ಫಸ್ಟ್​​ ನೈಟ್​​ ದಿನವೇ ಪತ್ನಿಯ ಮಾಜಿ ಪ್ರಿಯಕರ ಕಳುಹಿಸಿದ ಬೆತ್ತಲೆ ವೀಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಶೇರ್ ಮಾಡಿದ ಪತಿ

|

Updated on: Apr 26, 2024 | 4:26 PM

ಯುವತಿಗೆ ಈ ಹಿಂದೆ ಯುವಕನೊಂದಿಗೆ ನಿಶ್ಚಿತಾರ್ಥವಾಗಿದ್ದು, ಈ ಸಮಯದಲ್ಲಿ ಆತನೊಂದಿಗೆ ನಗ್ನವಾಗಿ ವಿಡಿಯೋ ಕಾಲ್​​ನಲ್ಲಿ ಮಾತನಾಡಿದ್ದಳು. ಕೆಲ ದಿನಗಳ ಬಳಿಕ ಇವರಿಬ್ಬರ ನಿಶ್ಚಿತಾರ್ಥ ಮುರಿದು ಹೋಗಿತ್ತು. ಇದಲ್ಲದೇ ಯುವತಿ ಬೇರೊಬ್ಬನೊಂದಿಗೆ ಇತ್ತೀಚಿಗಷ್ಟೇ ಮದುವೆಯಾಗಿದ್ದಾಳೆ.

ಫಸ್ಟ್​​ ನೈಟ್​​ ದಿನವೇ ಪತ್ನಿಯ ಮಾಜಿ ಪ್ರಿಯಕರ ಕಳುಹಿಸಿದ ಬೆತ್ತಲೆ ವೀಡಿಯೋ ಸೋಶಿಯಲ್​​ ಮೀಡಿಯಾದಲ್ಲಿ  ಶೇರ್ ಮಾಡಿದ ಪತಿ
Follow us on

ಮಧ್ಯಪ್ರದೇಶ: ಎರಡು ಕುಟುಂಬಗಳ ಸಮ್ಮುಖದಲ್ಲಿ ಮದುವೆ ಅದ್ಧೂರಿಯಾಗಿ ನಡೆದಿತ್ತು. ಆದರೆ ಮದುವೆಯ ಮೊದಲ ರಾತ್ರಿಯಂದು ಮದುಮಗಳು ಪೊಲೀಸ್​​ ಠಾಣೆಯ ಮೆಟ್ಟಿಲೇರಿದ್ದು, ತನಗಾದ ಅನ್ಯಾಯವನ್ನು ದೂರಿನಲ್ಲಿ ದಾಖಲಿದ್ದಾಳೆ. ಫಸ್ಟ್​​ ನೈಟ್​​ ದಿನವೇ ಪತ್ನಿಯ ಮಾಜಿ ಪ್ರಿಯಕರ ಆಕೆಯ ಬೆತ್ತಲೆ ವಿಡಿಯೋ ಕಳುಹಿಸಿದ್ದು,ಈ ವಿಡಿಯೋವನ್ನು ಪತಿ ತನ್ನ ಕುಟುಂಬಸ್ಥರಿಗೆ ಕಳುಹಿಸುವುದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡಿದ್ದಾನೆ. ಈ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.

ಯುವತಿಗೆ ಈ ಹಿಂದೆ ಯುವಕನೊಂದಿಗೆ ನಿಶ್ಚಿತಾರ್ಥವಾಗಿದ್ದು, ಈ ಸಮಯದಲ್ಲಿ ಆತನೊಂದಿಗೆ ನಗ್ನವಾಗಿ ವಿಡಿಯೋ ಕಾಲ್​​ನಲ್ಲಿ ಮಾತನಾಡಿದ್ದಳು. ಕೆಲ ದಿನಗಳ ಬಳಿಕ ಇವರಿಬ್ಬರ ನಿಶ್ಚಿತಾರ್ಥ ಮುರಿದು ಹೋಗಿತ್ತು. ಇದಲ್ಲದೇ ಯುವತಿ ಬೇರೊಬ್ಬನೊಂದಿಗೆ ಇತ್ತೀಚಿಗಷ್ಟೇ ಮದುವೆಯಾಗಿದ್ದಾಳೆ. ಇದರಿಂದ ಕೋಪಗೊಂಡ ಈಹಿಂದೆ ನಿಶ್ಚಿತಾರ್ಥವಾಗಿದ್ದ ಯುವಕ ಆಕೆಯ ನಗ್ನ ವಿಡಿಯೋಗಳನ್ನು ಆಕೆಯ ಪತಿಗೆ ಕಳುಹಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಶಾಕ್​​ ಆದ ಪತಿ ತನ್ನ ಪತ್ನಿಯ ಅಶ್ಲೀಲ ವೀಡಿಯೊವನ್ನು ಕುಟುಂಬದ ಸದಸ್ಯರಿಗೆ ಕಳುಹಿಸಿದ್ದಾನೆ. ಇದಲ್ಲದೇ ಸೋಶಿಯಲ್​ ಮೀಡಿಯಾಗಳಲ್ಲೂ ಹಂಚಿಕೊಂಡಿದ್ದಾನೆ.

ಮತ್ತಷ್ಟು ಓದಿ: 110 ವರ್ಷ ವಯಸ್ಸು, ಒಬ್ಬರೇ ಇರ್ತಾರೆ, ಕಾರು ಓಡಿಸ್ತಾರೆ, ಯಾವುದೇ ರೋಗ ಇಲ್ಲ, ಆಹಾರ ಕ್ರಮ ಹೇಗಿದೆ ಗೊತ್ತೇ?

ವಿಡಿಯೋ ಎಲ್ಲೆಡೆ ಶೇರ್​ ಆಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಯುವತಿ ತನ್ನ ಪೋಷಕರೊಂದಿಗೆ ಪೊಲೀಸ್​​ ಠಾಣೆಯ ಮೆಟ್ಟಿಲೇರಿದ್ದು, ತನಗಾದ ಅನ್ಯಾಯದ ವಿರುದ್ದ ದೂರು ನೀಡಿದ್ದಾಳೆ. ಇದೀಗಾ ವಿಡಿಯೋ ಕಳುಹಿಸಿದ ಮಾಜಿ ಪ್ರಿಯಕರ, ಪತಿ ಹಾಗೂ ಪತಿಯ ಪೋಷಕರ ವಿರುದ್ಧ ಕೇಸು ದಾಖಲಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ