 AM

ಸಾಮಾನ್ಯವಾಗಿ ಗಂಡ ಕೆಲಸದಿಂದ ಮನೆಗೆ ಬರುವುದನ್ನು ಕಾಯುತ್ತಾ ಬಾಗಿಲಲ್ಲೇ ನಿಂತ ಹೆಂಡತಿ, ಪತ್ನಿಯನ್ನು ಬಹುಬೇಗ ನೋಡುವುದಾಗಿ ಓಡೋಡಿ ಬರುವ ಗಂಡ! ಇವೆಲ್ಲವೂ ಮದುವೆಯ ಹೊಸದರಲ್ಲಿ ಸಾಮಾನ್ಯ. ದಂಪತಿಯ ನಡುವಿನ ಸಂಬಂಧವೇ ಅಂಥದ್ದು! ಯಾವಾಗಲೂ ಹಿತವನ್ನು ಬಯಸುವ, ಆರೋಗ್ಯವನ್ನು ನೋಡಿಕೊಳ್ಳುವ, ಕಷ್ಟ, ಸಂತೋಷದಲ್ಲಿ ಜೊತೆಗಿರುವ ಸಂಗಾತಿಗಾಗಿ ಸರ್ಪ್ರೈಸ್ ಗಿಫ್ಟ್​ಗಳನ್ನು ಕೊಡಲು ಹೆಚ್ಚು ಇಷ್ಟಪಡುತ್ತಾರೆ. ಈ ದಂಪತಿ ಕೂಡಾ ಹಾಗೇ! ಯಾವಾಗಲೂ ಸರ್ಪ್ರೈಸ್ ಕೊಡುತ್ತಾ ಹೆಂಡತಿಗೆ ಅಚ್ಚರಿ ಮೂಡಿಸುವುದೆಂದರೆ ಗಂಡನಿಗೆ ಹೆಚ್ಚು ಖುಷಿ. ಹಾಗಾಗಿ ಪ್ರೀತಿಯ ಹೆಂಡತಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟು ಮನ ಕದ್ದಿದ್ದಾರೆ. ಹೆಂಡತಿಯ ರಿಯಾಕ್ಷನ್ ಇದೀಗ ಫುಲ್ ವೈರಲ್ ಆಗಿದೆ.

ಲಾಹೋರ್​ನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿರುವ ಬಿಲಾಲ್ ತನ್ನ ಪತ್ನಿಗೆ ಸರ್ಪ್ರೈಸ್ ಗಿಫ್ಟ್ ಕೊಡಲು ನಿರ್ಧರಿಸಿದ್ದಾರೆ. ಕೆಲಸದಿಂದ ಈಗತಾನೆ ಮನೆಗೆ ಬಂದಿರುವ ಅವರು ತನ್ನ ಪ್ರೀತಿಯ ಹೆಂಡತಿಯನ್ನು ಹತ್ತಿರಕ್ಕೆ ಕರೆದು ಕೆಂಪು ಗುಲಾಬಿ ಕೊಟ್ಟಿದ್ದಾರೆ. ನಾಚಿನೀರಾದ ಹೆಂಡತಿಯ ರಿಯಾಕ್ಷನ್​​ ಇದೀಗ ಫುಲ್ ವೈರಲ್ ಆಗಿದೆ.

ಮಾರುಕಟ್ಟೆಯಿಂದ ಹಣ್ಣುಗಳು, ಹೂವುಗಳನ್ನು ಖರೀದಿಸಿ ಬಿಲಾಲ್ ಮನೆಗೆ ಬಂದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಗೇಟ್ ತೆಗೆದು ಪತ್ನಿ ಹೊರಬರುತ್ತಿದ್ದಂತೆಯೇ ರೆಡ್ ರೋಸ್​ ಕೊಟ್ಟು ಆಕೆಯನ್ನು ಸಂತೋಪಡಿಸಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮದುವೆಯ ನಂತರದ ಜೀವನ.. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಹೆಂಡತಿ ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೋ ಹಂಚಿಕೊಳ್ಳಲಾಗಿದೆ. ವೈರಲ್ ಆಗಿರುವ ಪೋಸ್ಟ್ ಇದೀಗ 192 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಜತೆಗೆ ನೂರಾರು ಲೈಕ್ಸ್​ಗಳು ಲಭ್ಯವಾಗಿವೆ.

ಇದನ್ನೂ ಓದಿ:

Viral Video: ಪುಟ್ಟ ಗಿಳಿಯೊಂದು ಬೆಕ್ಕನ್ನು ಹೆದರಿಸಿದ ಪರಿ ಹೇಗಿತ್ತು ಗೊತ್ತಾ? ವಿಡಿಯೋ ವೈರಲ್

Viral Video: ಮನೆಯ ಮಾಲೀಕ ತಿಂಡಿ ತಿನ್ನಿಸಿದರೆ ಮಾತ್ರ ತಿನ್ನುತ್ತೇನೆ ಎಂದು ಹಠ ಹಿಡಿದ ಮುದ್ದಾದ ಬೆಕ್ಕಿನ ಮರಿ ವಿಡಿಯೋ ವೈರಲ್

Published On - 11:13 am, Mon, 11 October 21