AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಕಾರ್ಯಾಚರಣೆ: 2.83 ಕೋಟಿ ಮೌಲ್ಯದ ವಸ್ತುಗಳು ಪತ್ತೆ

ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ನಂತರ ಚುನಾವಣಾ ಅಕ್ರಮಗಳನ್ನು ತಡೆಯಲು ಫ್ಲೈಯಿಂಗ್ ಸ್ಕ್ವಾಡ್, ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ಚೆಕ್​ಪೋಸ್ಟ್​ಗಳನ್ನು ಹಾಕಿ ವಾಹನಗಳನ್ನು ತಪಾಸನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ತಪಾಸಣೆ ವೇಳೆ ಹಣ, ಸೀರೆಗಳ ಜೊತೆಗೆ ಹಲವೆಡೆ ಡ್ರಗ್ಸ್, ಮದ್ಯದ ಬಾಟಲಿಗಳು, ಚಿನ್ನ ಮತ್ತು ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. ಹಾಗಾದರೆ ಈವರೆಗೆ ಏನೆಲ್ಲಾ ಜಪ್ತಿ ಮಾಡಲಾಗಿದೆ? ಇಲ್ಲಿದೆ ಮಾಹಿತಿ.

ಬೆಂಗಳೂರಿನಲ್ಲಿ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಕಾರ್ಯಾಚರಣೆ: 2.83 ಕೋಟಿ ಮೌಲ್ಯದ ವಸ್ತುಗಳು ಪತ್ತೆ
ಸಾಂದರ್ಭಿಕ ಚಿತ್ರImage Credit source: iStock Photo
ರಾಚಪ್ಪಾಜಿ ನಾಯ್ಕ್
| Edited By: |

Updated on: Mar 25, 2024 | 9:44 PM

Share

ಬೆಂಗಳೂರು, ಮಾ.25: ಲೋಕಸಭೆ ಚುನಾವಣೆಗೆ (Lok Sabha Elections) ದಿನಾಂಕ ಘೋಷಣೆಯಾದ ನಂತರ ಚುನಾವಣಾ ಅಕ್ರಮಗಳನ್ನು ತಡೆಯಲು ಫ್ಲೈಯಿಂಗ್ ಸ್ಕ್ವಾಡ್, ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ಚೆಕ್​ಪೋಸ್ಟ್​ಗಳನ್ನು ಹಾಕಿ ವಾಹನಗಳನ್ನು ತಪಾಸನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ (Bengaluru) ತಪಾಸಣೆ ವೇಳೆ ಹಣ, ಸೀರೆಗಳ ಜೊತೆಗೆ ಹಲವೆಡೆ ಡ್ರಗ್ಸ್, ಮದ್ಯದ ಬಾಟಲಿಗಳು, ಚಿನ್ನ ಮತ್ತು ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. ಹಾಗಾದರೆ ಈವರೆಗೆ ಏನೆಲ್ಲಾ ಜಪ್ತಿ ಮಾಡಲಾಗಿದೆ? ಇಲ್ಲಿದೆ ಮಾಹಿತಿ.

ಈವರೆಗೆ ಬೆಂಗಳೂರಿನಲ್ಲಿ 67 ಲಕ್ಷಕ್ಕೂ ಅಧಿಕ ನಗದು ವಶಕ್ಕೆ ಪಡೆಯಲಾಗಿದೆ. 1 ಕೋಟಿ 54 ಲಕ್ಷದ 65 ಸಾವಿರದ 719 ರೂಪಾಯಿ ಮೌಲ್ಯದ ಮದ್ಯ ಸೀಜ್ ಮಾಡಲಾಗಿದೆ. 3 ಲಕ್ಷದ 96 ಸಾವಿರದ 300 ರೂಪಾಯಿ ಮೌಲ್ಯದ 21.99 kg ಮಾದಕ ವಸ್ತು ಸೀಜ್ ಮಾಡಲಾಗಿದೆ. 18 ಕೆ.ಜಿ.ಗೂ ಅಧಿಕ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: ಚುನಾವಣಾ ಆಯೋಗ ಭರ್ಜರಿ ಬೇಟೆ: ಆರೇ ದಿನಗಳಲ್ಲಿ 9 ಕೋಟಿ ರೂ.ಗೂ ಹೆಚ್ಚು ನಗದು, ಚಿನ್ನಾಭರಣ ವಶ

ಈವರೆಗೆ ದಾಖಲೆಗಳಿಲ್ಲದೆ ಚಿನ್ನ, ನಗದು, ಮದ್ಯ ಇತ್ಯಾದಿಗಳನ್ನು ಸಾಗಾಟ ಮಾಡಲು ಬಳಕೆ ಮಾಡಿದ್ದ 22 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಒಟ್ಟು 2 ಕೋಟಿ 83 ಲಕ್ಷದ 83 ಸಾವಿರದ 179 ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ ಸಂಬಂಧಪಟ್ಟವರ ವಿರುದ್ಧ ದೂರು ದಾಖಲಿಸಲಾಗಿದೆ. ಈವರೆಗೆ 240 ಎಫ್ಐಆರ್ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ