ನಕಲಿ ಬೆತ್ತಲೆ ವಿಡಿಯೋ ತೋರಿಸಿ ಶಿಕ್ಷಕನಿಂದ 9 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿದ ಸೈಬರ್ ಖದೀಮರು
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರವಾಸಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿ.ಜಗದೀಶ್ ಎನ್ನುವವರು ವಂಚನೆ ಹಾಗೂ ಬ್ಲಾಕ್‍ಮೇಲ್‍ಗೊಳಗಾದವರು. ಸೋರಿಯಾಸಿಸ್ ಕಾಯಿಲೆಗೆ ಚಿಕಿತ್ಸೆ ನೀಡುವುದಾಗಿ ಫೇಸ್ಬುಕ್ನಲ್ಲಿ ಲಿಂಕ್ ಒಂದು ಹರಿದಾಡುತ್ತಿತ್ತು. ಲಿಂಕ್‍ನವರು ಹೇಳಿದ ಹಾಗೆ ಅರೆಬೆತ್ತಲಾಗಿ ಜಗದೀಶ ವಿಡಿಯೋ ಕಳಿಸಿದ್ದಾನೆ. ಅದೇ ವಿಡಿಯೋವನ್ನು ಬಳಸಿಕೊಂಡು ಶಿಕ್ಷಕನ ನಕಲಿ ಬೆತ್ತಲೆ ವಿಡಿಯೋ ಸೃಷ್ಠಿಸಿದ್ದಾರೆ.
ಚಿಕ್ಕಬಳ್ಳಾಪುರ, ಮಾರ್ಚ್ 25: ಚರ್ಮರೋಗ ಕಾಯಿಲೆ ವಾಸಿಗೆಂದು ಫೇಸ್ಬುಕ್ನಲ್ಲಿ ಸಿಕ್ಕ ಲಿಂಕ್‍ನ್ನು ಬಳಸಿ ಅರೆಬೆತ್ತಲಾದ ಶಿಕ್ಷಕನ ವಿಡಿಯೋವನ್ನೇ ಸಂಪೂರ್ಣಬೆತ್ತಲೆ ವಿಡಿಯೋದಂತೆ ಸೃಷ್ಠಿಸಿ, ಆತನಿಂದ 9 ಲಕ್ಷದ 99 ಸಾವಿರ ರೂ. ಹಣವನ್ನು ಪಡೆದು ಬ್ಲಾಕ್‍ಮೇಲ್ (Blackmail) ಮಾಡುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಿಲ್ಲೆಯ ಗೌರಿಬಿದನೂರು ನಗರವಾಸಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿ.ಜಗದೀಶ್ ಎನ್ನುವವರು ವಂಚನೆ ಹಾಗೂ ಬ್ಲಾಕ್‍ಮೇಲ್‍ಗೊಳಗಾದವರು.
ಅಸಲಿಗೆ ಜಗದೀಶ್‍ಗೆ ಸೋರಿಯಾಸಿಸ್ ಎನ್ನುವ ಚರ್ಮರೋಗ ಕಾಯಿಲೆ ಇದೆ. ಸೋರಿಯಾಸಿಸ್ ಕಾಯಿಲೆಗೆ ಚಿಕಿತ್ಸೆ ನೀಡುವುದಾಗಿ ಫೇಸ್ಬುಕ್ನಲ್ಲಿ ಲಿಂಕ್ ಒಂದು ಹರಿದಾಡುತ್ತಿತ್ತು. ಲಿಂಕ್‍ನವರು ಹೇಳಿದ ಹಾಗೆ ಅರೆಬೆತ್ತಲಾಗಿ ಜಗದೀಶ ವಿಡಿಯೋ ಕಳಿಸಿದ್ದಾನೆ. ಅದೇ ವಿಡಿಯೋವನ್ನು ಬಳಸಿಕೊಂಡು ಶಿಕ್ಷಕನ ನಕಲಿ ಬೆತ್ತಲೆ ವಿಡಿಯೋ ಸೃಷ್ಠಿಸಿದ್ದಾರೆ.
ಇದನ್ನೂ ಓದಿ: ಆನೇಕಲ್: ಮೊಬೈಲ್ಗಾಗಿ ಸೋದರಿಯರಿಬ್ಬರ ಜಗಳ: ಅತ್ತಿಗೆಯನ್ನೇ ಹತ್ಯೆಗೈದ ಮೈದುನ
ಅದನ್ನೇ ಮುಂದಿಟ್ಟುಕೊಂಡ ಸೈಬರ್ ವಂಚಕರು ಶಿಕ್ಷಕ ಜಗದೀಶ್‍ನಿಂದ ವಿವಿಧ ದಿನಾಂಕಗಳಲ್ಲಿ ವಿವಿಧ ಅಕೌಂಟ್‍ಗಳಿಗೆ ರೂ. 9,99000 ಹಣವನ್ನು ಹಾಕಿಸಿಕೊಂಡಿದ್ದಾರೆ. ಕೊನೆಗೆ ತಾನು ಮೋಸ ಹೋಗಿರುವುದನ್ನು ಅರಿತುಕೊಂಡ ಶಿಕ್ಷಕ ಜಗದೀಶ್ ನ್ಯಾಯ ಕೊಡಿಸುವಂತೆ ಚಿಕ್ಕಬಳ್ಳಾಪುರ ಸೈಬರ್ ಠಾಣೆಯ ಮೆಟ್ಟಿಲೇರಿದ್ದಾರೆ.
ನಕಲಿ ಡಿಟರ್ಜೆಂಟ್ ವಸ್ತುಗಳ ಕಲಬೆರಕೆಯ ದೊಡ್ಡ ಜಾಲವೇ ಪತ್ತೆ
ನೆಲಮಂಗಲ: ಅರ್ಪಿಕ್, ಲೈಸಲ್, ಕೂಲೀನ್, ಏನ್ ಬಳಸಿದ್ರು ಗಲೀಜು ಹೋಗುತ್ತಿಲ್ಲ. ರಾತ್ರಿ ಮಲಗುವ ಅಂದ್ರೆ ಸೊಳ್ಳೆ ಕಾಟಕ್ಕೆ ಗುಡ್ ನೈಟ್ ಬಳಸಿದ್ರು ಸೊಳ್ಳೆಯಿಂದ ಮುಕ್ತಿ ಸಿಗುತ್ತಿಲ್ಲ ಎಂದಾದರೆ ನೀವು ಬಳಸುತ್ತಿರುವ ಡಿಟರ್ಜೆಂಟ್ ಹಾಗೂ ಗುಡ್ ನೈಟ್ ಅಸಲಿ ಅಲ್ಲದೆ ನಕಲಿ ಆಗಿರಬಹುದು. ಬ್ರಾಂಡೆಡ್ ಪದಾರ್ಥಗಳಿಗೆ ಅಗ್ಗದ ನಕಲಿ ರಾಸಯನಿಕಗಳನ್ನು ಕಲಬೆರಕೆ ಮಾಡಿ ಸುಲಭವಾಗಿ ಹಣ ಮಾಡುವ ದೊಡ್ಡ ಜಾಲವೂ ಪೂಲೀಸ್ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಇದನ್ನೂ ಓದಿ: ಪತ್ನಿ ಮೇಲೆ ಪತಿಯಿಂದ ಹಲ್ಲೆ: ತಡೆಯಲು ಬಂದ ಪೊಲೀಸರ ಕೈಕಚ್ಚಿ ಹಲ್ಲೆಗೆ ಯತ್ನ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿ ಗ್ರಾಮದಲ್ಲಿ ಈ ಅಕ್ರಮದ ಗೋಡಾನ್ ನಲ್ಲಿ ಈ ಅಡ್ಡೆ ನಡೆಯುತ್ತಿತ್ತು. ಪೊಲೀಸ್ ಹಾಗೂ ಐಪಿ ಇನ್ವೆಸ್ಟಿಗೇಷನ್ ಡಿಟೆಕ್ಟಿವ್ ಸೆರ್ವಿಸ್ ಜಂಟಿ ಕಾರ್ಯಚರಣೆ ನಡೆಸಿದಾಗ ಅಕ್ರಮ ಜಾಲ ಕಂಡು ಪೊಲೀಸರೆ ಶಾಕ್ ಆಗಿದ್ದರು.
ಬ್ರಾಂಡೆಡ್ ಡಿಟರ್ಜೆಂಟ್ ವಸ್ತುಗಳನ್ನ ನಕಲು ಮಾಡುತ್ತಿದ್ದ ಗೋಡಾನ್ ಮೇಲೆ ದಾಳಿ ನಡೆಸಿ ಮಹೇಶ್ ಗಾಂಧಿ, ಅಶ್ವಿನ್, ನಿರ್ಮಲ್ ಎಂಬ ಮೊವರನ್ನ ದಾಳಿಯ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದರು. ಹೊಸಕೋಟೆ ಬಳಿಯ ಅವಲಹಳ್ಳಿಯ ತಯಾರಕ ಘಟಕದಿಂದ ಲೋಡ್‌ಗಟ್ಟಲೇ ನಕಲಿ ಡಿಟರ್ಜೆಂಟ್ ಕೆಮಿಕಲ್ ಖರೀದಿ ಮಾಡಿ ಬ್ರಾಂಡೆಡ್ ಬಾಕ್ಸ್ನಲ್ಲಿ ಪ್ಯಾಕ್ ಮಾಡಿ ನಕಲಿಯಾಗಿ ಪ್ರಿಂಟ್ ಮಾಡಿದ ಬ್ರಾಂಡೆಡ್ ಲೇಬಲ್ ಬಳಸಿ ಡಿಟರ್ಜೆಂಟ್ ಬಾಟಲ್ ಗಳಲ್ಲಿ ತುಂಬಿ ನಕಲಿ ಬ್ರಾಂಡ್‌ಗಳನ್ನು ಅಸಲಿ ಬ್ರಾಂಡ್ ಆಗಿ ಕನ್ವರ್ಟ್ ಮಾಡಿ ಬೆಂಗಳೂರು ನಗರ, ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಮಾರಾಟ ಮಾಡಿ ಕೋಟ್ಯಾಂತರ ಹಣ ಗಳಿಸುತ್ತಿದ್ದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.