ಪತ್ನಿ ಮೇಲೆ ಪತಿಯಿಂದ ಹಲ್ಲೆ: ತಡೆಯಲು ಬಂದ ಪೊಲೀಸರ ಕೈಕಚ್ಚಿ ಹಲ್ಲೆಗೆ ಯತ್ನ
ಪತ್ನಿ ಮೇಲೆ ಹಲ್ಲೆ ಮಾಡಿದ್ದ ಪತಿಯನ್ನ ಹಿಡಿಯಲು ಯತ್ನಿಸಿದಾಗ ಪೊಲೀಸರ ಕೈಕಚ್ಚಿ ಹಲ್ಲೆಗೆ ಯತ್ನಿಸಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ನಡೆದಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಆರೋಪದಡಿ ಪತಿಯನ್ನು ಬಂಧಿಸಲಾಗಿದೆ. ಸದ್ಯ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನೆಲಮಂಗಲ, ಮಾರ್ಚ್ 25: ಪತ್ನಿ ಮೇಲೆ ಹಲ್ಲೆ ಮಾಡಿದ್ದ ಪತಿಯನ್ನ ಹಿಡಿಯಲು ಯತ್ನಿಸಿದಾಗ ಪೊಲೀಸರ (police) ಕೈಕಚ್ಚಿ ಹಲ್ಲೆಗೆ ಯತ್ನಿಸಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ನಡೆದಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಆರೋಪದಡಿ ಪತಿ ನವೀನ್ ಕುಮಾರ್ (30) ಎಂಬಾತನನ್ನು ಬಂಧಿಸಲಾಗಿದೆ. ಪತ್ನಿ ರಶ್ಮಿ ಮೇಲೆ ಪತಿ ನವೀನ್ ಕುಮಾರ್ ಕ್ಷುಲ್ಲಕ ಕಾರಣಕ್ಕಾಗಿ ಕಾರಿನ ಗ್ಲಾಸ್ ಹೊಡೆದು ಹಲ್ಲೆ ಮಾಡಿದ್ದಾನೆ. ಈ ವೇಳೆ ಪತ್ನಿ ರಶ್ಮಿ 112ಗೆ ತುರ್ತು ಕರೆ ಮಾಡಿದ್ದಾರೆ. ಕರೆ ಆಧರಿಸಿ 112 ಇಆರ್ಎಸ್ಎಸ್ ಮಹಾಂತೇಶ್ ಗುಣಕಿ ಹಾಗೂ ಚಂದ್ರು ಎಂಬುವವರು ಬಂದಿದ್ದಾರೆ. ಅವರ ಮೇಲೂ ಹಲ್ಲೆಗೆ ಯತ್ನಿಸಲಾಗಿದೆ. ಸದ್ಯ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಗ್ರಾಮಸ್ಥರ ಮುಂದೆಯೇ ಮಚ್ಚಿನಿಂದ ವ್ಯಕ್ತಿ ಮೇಲೆ ಹಲ್ಲೆ
ರಾಮನಗರ: ಗ್ರಾಮಸ್ಥರ ಮುಂದೆಯೇ ಮಚ್ಚಿನಿಂದ ವ್ಯಕ್ತಿ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ರಾಮನಗರ ತಾಲೂಕಿನ ಪಾದರಹಳ್ಳಿಯಲ್ಲಿ ನಡೆದಿದೆ. ಮಚ್ಚಿನಿಂದ ಗೋವಿಂದರಾಜು ಎಂಬುವರ ಮೇಲೆ ರಮೇಶ್.ಜಿ.ಟಿ ಹಲ್ಲೆ ಮಾಡಿದ್ದಾರೆ. ಗಾಯಾಳು ಗೋವಿಂದ್ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸಾಲಬಾಧೆ ತಾಳಲಾರದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ
ದಾವಣಗೆರೆ: ಸಾಲಬಾಧೆ ತಾಳಲಾರದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ದಾವಣಗೆರೆ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ. ಭೀಮಾನಾಯ್ಕ್ (38) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತ. ಜಮೀನಿನಲ್ಲಿ ಮೆಕ್ಕೆಜೋಳ ಬೆಳೆ ಹಾಕಿದ್ದು ಮಳೆ ಇಲ್ಲದೆ ಹಿನ್ನೆಲೆ ನಷ್ಟ ಅನುಭವಿಸಿದ್ದ ರೈತ. ಹೆಚ್ಡಿಎಫ್ಸಿ ಬ್ಯಾಂಕ್ನಲ್ಲಿ 1.70 ಲಕ್ಷ ರೂ. ಧರ್ಮಸ್ಥಳ ಸಂಘದಲ್ಲಿ 3 ಲಕ್ಷ ರೂ. ಗ್ರಾಮೀಣ ಕೂಟದಲ್ಲಿ 40 ಸಾವಿರ ರೂ. ಸೇರಿದಂತೆ ಹಲವರು ಕಡೆಗಳಲ್ಲಿ ಸುಮಾರು 12 ಲಕ್ಷ ರೂ. ಸಾಲ ಮಾಡಿದ್ದ ರೈತ.
ಇದನ್ನೂ ಓದಿ: ಆಟೋ ಪಾರ್ಕಿಂಗ್ ವಿಚಾರಕ್ಕೆ ನಡೆದ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್; ಭಗವಾ ಧ್ವಜದ ಬಗ್ಗೆ ಪ್ರಸ್ತಾಪ, ಮೂವರು ಅರೆಸ್ಟ್
ಮಳೆ ಇಲ್ಲ, ಬೆಳೆ ಇಲ್ಲದ ಕಾರಣ ಸಾಲ ತೀರಿಸಲಾಗದೆ ಮನನೊಂದಿದ್ದ ರೈತ ಭೀಮಾನಾಯ್ಕ್, ಇಂದು ಬೆಳಗ್ಗೆ ಕೂಡ ಸಾಲಗಾರರು ಮನೆ ಮುಂಭಾಗ ಬಂದು ಗಲಾಟೆ ಮಾಡಿದ್ದರು. ಇದರಿಂದ ಮನನೊಂದು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾವಣಗೆರೆ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರೈತನ ಮೃತದೇಹ ರವಾನೆ ಮಾಡಲಾಗಿದೆ. ಮಾಯಕೊಂಡ ಶಾಸಕ ಕೆ ಎಸ್ ಬಸವಂತಪ್ಪ ಭೇಟಿ ನೀಡಿ ಸಾಂತ್ವನ ಹೇಳಿದರು. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.